Friday 20 March 2015

ಅಕ್ಷಯ ಆಗೋದೆಲ್ಲಾ ಅದೃಷ್ಟನೇ  ಅಲ್ಲ ಕೆಲವರ ಪಾಲಿಗೆ ದುಖ:, ಖಿನ್ನತೆ ಅನ್ನೋ ದುರಾದೃಷ್ಟಗಳು  ಅಕ್ಷಯವಾಗುತ್ತಾ ಹೋಗುತ್ತವೆ . ಯಾರೇ ಆಗಲಿ ಜೀವನದಲ್ಲಿ ಗೆಲ್ಲ ಬೇಕಾದರೆ ಮೆದುಳಿನ ಮಾತನ್ನೇ ಕೇಳಬೇಕು , ಮನಸಿನ ಮಾತುಗಳು ನಮ್ಮನ್ನು ಭಾವುಕರನ್ನಾಗಿ ಮಾಡುತ್ತವೆ, ಈ ಭಾವನೆಗಳು ಒಬ್ಬಂಟಿ ಬಂಡೆ  ಮೇಲೆ ಸದಾ  ದಾಳಿ ಇಡುವ ಅಲೆಗಳ ಥರ,  ಬಂಡೆಯಂತ ಬಂಡೆಯನ್ನೇ ಕರಗಿಸುತ್ತವೆ.ಅಂಥ  ಭಾವನೆಯನ್ನು ತೊಳೆದುಹಾಕುವಲ್ಲಿ  ಕಣ್ಣೀರಿನ ಅಲೆಯ ಪ್ರಯತ್ನವೂ ವ್ಯರ್ಥ, ಎಷ್ಟೇ ತೊಳೆದರೂ ಭಾವನೆಗಳು ಬಣ್ಣಗೆಡು ವುದಿಲ್ಲ .ನಿಜವಾದ ಪ್ರೀತಿ ಅನುಭಂದ ಇದ್ದಲ್ಲೆಲ್ಲ ನೆನಪುಗಳ ತಾಕತ್ತು ಜಾಸ್ತಿ , ಆದ್ರೆ ಈ ಕಾಲದ ತಾಕತ್ತು ಇನ್ನು ಜಾಸ್ತಿ , ಅದೆಷ್ಟು ಅಂದ್ರೆ ಮರೆಯುವ ಗೋಜಿಗೆ ಹೋಗದ ಮೂರ್ಖ ಮನಸನ್ನೂ ಅದರಿಂದ ಹೊರಗಡೆ ಎಳೆಯುವಷ್ಟು.ಸತ್ತಾದರೂ ಬದುಕಬೇಕುಎನ್ನೋ ಛಲ ತುಂಬುವಷ್ಟು. ಸೊ ... ಫೈನಲಿ ಏನಾಗಲಿ ಮುಂದೆ ಸಾಗು ನೀ.......

Thursday 19 March 2015

ಏನಿದ್ದರೇನು? ನಿನ್ನೆದೆಯ ನದಿಯ ಮೇಲೆ ಸುಮ್ಮನೆ ತೇಲುವ ಕಮಲ ನಾನು, ಇಳಿಯಲಾಗದು ಎಂದಿಗೂ ನಿನ್ನೆದೆಯೊಳಗೆ  ಆ ಮೀನಿನಂತೆ. ಮೊದಲು ಹುಟ್ಟಿದ್ದು ನಿನ್ನೆದೆಯಲ್ಲೇ ಆದರೂ ಮೀನಿನಂತೆ ಮುದ ಕೊಡಲಾರೆ . ಹೆಜ್ಜೆ ಹೆಜ್ಜೆಗೂ ಮುತ್ತಿಟ್ಟು. ನೀ ನಡುಗಿದಾಗಲೆಲ್ಲ ಕಂಪಿಸಬಲ್ಲೆ ಅಷ್ಟೇ 
ಈ ಪ್ರೀತಿ ಅನ್ನೋದು ಬೆಂಕಿ ಇದ್ದ ಹಾಗೆ ಒಲಿದವರ ಪಾಲಿಗೆ, ಬಾಳು ಬೆಳಗೋ ನಂದಾದೀಪವಾದರೆ ಸಿಗದವರ ಪಾಲಿಗೆ ನಾವೇ ಗೀರಿ ಕೈಯ್ಯಲ್ಲೇ ಹಿಡ್ಕೊಂಡ ಬೆಂಕಿಕಡ್ಡಿ ಇದ್ದಂಗೆ, ಪ್ರೀತಿನೇ ಉರಿದು ಬಿದ್ದ ಮೇಲು ಉರಿ ತಪ್ಪಲ್ಲ. 

Tuesday 22 July 2014

ಟೈಟಲ್ ಇಲ್ಲದ ನನ್ನ ಟೈಟಾನಿಕ್ ಗೀತೆ ;) ;)


ಬಟ್ಟಲ ಕಂಗಳ
ತೊಟ್ಟಿಲ ಕಂದನ
ತುಟಿಯ ತುಂಟುನಗೆ
ನೀ ತಾನೆ?

ಕಣ್ಣಿನ ಕಣಿವೆಯ
ಕೋಟಿ ಕನಸುಗಳ ಕದ್ದು
ನನಸು ಮಾಡುವ
ನಲ್ಲ ನೀ ತಾನೆ?

ಈ ಮಲ್ಲಿಗೆ ಆಡುವ
ಮಳ್ಳಿ ಮಾತಿಗೆ ತಲೆಯಾಡಿಸಿ
ಮರುಳಾದಂತೆ ನಟಿಸುವ
ಮಳ್ಳ ನೀ ತಾನೆ?

ರಂಗೋಲಿ ಬಿಡಿಸುವ
ಬೆರಳಿನ ಚಂದಕೆ
ಕಾಲುಂಗುರ ತಂದವ
ನೀ ತಾನೆ?

ಬಳ್ಳಿ ನಡುವಿನ
ನರ್ತನಕೆ ಮಣಿದು
ಬೆಳ್ಳಿ ಡಾಬಾದವ
ನೀ ತಾನೆ ?

ಹನುಮನ ಬಾಲದ
ದಿನಸಿಯ ಪಟ್ಟಿಗೆ
ಕಿವಿ ಕೊಡದ
ಜಾಣ ಕಿವುಡ
ನೀ ತಾನೆ?

ಮುಚ್ಚಿದ ಕಿವಿಯ
ನಾ ಕೋಪದೆ ಹಿಂಡಲು
ಹೊಡೆಯಲು ಬಂದವ
ನೀ ತಾನೆ?

ಕಟುಕನ ಕತ್ತಿಯೇ
ಜಾರುವ ಪರಿಯಲಿ
ಒಲವನು ಕೊಡುವವಳು
ನಾ ತಾನೆ?

ನೀ ಕಟ್ಟಿದ ತಾಳಿಗೆ
ತಾಳಿ ಬಾಳಿದ
ನಿನ್ನ ತವರಿನ ತಾಯಿ
ನಾ ತಾನೆ?

ಬಾಳ ಎಲೆಯಲಿ
ತನು ಮನವ
ಉಡಬಡಿಸಿ
ಬದುಕ ಹಂಚಿ
ಕೊಂಡವಳು
ನಾ ತಾನೆ?

ಇಂಟೆ ಅನ್ನಕ್ಕೊಂದು
ಮೊಗೆ ನೀರು ಕುಡಿಯುತ
ಬಾಳ್ವೆ ನಡೆಸಿದ
ನಿನ ಬಾಳ ಸಾರಥಿ
ನಾ ತಾನೆ?

ಹೆತ್ತವರೇ ಅರಿಯದ
ನಿನ ಮಗುಮನಸ
ಅರಿತಿರುವ
ನಿನ್ನಿಂದ ಹಡೆದವಳು
ನಾ ತಾನೆ?
//ನಂದಿನಿ//

ಇದಕ್ಕೇಲ್ಲಾ ಯಾರು ಹೊಣೆ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಸಂಕೋಚ ಬಿಟ್ಟು ಓದಿ.

ಇದಕ್ಕೇಲ್ಲಾ ಯಾರು ಹೊಣೆ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಸಂಕೋಚ ಬಿಟ್ಟು ಓದಿ.

ನಾವು ಕೆಲವು ವಿಚಾರಗಳ ಬಗ್ಗೆ  ನಕಾರತ್ಮಕವಾಗಿ ಯೋಚಿಸಿದಾಗ ಮಾತ್ರ ಅವುಗಳಲ್ಲಿರುವ ಲೋಪಗಳನ್ನು ಗುರುತಿಸಲು ಸಾಧ್ಯ. ಹೆಂಗಸರ ಬುದ್ದಿ ಮೊಣಕಾಲವರೆಗೆ ಅನ್ನೋ ಗಾದೆ ಮಾತು ನಿಜವಾದ್ರೂ ಪರ್ವಾಗಿಲ್ಲ. ಕುತ್ತಿಗೆವರೆಗೂ ಯಾರನ್ನು ನಂಬಲು ಹೋಗಬೇಡಿ. ಅದು ಗೆಳೆಯರಾಗಲಿ ಗೆಳತಿಯರಾಗಲಿ ದಾರಿ ತಪ್ಪಿಸುವ ಸ್ನೇಹಿತರಿಂದ ದೂರವಿರಿ. ಕಂಬ ಕಂಡ ತಕ್ಷಣ ಕಾಲು ಎತ್ತುವ ಆ ನಾಯಿಗಳ ಬಾಯಿಂದ ಬರುವ ಮಗಳೇ, ತಂಗಿ ಅಕ್ಕಾ ಎನ್ನುವ ಪದಗಳಿಗೆಲ್ಲಾ  ಬೆಲೆ ಕೊಡಬೇಡಿ, ಇವ ನನ್ನ ಅಣ್ಣ ಎಂದು ಪರಿಚಯ ಮಾಡಿಕೊಡುವ ಆ ವ್ಯಕ್ತಿ,  .ಅಸಲಿಗೆ ಆಕೆಯ ಅಣ್ಣನೇ ಆಗಿರುವುದಿಲ್ಲ.  ಗಮನಿಸಿದಂತೆ, ಕಾಮುಕರ ಕಣ್ಣು ಹೆಚ್ಚು ಬೀಳುವುದು ಔಟಿಂಗ್ ಗಾಗಿ ಬಂದ ಜೋಡಿಗಳ ಮೇಲೆ. ಸಾಮಾನ್ಯವಾಗಿ ಇಂತಹ ಜೋಡಿಗಳು ಮನೆಯಲ್ಲಿ ಹೇಳದೆ ಒಬ್ಬರನ್ನೊಬರು ನಂಬಿ ಬಂದಿರುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಈ ವಿಕೃತ ಪ್ರಕರಣಗಳು ನೆಡೆದಾಗ, ದೂರು ದಾಖಲಿಸುವುದಿರಲಿ ಎಲ್ಲಿಯೂ ಹೇಳಿಕೊಳ್ಳಲು ಆಗುವುದಿಲ್ಲ. ಯಾಕಂದ್ರೆ ಮರ್ಯಾದೆ ಪ್ರಶ್ನೆ!!  ಇಂಥಾ ಎಷ್ಟೋ ಕೇಸುಗಳು ಹೀಗೆ ಮುಚ್ಚಿ ಹೋಗುತ್ತವೆ. ನಿಮ್ಮವ ಅದೆಷ್ಟೇ ಬಲಿಷ್ಟನಾದರೂ ಹತ್ತು ಜನರಿಗ ಹೊಡೆಯುವ ಸಿನಿಮಾ ಹೀರೋ ಆಗಲಾರ ಎಂಬುದು ನಿಮಗೆ ನೆನೆಪಿರಲಿ. ಸಿನಿಮಾ ರೀತಿಯಲ್ಲಿ ನಿಮ್ಮನ್ನು ರಕ್ಷಿಸಲು ಯಾವುದೇ ಶಕ್ತಿಮಾನ್ ಆಗಲಿ ಮಿಸ್ಟರ್. ಇಂಡಿಯಾ ಆಗಲಿ ಬರುವುದಿಲ್ಲ ಎಂಬ ಅರಿವು ನಿಮಗಿರಲಿ. ಈ ಆಟೋ ರಿಕ್ಷಾ ಗಳಲ್ಲಿ ಡ್ರೈವಿಂಗ್ ಲೈಸನ್ಸ್‌ ಡಿಸ್ಪ್ಲೇ ಸಿಸ್ಟಂ ರೂಡಿಯಲ್ಲಿದೆ. ಯಾವುದೆ ಆಟೊ ಹತ್ತಿದ ತಕ್ಷಣ ಲೈಸನ್ಸ್‌ ನಲ್ಲಿ ಇರುವ ಮಾಹಿತಿಗಳನ್ನು ನಿಮ್ಮ ಮೊಬೈಲ್ ಫೋನು ಗಳಲ್ಲಿ ದಾಖಲಿಸಿಕೊಳ್ಳಿ. ಲೈನ್ ನಲ್ಲಿ ಯಾರೂ ಇಲ್ಲದ್ದಿದ್ದರೂ ಸುಮ್ಮನೆ ಕಿವಿಗೆ ಮೊಬೈಲ್ ಇಟ್ಟುಕೊಂಡು, ದಾರಿಯುದ್ದಕ್ಕೂ ಯಾರೊಂದಿಗೋ ಎಲ್ಲಾ ರೂಟ್ಗಳನ್ನು ಹೇಳುತ್ತಾ ಮಾತನಾಡುವಂತೆ ನಟಿಸಿ ನಿಮ್ಮ ದೈರ್ಯ ನೋಡಿ ಅವರಲ್ಲಿ ಭಯ ಹುಟ್ಟುವುದು ಖಂಡಿತ. ಸಿನಿಮಾ ಮಂದಿರಗಳಿಗೆ ಹೋದಾಗಾ ಅಲ್ಲಿನ ಶೌಚಾಲಯಗಳನ್ನು ಉಪಯೋಗಿಸಬೇಡಿ, ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಗಿಲು ತೆಗೆಯಬೇಡಿ. ಯಾವುದಾದರು ಸಂದರ್ಶನಕ್ಕೆ ಹೋಗುವಾಗ ಅಥವ ಒಬ್ಬರೇ ಓಡಾಡುವ ಸಂದರ್ಭಗಳಲ್ಲಿ. ಪೆಪ್ಪರ್ ಸ್ಪ್ರೇ ಚಿಲ್ಲಿ ಸ್ಪ್ರೇ ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.  ಇದು ಮೇಲೆರಗಲು ಬಂದ ಕಾಮುಕರ ಜೀವಕ್ಕೆ ಯಾವುದೇ ಹಾನಿ ಮಾಡದೇ ಇದ್ದರೂ ಅವರ ಹಠಾತ್ ದಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸಿಂಪಡಿಸಿದ ಮರು ಕ್ಷಣವೇ ಅವರಿಗೆ ಅಸಹನೀಯವಾದ ಬರ್ನಿಂಗ್ ಎಪೆಕ್ಟ್ ಕೊಡುತ್ತದೆ. ಆ ಅಂತರದಲ್ಲ್ಲಿ ಹೇಗಾದರೂ ನಾವು ಕಾಮುಕರಿಂದ ಪಾರಾಗಬಹುದು. ಸಾಧಾರಣವಾಗಿ ಎಲ್ಲಾ ಕಡೆಗಳಲ್ಲೂ ಇವು ಲಭ್ಯ. ಸಣ್ಣ ಮಕ್ಕಳ ವಿಷಯಕ್ಕೆ ಬಂದಾಗ, ಅವರ ಮೇಲೆ ಆಗುವ ಇಂಥಾ ಹಲ್ಲೆಗಳಿಗೆ ಸ್ವತ: ಪೋಷಕರು ಹಾಗು ಶಿಕ್ಷಕರೇ ಕಾರಣ ಎಂದು ಹೇಳಬಹುದು. ಒಂದು ಮಗುವಿನ ಮೇಲೆ ಅತ್ಯಾಚಾರವಾಗಿ ಅಷ್ಟು ದಿನವಾದರೂ ಅದು ಪೋಷಕರ ಗಮನಕ್ಕೆ ಬಂದಿಲ್ಲವೆಂದರೆ ಅದು ಅವರಿಬ್ಬರ ನಡುವಿನ ಕಮ್ಯುನಿಕೇಶನ್ ಗ್ಯಾಪ್ ಅಲ್ಲದೆ ಬೇರೇನು? ನಮ್ಮ ಮಗುವಿನಲ್ಲಿ ಆಗುತ್ತಿರುವ ಸಣ್ಣ ಸಣ್ಣ ಬದಲಾವಣೆಗಳನ್ನು ನಾವೆ ಗಮನಿಸ ಬೇಕು. ದೇಹದ ಎಲ್ಲಾ ಅಂಗಗಳನ್ನು  ಸಂಕೋಚವಿಲ್ಲದೆ ಮಕ್ಕಳಿಗೆ ಪರಿಚಯಿಸಬೇಕು, ಗುಪ್ತಾಂಗಗಳಿಗೂ ಮತ್ತು ಇತರ ಅಂಗಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸಿಕೊಡಬೇಕು. ಕೆನ್ನೆ ಮುಟ್ಟಿ ಮುತ್ತು ಕೊಡುವುದಕ್ಕೂ, ಇತರ ಅಂಗಗಳನ್ನು ಮುಟ್ಟುವುದಕ್ಕೂ ಇರುವ ವ್ಯತಾಸವನ್ನು ಸೂಕ್ಷ್ಮವಾಗಿ ತಿಳಿಸಿಕೊಡಬೇಕು. ಊಟ ಮಾಡದ ಮಗುವನ್ನು ಹೆದರಿಸಲು ಯಾವುದೋ ಕರೀ ನೆರಳನ್ನು ತೋರಿಸಿ, ಅಮ್ಮು...... ಅದು ಗ್ವಾಕ(ದೆವ್ವ) ಕಣಪ್ಪಾ ಊಟಮಾಡಿಲ್ಲ ಅಂದ್ರೆ ನಿನ್ನ ಎತ್ಕೊಂಡ್ ಹೋಗಿ ಬಿಡುತ್ತೆ ಅಂತ ಹೆದರಿಸಿದರೆ, ಆ ಮುಗ್ದ ಮಗು ಹೌದಾ ಅಮ್ಮ ಅಂತ ಹೇಳಿದ ಹಾಗೆ ಕೇಳುತ್ತವೆ. ಮತ್ತೆ ಆ ಕರೀ ನೆರಳು ಕಂಡರೆ ನಿಮಗಿಂತ ಮುಂಚೆಯೇ ಅಮ್ಮ ಗ್ವಾಕ ನೋಡು ಅಲ್ಲಿ ಅಂತ ಗುರುತಿಸಿ ಹೇಳುತ್ತವೆ. ಮಕ್ಕಳಲ್ಲಿರುವ ಇಷ್ಟೇ ಇಷ್ಟು ತಿಳುವಳಿಕೆ ಹಾಗು ಮಕ್ಕಳೊಂದಿಗೆ ನಿಮಗೆ ಇರುವ ಉತ್ತಮ ಕಮ್ಯುನಿಕೇಶನ್ ಸಾಕು. ಶಾಲೆ ಹೋಗುವಷ್ಟು ಮಟ್ಟದ ಪುಟ್ಟ ಮಗುವಿಗೆ ಇದು ಬೆಂಕಿ, ಮುಟ್ಟಿದರೆ  ಸುಡುತ್ತದೆ ಅನ್ನುವಷ್ಟು ಅರಿವಿದ್ದರೆ ಸಾಕು ಈ ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಸಬಹುದು. ಹಾಗೆಯೆ ಎಲ್ಲಾ ಮಕ್ಕಳಲ್ಲೂ ಮಾನವೀಯ ಮೌಲ್ಯಗಳ ಬಗ್ಗೆ ಶಾಲಾಮಟ್ಟದಲ್ಲ್ಲೇ ಅರಿವು ಮೂಡಿಸಬೇಕು. Society Harnessing Equipment(she) ಗಳಂತ ತಾಂತ್ರಿಕ ಸಾಧನ ಗಳು ಮತ್ತಷ್ಟು ಬರಬೇಕು.  ನಿರ್ಬಯ"  ಕೇಸ್ ನಲ್ಲಿ, ಆಕೆ ಪ್ರತಿಭಟಿಸದೆ ಇದ್ದಿದ್ದರೆ ಜೀವ ಉಳಿಯುತ್ತಿತ್ತು, ಅನ್ನುವ ಮಂದಿ ಒಂದು ಕಡೆ, ಜ್ನಾನ  ಭಾರತಿ ಪ್ರಕರಣವಾದಾಗ, ಆ  ಹುಡುಗಿ ಕಾಮುಕರಿಗೆ ಸಹಕರಿಸಿದ್ದಾಳೆ ಅವಳ ಮೈಮೇಲೆ ಯಾವುದೇ ಗಾಯಗಳಿಲ್ಲ ಹಾಗಾಗೆ ಇದು ರೇಪ್ ಅಂತ ಪರಿಗಣಿಸಲಾಗದು ಅಂತ ಪರ ವಾದ ಲಾಯರ್ ಒಂದ್ ಕಡೆ. ತಡ ರಾತ್ರಿಯಲ್ಲಿ ಆ ಹುಡುಗಿಯರು ಬಾಯ್ ಪ್ರೆಂಡ್ಗಳ ಜೊತೆ ಯಾಕೆ ಹೊರಗೆ ಬರ್ಬೇಕಿತ್ತು? ಎಂದೂ ಕೆಲವು ಸಮೂಹಗಳು ಟೀಕಿಸಿದವು , ಆದರೆ ಈಗ ನಡೆದಿರುವ ಪ್ರಕರಣಕ್ಕೆ ಯಾರು ಹೊಣೆ? ೬ ವರ್ಷದ ಕಂದಮ್ಮ ಶಾಲೆಗೆ ಯಾಕೆ ಹೊಯ್ತು ? ಅದೂ ತಪ್ಪು ಅಂತ ಟೀಕಿಸುವ ಬಂಡತನ ದಯವಿಟ್ಟು ಮಾಡ್ಬೇಡಿ. ಆದ ತಪ್ಪಿಗೆಲ್ಲ ಹೆಣ್ಣು ಮಕ್ಕಳನ್ನೇ ಹೊಣೆ ಮಾಡುವ ವ್ಯವಸ್ಥೆ. ಹೋರಾಟ, ಪ್ರತಿಭಟನೆ ಒಂದು ಕಡೆಯಾದರೆ, ನಿಲ್ಲದ ಅತ್ಯಾಚಾರ ಪ್ರಕರಣಗಳು ಇನ್ನೊಂದು ಕಡೆ  ಸದ್ಯದ ಪರಿಸ್ಥಿತಿಯಲ್ಲಿ ನಾವಿರುವುದು, ಇರಬೇಕಾಗಿರುವುದು ಪಾಪಿಗಳ ಲೋಕದಲ್ಲಿ, ಎಲ್ಲಾ ಸರಿಹೋಗುವ ವರೆಗೆ ಆದರೂ ನಾನು ನಮ್ಮ ಸ್ವತಂತ್ರದ ಪರಿಧಿಯನ್ನು ಚಿಕ್ಕದಾಗಿಸಿ ಕೊಳ್ಳುವುದು ಉತ್ತಮ. ಹಾಗೆಂದ ಮಾತ್ರಕ್ಕೆ ಹೆಣ್ಣು ಮಕ್ಕಳು ಹದ್ದು ಮೀರಿ ನಡೆದು ಕೊಳ್ಳುತಿದ್ದಾರೆ ಎಂದು ಅರ್ಥವಲ್ಲ. ಈ ಪಾಪಿಗಳ ಲೋಕದಲ್ಲಿ ಬದುಕಬೇಕಾದರೆ ನಾವು ತೆಗೆದುಕೊಳ್ಳಲೇ ಬೇಕಾದ  ಅಗತ್ಯ ಎಚ್ಚರಿಕೆ ಕ್ರಮಗಳಿವು.
//ನಂದಿನಿ ನಂಜಪ್ಪ//

Sunday 13 July 2014

ಅಕ್ಕಿ - 3 ರೂ
ಜೋಳ - 3 ರೂ
ಗೋದಿ - 3 ರೂ
ರಾಗಿ - 1.5 ರೂ
ಎಲ್ಲಾ ಧಾನ್ಯಗಳು - 15 ರೂ
ಮೆಣಸಿನಕಾಯಿ - 18ರೂ
ದನಿಯ- 16ರೂ
.
.
.
.
.
,
.
.
.
..
.
.
..

ಇದೇನು ಸರ್ಕಾರದ ಹೊಸ ದರಗಳು ಅನ್ಕೋಂಡ್ರಾ?
ಇಲ್ಲಾ...................
 ನಮ್ ಮುನ್ನಾಬಾಯ್ ಮಿಲ್ಲ್ ನಲ್ಲಿ ಹಿಟ್ಟು ರುಬ್ಬೋಕೆ ಚಾರ್ಜ್ ಮಾಡೋ ರೇಟ್ ಇದು

ಅಪ್ಪ ನಾ ಕಂಡ ನಿಜವಾದ ಹೀರೋ

ಅಪ್ಪ ನಾ ಕಂಡ  ನಿಜವಾದ ಹೀರೋ

ಅಪ್ಪನ ಪ್ರೀತಿಯ ಲೆಕ್ಕವಿಡುವುದು
ಹೇಗೆ? ಅವ ನಮಗಾಗಿ ಸುರಿಸಿದ
ಬೆವರ ಹನಿಗಳಂತೆ  ಅದೂ ಅಗಣಿತ
APMC ಯಾರ್ಡ್  ನ
ಬೀದಿ ಬೀದಿಯೂ ಇಟ್ಟಿವೆಯಂತೆ
ಅವ ನಮಗಾಗಿ ಹೊತ್ತ ಮೂಟೆಗಳ ಲೆಕ್ಕವ

ಒಂದು ದಿನವೂ ಕುಡಿದು  ಬಂದವನಲ್ಲ
ಬೀದಿಯಲ್ಲಿ ತೂರಾಡಿ ಬಿದ್ದವನಲ್ಲ
ಮೋಜಿನ ಗೋಜಿಗೆ ಹೋದವನಲ್ಲ
ಆದರೂ ಒಮ್ಮೊಮ್ಮೆ ಇವ
ಪೋಲಿ ಇರಬಹುದೇನೋ ? ಎಂದು
ಈ ಸಮಾಜ  ಊಹಿಸಲು ಕಾರಣ
ಜನಕನಿಗೆ ಒಲಿಯದ ಕನಕಾಂಬರ ನೋಟುಗಳು

ನಂಬಿದ್ದ ರೇಷ್ಮೆ ಉದ್ಯಮ ನೆಲ ಕಚ್ಚಿತ್ತು
ರೆಷ್ಮೆಯೂ ಮುಳ್ಳಾಗಿ ನಮ್ಮನ್ನು  ಚುಚ್ಚಿತ್ತು
ಅಯ್ಯೋ ಕಷ್ಟ ಎಂದಾಗ, ಹೆಂಡತಿ ಮಕ್ಕಳ
ಕನ್ನಂಬಾಡಿಗೆ ತಳ್ಳೆಂದ  ಅವರಪ್ಪ
ಎಂದೂ ಪೇಟೆ ಮುಖ ನೋಡದವನು
ಮಕ್ಕಳಿಗಾಗಿ ಬೆಂಗಳೂರಿನ
ಬೀದಿ ಹಿಡಿದ ಎನ್ನಪ್ಪ ಮುಗ್ದ ಮಡದಿಯೊಂದಿಗೆ

ಗಾಳಿ ಬೆಳಕಿಲ್ಲದ ಗುಬ್ಬಚ್ಚಿ ಗೂಡಲ್ಲಿ
ಮಲಗಿದ್ದ ಮಗಳ ಸುಖ ನಿದ್ರೆಗಾಗಿ
ಅವ ಹಾಕುತಿದ್ದ ಬೀಸಣಿಗೆ ಗಾಳಿ
ನನ್ನ ಹೃದಯವ ಮತ್ತುಷ್ಟು ಹಗುರಗೊಳಿಸಿದೆ

ಹೆಣ್ಣು ಮಕ್ಕಳಿಗೇಕೆ ಓದು ಬರಹ?
ಗಟ್ಟಿಯಿದೇ  ಗಾರ್ಮೆಂಟ್ಸ್ ಪ್ಯಾಕ್ಟರಿ
ದುಡಿಸಿ ಅವರ ದುಡ್ಡಲ್ಲಿ
ಮದುವೆ ಮಾಡಿ ಅಟ್ಟೆಂದು
ಕಿವಿತುಂಬಲು  ನೆಂಟರ ಬಳಗ
ಅಗುಳ ಕಷ್ಟದ ಬೇವು ನನಗೇ  ಇರಲಿ
ಮಕ್ಕಳು ಕಲಿತು  ಸಿಹಿಬೆಲ್ಲದ ಬಾಳು
ಅವರದಾಗಲಿ ಎಂದು
ಸಾಲಕೆ ಬಿದ್ದು ಶಾಲೆಗೆ ಕಳಿಸಿ
ನನ್ನ ಯಶಸ್ಸಿನ ಹಾದಿಗೆ
ಮುನ್ನಿಡಿಬರೆದ ಎನ್ನಪ್ಪ

ಎಲ್ಲಾ ಹೇಳುವರು
ನಾ ಹುಟ್ಟಿ ನಿನಗೆ ಕಷ್ಟ ಬಂತಂತೆ
ಕೋಪದಲಿ ಕೆಲವೊಮ್ಮೆ
ಅನಿಷ್ಟ , ಶನಿ  ಎಂದು ನೀನೂ  ಬೈದಿದ್ದುಂಟು
ನಿನ್ನ ತ್ಯಾಗವ ಅರಿತವಳು ನಾನಲ್ಲವೇ?
ನನಗೆ ಗೊತ್ತಿದೆ , ಅವು ಕಷ್ಟದ ಬಾಯಿಂದ
ಬಂದ ಮಾತುಗಳಷ್ಟೇ ಹೊರತು
ಮನದ ಮಾತುಗಳಲ್ಲವೆಂದು

ಅಪ್ಪ ! ನೀ ಎತ್ತು ಆಡಿಸಿದ್ದು ಸರಿಯಾಗಿ ನೆನಪಿಲ್ಲ
ಕ್ಷಮಿಸು, ಆದರೆ
ಅಮ್ಮನಿಲ್ಲದಾಗ ನೀ ಹಾಕಿದ
ಬೇಬಿ ಶ್ಯಾಮಿಲಿ ಜಡೆ
ನಾಲ್ಕಾಣಿ ಕದ್ದುದಕೆ ನೀ ಕೊಟ್ಟ ಏಟು
ಇನ್ನೂ ನೆನಪಿದೆ, ನೀಯತ್ತು ಕಲಿಸಿದೆ
ನಿನ್ನ ಗದರು ದನಿ, ಭಯ ಭಕ್ತಿಯ ಕಲಿಸಿದೆ
ನಾ ತಪ್ಪದ ದಾರಿಗೆ ನಿನ್ನ ನಂಬಿಕೆಯೇ ದೀವಿಗೆ
ಈ ಜೀವ, ಜೀವನ ಎರಡೂ ನೀ ಕೊಟ್ಟ ಭಿಕ್ಷೆ
ಈ ಹುಟ್ಟು ತರಲೆ ಈವರೆಗೂ
ಆಡದೆ ಉಳಿಸಿದ ಮಾತುಗಳಿವು
ಇಂದು ತಡೆಯಲಾರದೆ ಕಣ್ಣಿಂದ ಸುರಿದಿವೆ
ಅಪ್ಪ ನೀ ನನ್ನ ಜೀವಮಾದಲ್ಲಿ ಕಂಡ
ನಿಜವಾದ ಹಿರೋ

//ನಂದಿನಿ//
ನಾನ್ ಫೇಮಸ್ ಇಲ್ದೆ ಇರ್ಬಹುದು, ಆದ್ರೆ ನನ್ ಹೆಸರು ಸಿಕ್ಕಾಪಟ್ಟೆ ಫೇಮಸ್ ಗೊತ್ತ?  , ಯಾವ್ ಯಾವ್ ಮೂವಿಲಿ ಹಿರೋಯಿನ್   ಗೆ ನನ್  ಹೆಸರು ಇಟ್ಟಿದ್ದಾರೋ   ಆ ಮೂವಿ ಎಲ್ಲಾ ಸೂಪರ್ ಡುಪೆರ್ ಹಿಟ್, ರಾಮಾಚಾರಿ, ಬಂಧನ , ಮೆರವಣಿಗೆ ,ಆಕಾಶ, ಮುಂಗಾರುಮಳೆ  ಹಿಂಗೆ ದೊಡ್ ಲಿಸ್ಟೇ ಇದೆ ,  ಈಗ ವೆರಿ ಡೀಸೆಂಟ್ ಹುಡುಗಿ ನಂದಿನಿ ಅಂತ ಹೊಸ ಸಾಂಗ್ ಬೇರೆ ಬಂದಿದೆ  , ಒಟ್ಟಿನಲ್ಲಿ  ಪಂಚಭಾಷೆ ಫೇಮಸ್ ನೇಮ್ ನಮ್ದು , ಇದ್ಯಾಕೋ ಅತಿ ಆಯ್ತು ಅಂತೀರಾ? ನಂಗೂ ಹಾಗೆ ಅನ್ಸ್ತು , :) :),,,,
ಮನಮುಗಿಲ ಸೂರ್ಯ ನೀ
ನನ್ನೊಲವ ದರ್ಪಣ ಹಿಡಿದು
ಎನ್ನ  ನೋಡಲು
ಮಳೆಬಿಲ್ಲಾಗಿ ಮೂಡಿದೆ
ನಿನ್ನ ಎದೆಯಂಗಳದಿ
ಆ ರಂಗಿಗೆ ನೀ ನಿಟ್ಟ ಹೆಸರು
ಕಾಮನ ಬಿಲ್ಲಿನದ್ದಲ್ಲ ..

ನಾಚಿದ ನೀರೆಗೆ ನೀ ನಿಟ್ಟ ಹೆಸರು
ನೀ ಕೊಟ್ಟ ಹೆಸರು ಊಸರವಳ್ಳಿ !!!
ಡೊಂಕಿತ್ತೇನೊ ನಿನ್ನ ನೋಟದಲಿ
ನನ್ನ ಒಲವಿನಲಿ ಅಲ್ಲ


 



(೨೦೦೮ ರಲ್ಲಿ ಕೆಲಸ ಹುಡುಕಿದ ಅನುಭವ )
ಸಿಗದ ಕೆಲಸದ ಬೇಟೆಗಂದು
ಪೂರ್ವ ಸಿದ್ದತೆ ನಡೆದಿತ್ತು
ಪಾಕಟ್ ಮನಿಗೆ, ಚಾಚಿದ ಕೈ
ಅಂದೇಕೋ ಹಿಂದೇಟು ಹಾಕಿತ್ತು
ಹಾಗೋ ಹೀಗೋ ನೂರನ ನೋಟೊಂದು
ನನ್ನದಾಯಿತು

ಮೊದಮೊದಲ  ಸಂದರ್ಶನ
ಯುದ್ದ ಬೀತಿ ಎದೆಯೊಳು
ಯುದ್ಧಕ್ಕೆ  ಮುಂಚೆಯೇ ಪಲಾಯನ ಮಾಡಲೇ?
ಎಂಬ ಆಲೋಚನೆಗಳು ಸುಳಿದಾಡಲು 
ಇಷ್ಟ  ದೈವವ  ನೆನೆದು
ಗುಮ್ಮನೆ ಕುಳಿತೆ ನಡುನಡುಗಿ
ಸೀಟು ಸಿಗದ BMTC ಬಸ್ಸಿನ,  ಪ್ರಯಾಸದ ಪ್ರಯಾಣ,
ಮಂಡೆ ಕೆಂಡವಾಗುವ   ಬಿರು ಬಿರು ಬಿಸಿಲು,
ಬಹುರಾಷ್ಟ್ರೀಯ ಕಂಪನಿಯ  
ಆ ಬಹುಮಹಡಿ ಕಟ್ಟಡ,
ಮುಖದಲ್ಲಿ ಬೆವರಿಳಿಸಿತ್ತು
ಗೊತ್ತಿರದ ಸಂಗತಿಗಳಿವು

ಸ್ವಾಗತಕಾರಿಣಿ ಮುಖ
ಬೆವರಬಾರದಂತೆ
ಸ್ಟೆನೋ ಗೆ ಸಿಟ್ಟು ಬರಬಾರದಂತೆ

ಸೊಂಟ ಮುರಿದ ಐಟಿ ನಂಬಿ
Shine, ನೌಕ್ರೀ , classified, ಇಣುಕುವುದು
ಅಂತರಜಾಲಗಳ ಕೆದಕುವುದು
ಸಿಕ್ಕ ಸಿಕ್ಕ ಕಡೆ resume ಕಳಿಸುವುದು
ದಿನಚರಿಯಾಗಿತ್ತು

ಅಲ್ಲೊಬ್ಬ ಸಂದರ್ಶಕ ಹಲ್ಲು ಕಿರಿಯುತ
"ನಿಮಗೆ ಸೀರೆ ಉಡಲು ಬರುತ್ತಾ?
ಫ್ಲರ್ಟಿಂಗ್ ಮಾಡೋಕೆ ಬರುತ್ತಾ?
ಯಾರಾದ್ರೂ ಪ್ರೋಪೋಸ್  ಮಾಡಿದ್ರೆ
ಹೇಗೆ ಪ್ರತಿಕ್ರಿಯಿಸುತ್ತೀರಾ ?"
ಎಂಬ ಅವನ ಹುಚ್ಚು ಪ್ರಶ್ನೆಗಳಿಗೆ
ನಾ ಕೊಟ್ಟ ಸಿಟ್ಟಿನುತ್ತರ
ಮೂಗನ್ನಾಗಲೇ ಕತ್ತರಿಸಿತ್ತು
ಕೆಲಸ ಕೈತಪ್ಪಿ ಹೋಗಿತ್ತು

ಬಿಟ್ಟಿ  ಉಪದೇಶಗಳು
ನೆರೆಯವರ ಚುಚ್ಚು ಮಾತುಗಳು
ಕಾಲೇಜು ಕಲಿಸದೆ ಉಳಿಸಿದ
ಪಾಠಗಳ ಕಲಿಸಿತು
ದಿನ ಕಳೆದಂತೆ
ಕೆಲಸಕ್ಕೂ ಮೀರಿದ ಅನುಭವಗಳು
ನನ್ನದಾದವು
ಹೇಳಿಕೊಳ್ಳಲು ಕೆಲಸವೂ ಸಿಕ್ಕಿತು
ಜೇಬು ತುಂಬಿಸದ
ಈ ಅರೆಕಾಲಿಕ ಜಾಬುಗಳು
ಮರದಿಂದ ಮರಕೆ ಜಿಗಿಯುವ
ಕೆಲಸವ ಇನ್ನೂ ಬಾಕಿ ಉಳಿಸಿವೆ
//ನಂದಿನಿ//


ಮಹಾಲಕ್ಷ್ಮಿ ಲೇಔಟ್ ನಲ್ಲಿ ಎಷ್ಟೋಂದು ಟೆಂಪಲ್ಸ್ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಆದ್ರೆ, ಅಲ್ಲೊಂದು ಟೆಂಪಲ್ಲ್ ನಲ್ಲಿ ಪ್ರತಿ ಶುಕ್ರವಾರ ೮.೦೦ ಗಂಟೆಗೆ ಸರಿಯಾಗಿ. ಒಂದ್ ಅಂಕಲ್ ಮೇಲೆ ದೇವ್ರು ಬರುತ್ತೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರ್ಲಿಲಿಕ್ಕಿಲ್ಲ,  ,  ೮ ನೆ ಕ್ಲಾಸ್ ನಲ್ಲಿ ಇದ್ದಾಗ,  ಪಕ್ಕದ ಮನೆ ಆಂಟಿ ಜೊತೆ ಆ ದೇವಸ್ಥಾನಕ್ಕೆ ಹೋಗಿದ್ದೆ, ಆ ಅಂಕಲ್ ದೇವ್ರ್ ಬರೋದ್ ಅರ್ಧ ಗಂಟೆ ಮುಂಚೆ ಸೀರೆ ಉಟ್ಕೊಂಡು ಒಡವೆ ಎಲ್ಲಾ ಹಾಕೊಂಡು ತ್ರಿಶೂಲ ಹಿಡ್ಕೊಂಡು  ೮.೦೦ ಗಂಟೆಗೆ ಆಗ್ತಿದ್ದಂಗೆ, ಅಹ್ಮ್ ಹ್ಮ್ ಹ್ಮ್ ಅಂತ ತಲೆ  ಒದರುತ್ತಾ ಡ್ಯಾನ್ಸ್ ಆಡೋಕೆ ಶುರುಮಾಡಿದ್ರು, ಭಕ್ತಾದಿಗಳೆಲ್ಲಾ ಭಯ ಭಕ್ತಿಯಿಂದ , ಭಕ್ತಿಯ ಪ್ರರಾಕಾಷ್ಟೆ ಜಾಸ್ತಿಯಾಗಿ, ಕೈ ಜೋಡಿಸಿ ದೇವಿ ಯನ್ನು ಬೇಡಿಕೊಳ್ಳಲಾಗಿ, ಅಂಕಲ್  ತಮಿಳ್ ಭಾಷೆಯಲ್ಲಿ ಮಾತಾಡೋಕೆ ಶುರು ಮಾಡಿದ್ರು. ನಂಗ್ ಒಂದ್ ಡೌಟ್ ಬಂತು, ಇದ್ಯಾಕೆ ಹಿಂಗೆ ಅಂತ
ಆಂಟಿನ ಕೇಳ್ದೆ ." ಆಂಟಿ ಯಾಕೆ ಆ ಅಂಕಲ್  ತಮಿಳ್ ನಲ್ಲಿ ಮಾತಾಡ್ತಾವ್ರೆ? ಅಂಕಲ್ ಗೆ ಕನ್ನಡ ಬರಲ್ವಾ?"
ಅದು ಅಂಕಲ್ ಅಲ್ಲ, ದೇ............ವ್ರು, ಹಾಗೆಲ್ಲ ಹೇಳ್ಬಾರ್ದು
ಅಯ್ಯೊ ಆಂಟಿ..... ಮ್ಯಾಟ್ರು ಅದಲ್ಲ....... ಆ ಅಂಕಲ್ ಗೆ ಕನ್ನಡ ಬರಲ್ಲ ಅನ್ಸುತ್ತೆ.
ಅಷ್ಟೊತ್ತಿಗೆ ಒಂದಿಬ್ಬರು ನಮ್ಕಡೆ ಗುರಾಯ್ಸ್ತಾ ಇದ್ರೂ. ಆ ಆಂಟಿ " ಎಷ್ಟ್ ಮಾತಾಡೋದು ಮಕ್ಕ್ಳು ಮುಚ್ ಬಾಯಿ" ಅಂದ್ರು,
(ನಾನು ಗಪ್ ಚುಪ್ ಸೈಲೆಂಟ್, (ಎರಡು ನಿಮಿಷ) ಈ ಆಂಟಿ ನಂಗೆ ಶೇಪ್ ಔಟ್ ಮಾಡ್ತಾರೆ, ನಾನೇನ್ ಅಂಥದ್ ಕೇಳ್ಬಾರ್ದ್ ಕೇಳ್ದೆ ? ಮಾಡ್ತಿನಿರು ಅಂತ ಮನಸಲ್ಲೇ ಅನ್ಕೊಂಡು)
ಆಂಟಿ ನೀವ್ ಹೋದ್ ವಾರಾನೂ ಇದೇ ರೇಷ್ಮೆ ಸೀರೆ ಉಟ್ಟಿದ್ರಿ ಅಲ್ಲ್ವಾ ಅಯ್ಯಯ್ಯೋ.....................??   (ಶ್ ಶ್ ಅಂತ ಸನ್ನೆ ಮಾಡಿದ್ರು, )
ದಕ್ಷ್ನಿಣೆ ಆಧಾರದ ಮೇಲೆ ಪ್ರಸಾದ  ವಿನಿಯೋಗ ಆಯ್ತು, ಪೂಜೆ ಮುಗೀತು , ಮನೆಗೆ ಬಂದ್ಮೇಲೆ ಆವಮ್ಮ  "ಇವತ್ತೇ ಕಡೆ ನಿಮ್ ಮಗಳನ್ನು ಎಲ್ಲೂ ಕರ್ಕೋಂಡು ಹೋಗಲ್ಲ . ನನ್ ಮರ್ಯಾದೆ ಎಲ್ಲಾ ಹೋಯ್ತು ಅಂದ್ರು. ನಮ್ಮಮ್ಮ ಆವಮ್ಮನ್ ಮಾತ್ ಕೇಳ್ಕೊಂಡ್ "ಹೋದ್ಕಡೆ ಸುಮ್ನೆ ಇರೋಕಾಗಲ್ಲ್ವ ನಿಂಗೆ ಅಂತ ನಂಗೆ ಬಯ್ದ್ರೂ
ನಾನು ಹೋಗಮ್ಮ ಆ ಆಂಟಿ ಅದ್ಯಾವ್ದೋ ದೇವಸ್ಥಾನಕ್ಕ್ ಕರ್ಕಂಡ್ ಹೋಗಿ ದೇವ್ರ್ ಬರುತ್ತೆ ಅದೂ ಇದೂ ಅಂತೆಲ್ಲಾ ಮಿಸ್ ಗೈಡ್ ಮಾಡ್ತಾರೆ , ಈಗ ದೇವ್ರ್ಗೆ ಎಲ್ಲಾ ಭಾಷೆ ಬರ್ಬೇಕಲ್ವಾ ಕನ್ನಡ ಯಾಕ್ ಬರಲ್ಲ? ನಾವ್ ಟೆಂಪಲ್ ಗೆ ಹೋದ್ರೆ ಕನ್ನಡ್ದಲ್ಲಿ ತಾನೆ ಬೇಡ್ಕೋಳೋದು?
ನೋಡಿ ನೋಡಿ ನಿಮ್ಮುಂದೆನೆ ಹೇಗ್ ಮಾತಾಡ್ತಾಳೆ ಇನ್ನು ಅಲ್ ಕೇಳ್ಬೇಕಾ? ಇರು ನಿಮ್ಮಪ್ಪ ಬರ್ಲಿ.
ಅದೇ ಕಡೆ ನಾನ್ ಆ ದೇವಸ್ಥಾನಕ್ಕೆ ಹೋಗೇ ಇಲ್ಲಾ... ನೀವೆ ಹೇಳಿ ನಾನ್ ಕೇಳಿದ್ ತಪ್ಪಾ. ? ನಿಜ್ವಾಗ್ಲೂ ಮೈಮೇಲೆ ದೇವ್ರು ಬಂದಿದ್ದೇ ಆದ್ರೆ, ಅಂಕಲ್ ಕಂಟ್ರೋಲ್ ನಲ್ಲಿ ಯಾಕ್ ಇರ್ಬೇಕಿತ್ತು? ಭಕ್ತಾದಿಗಳು ಯಾವ್ ಭಾಷೆಲಿ ಪ್ರಶ್ನೆ ಕೇಳ್ತಾರೋ ಅದೇ ಭಾಷೆಲಿ ಉತ್ತರ ಕೊಡ್ಬೇಕಪ್ಪ...........? ಕಸ್ಟಮರ್  ಕೇರ್ ನಲ್ಲಿ ಇರೋ ಸೌಲಭ್ಯ ಇಲ್ಲ್ಯಾಕಿಲ್ಲ?  ದೇವರು ಸರ್ವಾಂತರ್ಯಾಮಿ, ಹಾಗಂದ್ ಮೇಲೆ ಸರ್ವಾಭಾಷೆಗಳೂ ಬರ್ಬೇಕಲ್ವಾ? ಅದ್ರಲ್ಲೂ ಅದೇ ವಾರ ಅದೇ ಟೈಂ ಅದೇ ಅಂಕಲ್ ಮೇಲೆ ಯಾಕ್ ಬರ್ಬೇಕು, ನಾವೆಲ್ಲ ಭಕ್ತಾದಿಗಳಲ್ವಾ? ನಾವೇನಪ್ಪ ಪಾಪ ಮಾಡಿದ್ವಿ? ನಮ್ಮೇಲು ಒಂದ್ ಕಿತಾ ದೇವ್ರ್ ಬರ್ಬಹುದಿತ್ತಲ್ವಾ? ಹ್ಮ್............ . ಐ ಹೇಟ್ ದಿಸ್ ಮೂಢನಂಬಿಕೆ
ಅದಕ್ಕೆ ಹೇಳೋದು ಜನ ಮರುಳೋ ಜಾತ್ರೆ ಮರುಳೋ ಅಂತ. ಆ ದೇವಸ್ಥಾನ ಈಗ್ಲೂ ಇದೆ. ಮೋಸ್ಟ್ ಲಿ ಈಗ ಆ ಅಂಕಲ್ ಕನ್ನಡ ಕಲ್ತಿರ್ಬಹುದು. :)
ಬರೋ ಒಂದ್ ಹಾಯ್ ಮೆಸೇಜ್ ಗೆ ರಿಪ್ಲೈ ಮಾಡ್ ಬೇಕಾದ್ರೆ ಈ ಮೊಬೈಲ್ ನೆಟ್ವರ್ಕ್ ನಲ್ಲಿ ಎಷ್ಟ್ ಕಷ್ಟ ಗೊತ್ತ? ಗಿರ ಗಿರ ಸುತ್ಕೊಂಡ್ ಪ್ಲೀಸ್ ವೇಟ್ ಕನೆಕ್ಟಿಂಗ್ ........... ಮತ್ತೆ ಸುತ್ತಿಂಗ್ ಪ್ಲೀಸ್  ವೇಟ್ , ಯಪ್ಪಾ ಬ್ಯಾಡಪ್ಪ ಇದರ ಸಹವಾಸ ಅನ್ಸ್ಬಿಡುತ್ತೆ ಆ ಕಡೆಯಿಂದ ಹಾಯ್ ಮೆಸೇಜ್ ಕಳ್ಸ್ದವ್ರು   ಈವಮ್ಮುಂಗ್  ಧಿಮಾಕು ಜಾಸ್ತಿ ನೋಡ್ ಇನ್ನು ರಿಪ್ಲೈ ನೆ ಮಾಡಿಲ್ಲ ಅಂತ ಬೈಕೊಳ್ತಾರೆ ಅದಕ್ಕೆ ಇನ್ಮೇಲೆ ಈ ತಲೆ ನೋವ್ವೆ ಬ್ಯಾಡ ಆಫ್ ಲೈನ್ ನಲ್ಲಿ ಇರೋದು ಅಂತ
ಡಿಸೈಡ್ ಮಾಡ್ಬಿಟ್ಟೆ  ,
"ಮೊಬೈಲ್ ಡೇಟಾ ಪ್ಯಾಕ್ ಕೂಡ ಒಂದು ನವೀಕರಿಸಲಾಗದ  ಸಂಪನ್ಮೂಲ ಸೊ ಲೆಟ್ಸ್ ಸೇವ್ ಇಟ್ ,
ಹಂಚಿ ತಿಂದರೆ ಸ್ವರ್ಗ ಸುಖ ಎಂಬ ನಾನ್ನುಡಿಯ ಜೊತೆಗೆ ಕದ್ದು ತಿನ್ನುವುದು ಪರಮ ನರಕ ಅಂತನೂ ಸಂಧರ್ಬಕ್ಕೆ ತಕ್ಕಂತೆ ಸೇರಿಸ್ಕೊಂಡ್ರೆ ಚೆನ್ನ . ಈ ನಾನ್ನುಡಿ,  ಫೇಸ್ ಬುಕ್ ನ ಗೋಡೆ ಬರಹಗಳಿಗೂ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ , ಹಂಚಿ ತಿನ್ನೋದು ಅಂದ್ರೆ ಬರಹ/ ಕವಿತೆಗಳನ್ನು ಪರಸ್ಪರ ಮೆಚ್ಚಿ, ಹಂಚಿ ಕೊಳ್ಳೋದು , ಪರಸ್ಪರ ಹಂಚಿಕೊಂಡ ಕೈಗಳು ಕಾಣುವಂತೆ ಮಾಹಿತಿಸಹಿತ ಶೇರ್ ಮಾಡಿಕೊಳ್ಳೋದು . ಕದ್ದು ತಿನ್ನೋದು ಅಂದ್ರೆ ಅದೇ ಬರಹಗಳನ್ನು ನೋಡಿ , ಲೈಕ್ಆದರೂ ಲೈಕಿಸದೆ , ಕಮೆಂಟಿಸದೇ ಸೈಲೆಂಟ್ ಆಗ್ ಕದ್ದು ಅವ್ರ ಗೋಡೆಮೇಲೆ ಅಂಟಿಸಿಕೊಳ್ಳೋದು , ಕದ್ದು ತಿಂದ್ ಮೇಲೆ  ಬಿಕ್ಕಳಿಕೆ ಬರ್ಲೇ ಬೇಕು, ಇವತ್ತಲ್ಲಾ ನಾಳೆ ಸಿಕ್ಕಾಕಳ್ಳೇಬೇಕು  , ಸಿಕ್ಕಾಕಂಡ್ರೆ , ಏನೋ ಕೆಲವರು ನಮ್ ಥರಾನೆ ಆಲೋಚನೆಗಳು ಅವ್ರ್ಗು ಬಂದಿರ್ಬಹುದು ನಾವೆನ್ ಮಹಾ? ಅವ್ರ್ಗಿಂತ ಬರೀತೀವಾ? ಅಂತ ಬೇಸರ ಪಟ್ಕೊಂಡು ಸುಮ್ನಾಗ್ತಾರೆ ಅದೇ ವಸಿ ಜನ ಅವ್ರೇ.... ಅಪ್ಪೀ ತಪ್ಪಿ ಸಿಕ್ಬಿದ್ರೋ.......   ಅವ್ರ್ ಫೇಸ್ ಬುಕ್ ಸ್ಟೇಟಸ್ನಲ್ಲಿ ನಿಮ್ ಸ್ಟೇಟಸ್ ಬಗ್ಗೆ ಅಪ್ ಡೇಟ್ ಮಾಡಿ ಇಗ್ಗಾ ಮುಗ್ಗ್ಗಾ ಬೈದು ನಿಮ್ ನಿಜ್ವಾದ ಸ್ಟೇಟಸ್ ಏನು ಅಂತ ಜಗತ್ತಿಗೆ ತಿಳಿಸುತ್ತಾರೆ. ಅಲ್ಲಿ ಬರೋ ಕಮೆಂಟ್ ಪ್ರತಿಕ್ರಿಯೆ ಬಗ್ಗೆ ಹೆಚ್ಚಿಗೆ ಹೇಳೋದೇನ್ ಬೇಡ ಅನುಸ್ತ್ತೆ . ಹೀಗೆ ನಿಮ್ ಸ್ಟೇಟಸ್ ಹಾಳಾಗೋದು ನಿಮ್ಗ್ ಬೇಕಾ?  ಹಾಗಾದ್ರೆ ಕದಿಯೋದ್ ಬಿಟ್ಬಿಡಿ, ನಾನ್ ಹೇಳೋದೆಲ್ಲ ಹೇಳಿದ್ದೀನಿ , ಇದಾಗ್ಯೂ ಕದ್ದು ಕರ್ಮ ಕಟ್ಕೊಳ್ಳೇ ಬೇಕಂತಿದ್ರೆ ಅದ್ಕೂ ಒಂದ್ ಐಡಿಯಾ ಕೊಡ್ತೀನಿ  " ಎರಡು ಫೇಸ್ಬುಕ್ ಅಕೌಂಟ್ ಓಪನ್ ಮಾಡ್ಕೋಳಿ, ಫೇಕ್ ಅಕೌಂಟ್ ಸಹಾಯದಿಂದ ನಿಮ್ಮ ಸ್ನೇಹಿತರ ವಾಲ್ ನಿಂದ ಕದ್ದು ನಿಮ್ ಒರಿಜಿನಲ್ ಅಕೌಂಟ್ ನ ಗೋಡೆ ಮೇಲೆ ಅಂಟಿಸಿಕೊಳ್ಳಿ ಮತ್ತೆ ಯಾರ್ ವಾಲ್ ನಿಂದ ಕದ್ದಿರ್ತೀರೋ ಅವ್ರನ್ನ ಮರೆಯದೆ ಬ್ಲಾಕ್ ಮಾಡಿ ಅಥವಾ ರಿಸ್ಟ್ರಿಕ್ಟೆಡ್ ಫ್ರೆಂಡ್ ಲಿಸ್ಟ್ ಗೆ ಸೇರಿಸಿ, ನೀವು ಕದ್ದಿರೋ ವಿಷ್ಯ ಅವ್ರ್ ಗೊತ್ತಾಗೋದೆ ಇಲ್ಲ, ಆದ್ರೂ ಇದ್ರಲ್ಲೂ ಒಂದ್ ರಿಸ್ಕ್ ಇದೆ . ಏನಂದ್ರೆ  Mutual Friends  ಜಾಸ್ತಿ ಇದ್ರೆ ನೀವು ಕದ್ದಿರೋ ವಿಷ್ಯ ನಿಧಾನವಾಗಾದ್ರೂ ಅವ್ರ್ಗೆ ಗೊತ್ತೇ ಗೊತ್ತಾಗುತ್ತೆ  . ಆಗಾ ನಾನ್ ಆಗ್ಲೇ ಹೇಳಿದ್ನಲ್ಲಾ? ಕದ್ದು ತಿಂದ್ ಮೇಲೆ  ಬಿಕ್ಕಳಿಕೆ ಬರ್ಲೇ ಬೇಕು, ಇವತ್ತಲ್ಲಾ ನಾಳೆ ಸಿಕ್ಕಾಕಳ್ಳೇಬೇಕು  ಅಂತ ? ಈ ಮಾತ್ನ ಒಂದ್ ಸಾರಿ  ನೆನಪ್ ಮಾಡ್ಕೊಳ್ಳಿ" ನಾನೇನಾದ್ರೂ  ತಪ್ಪು ಹೇಳಿದ್ನಾ ?
ಬರೀ ಊಟ ಮಾಡೋದಷ್ಟೇ ಅಲ್ಲ  ಅಡುಗೆ ಮಾಡೋದನ್ನು     ಎಂಜಾಯ್ ಮಾಡಬಹುದು ಅಂತಾ ಇವಾಗ್ಲೆ ಗೊತ್ತಾಗಿದ್ದು , ರವೆ ಸರಿಯಾಗ್  ಹುರೀದೆ ಮಾಡಿರೋ ಉಪ್ಪಿಟ್ಟು ಕೂಡ  ರುಚಿ ಅನ್ಸ್ತಾ ಇದೆ ,   ತೂತಾದ ಚಪಾತಿ, ಎಲ್ಲಾರ್ ಮನೆ ದೋಸೇನೂ ತೂತೇ ಅನ್ನೋ ಗಾದೆ ಮಾತನ್ ಗುರಾಯಿಸ್ತಾ  ಇದೆ, ಚಪಾತಿ ಮಣೆಮೇಲೆ  ಸೃಷ್ಟಿಯಾದ ಅನೇಕಾನೆಕ ಅಮೀಬಾಗಳು ನಂದಿನಿಗೆ  ನಮಸ್ಕರಿಸುತ್ತಿವೆ, ಚಿತ್ರಾನ್ನ ತಿಂದ ಬಾಯಿಗಳು ಸಕ್ಕರೆ ಡಬ್ಬವ ಹುಡುಕುತ್ತಿವೆ , ವಾಹ್ ವಾಹ್ what  a revolution  !!  :-P
ಕನಸ ಕಣ್ಣಿಗೆ
ಬಟ್ಟೆಕಟ್ಟದಿರು ಗೆಳೆಯಾ
ಅಲ್ಲಾದರೂ ಹುಡುಕುವೆ
ಸಿಗದ ನಿನ್ನ
//ನಂದಿನಿ//
ಸಮಯದ ಕೊಲೆ ಮಾಡಿ
ನಾ ಗೀಚಿದಾ ಗೀತೆಯಲಿ
ಒಲವಿನ್ನೂ ಜೀವಂತ
//ನಂದಿನಿ//
ನಾ ಗೀಚಿ ಎಸೆದ
ಹಾಳೆಯೂ ಅರಿತಿದೆ
ನೀ ಅರಿಯದೇ ಹೋದ
ನನ್ನ ಕವಿತೆ ಕೊರಗ
ಓ ಸ್ಪೂರ್ತಿ ಹೃದಯವೆ
//ನಂದಿನಿ//
ಹಾಳೆಯ ಎದೆಯಿದೋ
ಅಳುತಲಿದೆ
ನೀನಿಲ್ಲದ
ಕವಿತೆಯಲಿ
ಸಾವನ್ನೂ ಸಹಿಸುವೆ  ಸೀತೆಯಂತೆ
ಎನ್ನ ರಾಮನಿಗಾಗಿ, ಆದರೆ
ತಾ ಸವೆದು, ಕಾಲವ ಸವೆಸಿ
ಕಾಯಲಾರೆನು ಶಬರಿಯಂತೆ
ಚಿತ್ರಾನ್ನಕ್ಕೆ ಹುಳಿ ಹಿಂಡೋಕೂ ಹಾಲಿಗೆ ಹುಳಿ ಹಿಂಡೋಕೂ ಇರುವ ಬೇಜಾನ್ ವ್ಯತ್ಯಾಸ
ಸುಮ್ನೆ ತಮಾಷೆಗೆ ಅಂತ ಫಿಟ್ಟಿಂಗ್ ಇಟ್ಟ್ರೆ  ಅದು ಚಿತ್ರಾನ್ನಕ್ಕೆ ಹುಳಿ ಹಿಂಡಿದಂಗೆ-ಸಖತ್  ಟೇಸ್ಟ್ ಟೇಸ್ಟ್
ಅದೇ ಮನೆ ಮುರಿಯೋಕೆ ಅಂತ ಫಿಟ್ಟಿಂಗ್ ಇಟ್ರೆ ಅದು ಹಾಲಿಗೆ ಹುಳಿ ಹಿಂಡಿದಂಗೆ - ಎಲ್ಲಾ ವೇಸ್ಟ್ ವೇಸ್ಟ್ :p :p
ವರುಷದೊಳಗೆ
ಹಳಸಿ ಹೋಗೋ
ಆ ಹಾಳು ಸಂಬಂಧದ
ನಂಜಿಗಿಂತ
ಒಂಟಿತನದ
ನಂಟೇ ಲೇಸು
(ಅನಿಸಿಕೆ )
ಹುಡುಗಿಗೆ ಕಾಳ್ ಹಾಕೋದು, ತಿನ್ಲಿಲ್ಲಾ ಅಂದ್ರೆ ಈ ಪಾರಿವಾಳಾಕ್ಕೆ ಕೊಬ್ಬು ಜಾಸ್ತಿ ಅಂತ ಬಯ್ಯೊಕೋಳೋದು, ಮಗಾ............. ನನ್  ಹುಡುಗಿ.....ಆವಾ....ಗ... ಸಣ್ಣಕ್ ಒಳ್ಳೆ ಬಾರ್ಬಿ ಡಾಲ್ ಥರ ಇದ್ಲು ಈಗ್ ನೋಡ್ಲ ನಾನ್ ಕೊಡ್ಸೊ ಫಿಜಾ ಬರ್ಗರ್ ತಿಂದು ತಿಂದು ಟೆಡ್ಡಿ  ಬಿಯರ್ ಆಗ್ಬುಟ್ಟವ್ಲೆ ಅಂತ ಕಾಮೆಂಟ್ ಮಾಡೋದು ಬರಿ ಇದೇ ಆಯ್ತು ಈ ಹುಡುಗ್ರು ಲೈಪು. ಇದ್ರಲ್ಲಿ ಹುಡುಗೀರ್ದೇನು ತಪ್ಪಿಲ್ಲ ಇವ್ರೆ...,"ಬದುಕಲು ಕಲಿಯಿರಿ" ಇಸ್ ಇಕ್ವಲ್ ಟು "ಪರ್ಸ್ ಮರೆಯೋದ್ ಕಲಿಯಿರಿ". ಪರ್ಸ್ ಮರೆಯೋದ್ನ ನೀವೂ ಕಲ್ತಿದ್ರೆ , ಒಂದು ಆ ಹುಡುಗಿ ನಿಮ್ನ ಮರ್ತೀರೋಳು , ಇಲ್ಲಾ..... ಒಳ್ಳೆ ಹುಡುಗಿಯಾಗಿದ್ರೆ ಬಿಲ್ ಅವ್ಳೆ ಕೊಡ್ತಿದ್ಲು ಅಲ್ವ.?

"ಸಾಕಪ್ಪ ಸಾಕು ಈ ಮನೆಮಾಲಿಕರ ಸಹವಾಸ, ಬಾಡಿಗೆ ಮನೆಯವರ ಪರದಾಟ"

"ಸಾಕಪ್ಪ ಸಾಕು ಈ ಮನೆಮಾಲಿಕರ ಸಹವಾಸ, ಬಾಡಿಗೆ ಮನೆಯವರ ಪರದಾಟ"

ಬೆಂಗ್ಳೂರಲ್ಲಿ ಬಾಡಿಗೆ ಮನೆ ಹುಡ್ಕೋದು, ಮನೆ ಸಿಕ್ಕ ಮೇಲೆ, "ನೋಡ್ರಪ್ಪ ನಮ್ಗೆ ಜಾಸ್ತಿ ಗಲಾಟೆ ಮಾಡ್ಬಾರ್ದು ಮನೆಲೀ ನಾಲ್ಕು ಜನರ ಮೇಲೆ ಇರ್ಬಾರ್ದು. ನೆಂಟ್ರು ಗಿಂಟ್ರು ಅಂತೆಲ್ಲ ಬರ್ಬಾರ್ದು" ಹಾಗೆ ಹೀಗೆ ಅಂತ ಮಾಲಿಕರು ಹಾಕೋ ಕಂಡೀಷನ್ ಕೇಳೋದು, ಇವೆಲ್ಲದ್ರ ಮಧ್ಯೆ ನಮ್ಮ ಕಂಡೀಷನ್ ಹಾಳಾಗೋಗಿರುತ್ತೆ. ಅಸಲಿಗೆ ಮಾಲಿಕರ ಮನೇಲಿ ಸರಿ ಸುಮಾರು 20 ಜನ ಇರ್ತಾರೆ ಅವಿಭಕ್ತ ಕುಟುಂಬದ ಕೂಡಿ ಬಾಳೋಣ ಅನ್ನೊ ಸಂದೇಶ ಅವ್ರಿಗೆ ಮಾತ್ರ ಅಪ್ಲೈ ಆಗೋದಾ? ಎಂಥಾ ಮೋಸ ರೀ ಇದು . ಮನೆ ಬಾಡಿಗೆ ಸಾಲದು ಅಂತ, ದಿನಕ್ಕೆ ಅವ್ರ್ ಬಿಡೋ ಒಂದ್ ಘಂಟೆ ನೀರ್ ಗೇ 500 ರೂಪಾಯ್ ನೀರ್ ಬಿಲ್ಲ್ ಅಂತ ಕಿತ್ಕೊಳ್ತಾರೆ. ಮನೆ ಮಾಲಿಕರದ್ದೂ ಸೇರಿ 4+1 +೫ ಮನೆಗಳು ಇರ್ತವೆ. ನೀರ್ ಬಿಲ್ ಏನ್ ಅಬ್ಬಬ್ಬಾ ಅಂದ್ರೆ ಒಂದ್ ಒಂದೂವರೆ ಸಾವಿರ ಬರ್ಬಹುದು. ಅಸಲಿಗೆ ಕಟ್ಟೋ ಬಿಲ್ಲ್ ನಲ್ಲಿ ಅವ್ರೆ ಜಾಸ್ತಿ ಕಟ್ಬೇಕು ಅಲ್ವಾ. ಯಾಕೆಂದ್ರೆ ಜನಗಣತಿ ಪ್ರಕಾರ ಚಿಳ್ಳೆಗಳು ಮಿಳ್ಳೆಗಳು ಎಲ್ಲಾ ಸೇರಿ ಅವ್ರ ಮನೆಯಲ್ಲೆ ಹೆಚ್ಚು ಜನ ಇರ್ತಾರೆ . ಇವ್ಗೆ ಕೊತಂಬರಿ ಕರಿಬೇವು ತಂದ್ ಕೊಡೋಕೆ ನಮ್ಮನೆ ಮಕ್ಳೆ ಆಗ್ಬೇಕು , ಇದೆಲ್ಲಾ ಆಯ್ತಾ? ಮತ್ತೆ ಮನೆ ಖಾಲಿ ಮಾಡ್ವಾಗ ಪೇಂಟಿಂಗ್ ಚಾರ್ಜು, ಆ ಲೈಟ್ ಹೊಡ್ದೋಗಿದೆ ಈ ಸ್ವಿಚ್ ಹಾಳಾಗಿದೆ, ಬಾಗಿಲು ಬ್ರೇಕ್ ಆಗಿದೆ ಕಾಲಿಂಗ್ ಬೆಲ್ ವರ್ಕ್ ಆಗ್ತಿಲ್ಲ ಹಾಗೆ ಹೀಗೆ ಅಂತೆಲ್ಲ ಇರೋ ಬರೋ ಅಡ್ವಾನ್ ಮನಿ ಎಲ್ಲಾ ಕಟ್ ಕಟ್ ಕಟಾರ್ ಅಂತ ಕಟ್ ಮಾಡ್ಬಿತಾರೆ .ನಿಜ ಹೇಳ್ಬೇಕಂದ್ರೆ ಈ ಕಾಲಿಂಗ್ ಬೆಲ್ಲ್ , ಸ್ವಿಚ್ ಇವೆಲ್ಲ ಅವರ ಮನೆ ಮಕ್ಕಳ ಆಟಕ್ಕೆ ಬಲಿ ಆಗಿರ್ತಾವೆ. ಮತ್ತೊಂದು ಮನೆಯ ಮಾಲೀಕರಿಗೆ ಕೊಡೋಕೆ ಮತ್ತೆ "shortage of advance". ಆ ಕಾಲದಲ್ಲಿ ಬೆಂಗ್ಳೂರ್ಗೆ ಬಂದು ಬೆನಾಮಿ ಸೈಟ್ ಗಳನ್ನು ಹಿಡಿದು ಹಾಗೋ ಹೀಗೋ ಮಾಡಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿ ಕೊಂಡು ಊರ್ ತುಂಬಾ ಮನೆಗಳ್ ಕಟ್ಟಿದ್ದೀವಿ ಅಂತ ಹೀಗಾ ಮಾಡೋದು (ಎಲ್ಲರೂ ಅಲ್ಲ..... ಕೆಲವರು ). ? ಈ ಮಿಡ್ಲ್ ಕ್ಲಾಸ್ ಪ್ಯಾಮಿಲಿ ಪರದಾಟ ಸಾಯೋವರೆಗೂ ತಪ್ಪಿದ್ದಲ್ಲ ಎನಂತೀರಾ?
ಏನೋ ನೆನ್ನೆ ತಮಾಷೆಗೆ ಹುಡುಗರ ಬಗ್ಗೆ ಒಂದೇ ಒಂದು ಲಘು ಟೀಕೆ ಮಾಡ್ದೆ ಅಂತ ಕ್ವಾಪ ಮಾಡ್ಕಂಡ್ ಕಾಮೆಂಟ್ ಮಾಡಿದ ಗೆಳೆಯರು  ಹಾಗೂ ಲೈಟಾಗಿರೋ    ವಿಷ್ಯಕ್ಕೆ ಹೆವಿಯಾಗ್ ಪ್ಹೀಲ್ ಮಾಡ್ಕೊಂಡ್ ಇನ್ಬಾಕ್ಸ್ ನಲ್ಲಿ ರಿಯಾಕ್ಷನ್ ಕೊಟ್ಟ ನನ್ನ ಅಣ್ ತಮ್ಮಾಸ್ ಸಮಾಧಾನಕ್ಕಾಗಿ
ಈ  ಹೇಳಿಕೆ
"ಹುಡುಗಿಯರು ಬರಿ  Active  ಅಷ್ಟೇ !!
ಆದ್ರೆ ನೀವ್ ಹುಡುಗರು !!" Radioactive !! :P " :p =D

Hani

ಕರಿಮಣಿಯು ನಾಚಿ
ಹವಳವಾಯ್ತೀಗ
ನಿನ್ನ ಸ್ಪರ್ಶಕೆ
ತಾಳಿ ಬೊಟ್ಟಾಗಿ ಬಾರೋ
ಈ ಎದೆಗೆ
//ನಂದಿನಿ//

ಒಂದೊಳ್ಳೆ ಮಾತು - ಸ್ವಲ್ಪ ನಗು

ಒಂದ್ ಒಳ್ಳೆ ಅನುಬಂಧ ಇಟ್ಕೊಳ್ದಿರೋ  ಸಂಬಂಧಿಕರು, ಚಾರ್ಜ್ ಇಲ್ದೇ ಇರೋ ಸ್ಮಾರ್ಟ್ ಫೋನ್ ಇದ್ದಂಗೆ , ಅವರೆಷ್ಟೇ ಸ್ಮಾರ್ಟಾಗಿದ್ರು ಕೆಲ್ಸಕ್ ಬರಲ್ಲ

---------------------------------------------------------------------------------------------------------
ಈ ಲೈಫ್ ಅನ್ನೋದು ಒಂಥರಾ ರನ್ನಿಂಗ್ ರೇಸ್ ಇದ್ದಂಗೆ .  ನಾವ್ ಓಡ್ವಾಗ ಸಾಕ್ಸ್ ನಲ್ಲಿ ಸೇರ್ಕೋಳೋ ಮರಳು ಥರ ಈ ಕಷ್ಟಗಳು ಮರಳಿ ಮರಳಿ ಬರ್ತಾನೆ ಇರ್ತಾವೆ . ಆದ್ರೆ ನಾವ್ ಸಾಕ್ಸಲ್ಲಿ ಮರಳಿದೆ ಅನ್ನ್ನೋದನ್ನ ಮರೆತು, ಮರಳಿ ಯತ್ನಿಸಿದರೆ  ದಡ ಸೇರಬಹುದು =D =D
-----------------------------------------------------------------------------------------------------------
ಮಕ್ಕಳು ಬೆಳೆದಂತೆಲ್ಲಾ , ಈ ಅಪ್ಪ ಅಮ್ಮ ಅಯ್ಯೊ ಜವಾಬ್ದಾರಿ ಹೆಚ್ಚಾಯಿತು ಭಾರ ಜಾಸ್ತಿಯಾಯ್ತು ಹಾಗೆ ಹೀಗೆ ಅಂತೆಲ್ಲ ಅಂತಾರೆ. ಅದೇನೋ ಗೊತ್ತಿಲ್ಲ, ಆದ್ರೆ ಮಕ್ಕಳಿಗಂತು ಭಾರ ಕಡಿಮೆ ಆಗೋದು ಖಂಡಿತ. ಹೇಗೆ ಅಂತೀರಾ? ನೋಡಿ ನಾವೆಲ್ಲ ಸ್ಕೂಲ್ ನಲ್ಲಿ ಇದ್ದಾಗ ಒಂದ್ ಒಂದ್ ಮೂಟೆ ಬುಕ್ ಹೊತ್ಕೊಂಡ್ ಹೋಗ್ತಿದ್ವಿ ಕೈಯಲ್ಲೊಂದು ಲಂಚ್ ಬ್ಯಾಗು, ಹಿಂದೆ ಒಂದು ಮಣ ಭಾರ ಇರೋ ಸ್ಕೂಲ್ ಬ್ಯಾಗು ಒಂದ್ ಒಂದ್ ಹೆಜ್ಜೆ ಇಡ್ಬೇಕಾದ್ರು ಹಿಂಚಲನೆ.  ಅದೇ ಕಾಲೇಜಿಗೆ ಹೋಗ್ವಾಗ? ಒಂದ್ ನೋಟ್ ಬುಕ್ ತಗೊಂಡ್ ಹೋದ್ರೆ ಅದೇ ಪುಣ್ಯ,  ನಾನಂತು ನೋಟ್ಸ್ ಬರೀತಾ ನೇ ಇರ್ಲಿಲ್ಲ ಬಿಡಿ. ನನ್ ನೋಟ್ ಬುಕ್ ಒಂಥರಾ  ಎಲ್ಲರ ಹಸ್ತಾಕ್ಷರ ಇರೋ "ಆಟೋಗ್ರಾಫ್ ಬುಕ್" ಇದ್ದಂಗಿತ್ತು. ಪ್ರೀತಿಯ ಪೊಷಕರೆ ಹಾಗೂ ಶಿಕ್ಷಕರೆ ನಿಮ್ಮ ಮಕ್ಕಳ ಬೆನ್ನು ಕಾಮನಬಿಲ್ಲು ಆಗೋಕ್ ಮುಂಚೆ. ಎಚ್ಚೆತ್ತುಕೊಳ್ಳಿ. ಬುಕ್ ಕಡಿಮೆ ಮಾಡಿಸಿ. ಎಲ್. ಕೆಜಿ ಮಗೂಗೆ ಎಮ್.ಬಿ,ಬಿ.ಎಸ್ ಲೆವೆಲ್ಗೆ ಟಾರ್ಚರ್ ಮಾಡ್ಬೇಡ್ರಪ್ಪೊ.ನಿಮ್ಮ ಪುಟ್ ಪುಟಾಣಿ ಮಕ್ಕಳ ಮೇಲೆ ಕರುಣೆ ಇರಲಿ.

------------------------------------------------------------------------------------------------------------
ಹುಡಿಗಿಯರ ಪೋಟೋ/ಸ್ಟೇಟಸ್ ಗಳಿಗೇ ಹೆಚ್ಚು ಹೆಚ್ಚು ಲೈಕ್/ಕಾಮೆಂಟ್ಸ್ ಬರ್ತಾವೆ ಅಂತ ಸ್ವತ: ಕಾಮೆಂಟ್ ಮಾಡಿದ ಹುಡುಗರೇ ಕಾಮೆಂಟ್ ಮಾಡ್ತಾರೆ. ಆದ್ರೆ ಇದು ನಮ್ ಪ್ರಾಬ್ಲಮ್ ಅಲ್ಲ ಹಾಗೂ ಇದರಿಂದ ನಮ್ಗೆ ಪ್ರಾಬ್ಲಮ್ಮೂ ಇಲ್ಲ ಯಾಕೆಂದ್ರೆ ನಮಗೆ ಗೊತ್ತು " ಹುಡುಗರು ಕಾಮೆಂಟ್ ಮಾಡೋಕೆ ಲೈಕ್ ಮಾಡ್ತಾರೆ ಅಂತ, ಅದು ಯಾವ್ ಮಟ್ಟಕ್ಕೆ ಅಂದ್ರೆ ರೋಡ್ ನಲ್ಲಿ ಅವ್ರ್ ಪಾಡಿಗೆ ಹೋಗ್ತಾ ಇರೋ ಹುಡುಗಿ ಮೇಲೂ ಕಾಮೆಂಟ್, ಅವರೇ ಆಯ್ಕೆ ಮಾಡಿ ಕೊಂಡ ಗರ್ಲ್ ಪ್ರೆಂಡ್ ಮೇಲೂ ಕಾಮೆಂಟ್, ಕಡ್ ಕಡೆಗೆ ಅಯ್ಯೊ ದೇವ್ರ್ ಯಾಕಾದ್ರೂ  ಇವಳ್ನಾ ಮದ್ವೆ ಮಾಡ್ಕಂಡ್ನ್ನಪ್ಪ? ಯಪ್ಪಾ ದೇವ್ರೆ !! ಯಾಕಪ್ಪಾ ಈ ಪಾಪಿನ ಇನ್ನು ಬದುಕಿಸಿದ್ದೀಯಾ ಅಂತ ಅವ್ರ್ ಮೇಲ್ ಅವ್ರೆ ಕಾಮೆಂಟ್.!! ಯಾಕ್ ಹೇಳಿ? ಯಾಕಂದ್ರೆ "ಬಾಯ್ಸ್ ಲೈಕ್ಸ್ ಟು ಕಮೆಂಟ್" ಆದ್ರೆ ನಿಮ್ಮ ಈ ಕಮೆಂಟ್ಗಳನ್ನು ನಾವ್ ಲೈಕ್ ಮಾಡಲ್ಲ  . ಏ ಥೂ :P :P :P  (So don't comment  okay ?? ;) ;) :P =D )
-------------------------------------------------------------------------------------------------------

ನೋಡ್ರಪ್ಪ ಶೂನೂ ಸ್ಕೂಲ್ ನಲ್ಲೆ ತಗೋಬೇಕಂತೆ!! ಬಹುಶ: ಬಾಟಾ ಕಂಪನಿಯವ್ರ್ ಜೊತೆನೂ ಟೈ-ಅಪ್ ಮಾಡ್ಕೊಂಡಿರ್ಬೇಕು ಈ ಸ್ಕೂಲ್ ನವ್ರು ಅದ್ಕೆ ಈ ಕಂಡೀಷನ್ ಹಾಕ್ತಾವ್ರೆ. ಎಲ್. ಕೆ ಜಿ ಮಗೂಗೆ ಒಂದ್ ಲಕ್ಷ   ಅಡ್ಮಿಷನ್ ಅಂದ್ರೆ  300ದಿನ ದಲ್ಲಿ ಅದೇಷ್ಟ್ ಕಲಿಸ್ ಬಿಡ್ತಾರೆ? ಸಧ್ಯ ಇಂಗ್ಲೀಷ್ ಅಲ್ಪಬೆಟ್ ನಲ್ಲಿ ಇರೋದು 26 ರೇ ಅಕ್ಷರ ಬದುಕಿದಾ ಪಡಜೀವಿ ಪೋಷಕ
-------------------------------------------------------------------------------------

ಅಡುಗೆ ಮಾಡುವಾಗ ಹೆಂಡತಿಗೆ ಆ...ಕ್ ಕ್ಷೀ.....!!! ಬಂದ್ರೆ, ಅದನ್ನು ನೋಡಿದ ಗಂಡನಿಗೆ ಊಟಮಾಡುವಾಗ ವಾಂತಿನೇ ...... ಬರುತ್ತೆ ,
ಆದರ್ಶ ದಾಂಪತ್ಯ !!!

ಬುದ್ದನ ಪ್ರತಿಮೆ

ಆಸೆ ಬುರುಕಿ ಹುಡುಗಿಗೆ 
ಆತ ಬುದ್ದನ ಪ್ರತಿಮೆಯನ್ನು 
ಉಡುಗೊರೆಯಾಗಿ ಕೊಟ್ಟ 
ಮರುಕ್ಷಣವೇ ,
ಆಕೆ ಆ ಹುಡುಗನ 
ಆಸೆಯನ್ನೇ ಬಿಟ್ಟಳು 
(inspiration Hebbal flyover)
ಮರೆವಿನ ಮಾತ್ರೆಯ ನುಂಗದ ಹೊರತು ಒಲಿಯದಣ್ಣ ಬದುಕು.
ಕೈ ಕೊಟ್ಟ ಹುಡುಗಿ ನೆನಪಲ್ಲಿ ಲೈಫ್ ಹಾಳ್ಮಾಡ್ಕೋ ಬ್ಯಾಡ್ರಪ್ಪ ತಮ್ಮಂದಿರ .......... ಮರೆತು ಬಿಡಿ

Tuesday 17 June 2014

(ಮತ್ತೆ ಮತ್ತೆ ಹೇಳ್ತಿದ್ದೀನಿ) ,ತುಂಬಾ ಜನ ನಂಗೆ ಜಂಭ ಜಾಸ್ತಿ ಅಂತ ಮಾತಾಡ್ಕೋತಾರೆ . ಆದ್ರೆ ಯಾರೇನೇ ಹೇಳ್ಕೊಳ್ಳಿ , ನಂಗೆ ಜಂಭ ಇಲ್ಲ ಅಂತ ನಾನು ಜಂಭದಿಂದ ಹೇಳ್ಕೊತೀನಿ

Friday 6 June 2014

ಸೊಸೆ ಬೇರೆ ಜಾತಿ ಆಗಿರ್ಬಹುದಂತೆ, ಆದ್ರೆ ಅಳಿಯ ಬೇರೆ ಜಾತಿ ಆಗಿರ್ಬಾದಂತೆ, ಕೇಳ್ರಾಪ್ಪ ಕೇಳೆ ಇದು ಗಂಡು ಮಕ್ಕಳಿಲ್ಲದ ಪೋಷಕರ ಮಾತುಗಳು

ನನ್ನ ಗೆಳತಿಯೊಬ್ಬಳಿಗೆ ವರಾನ್ವೇಷಣೆ ನಡೀತ ಇತ್ತು, ಸುಮಾರು ೯ ವರ್ಷದ ಗೆಳೆತನವಾದ್ದರಿಂದ ನಮ್ಮ ಮನೆಯವರಿಗೂ ಅವಳ ಪರಿಚಯವಿದೆ , ಅವಳಿಗಾಗಿ ಒಬ್ಬ ಒಳ್ಳೆ ಗಂಡು ನೋಡಬೇಕಾಗಿ ಅಪ್ಪನಿಗೂ ತಿಳಿಸಿದ್ದೆ. ಹೀಗೆ ಅವಳ್ಳೊಮ್ಮೆ ಮನೆಗೆ ಬಂದಾಗ ಈ ಮಾತು ಪ್ರಸ್ತಾಪವಾಯಿತು. ನನ್ ಗೆಳತಿ ಹೇಳಿದ್ಲು "ಅಂಕಲ್ ಎನ್ಮಾಡೋದು ನಮ್ಮಲ್ಲಿ ಗಂಡ್ ಮಕ್ಕಳು ಕಡಿಮೆ ,ಗಂಡು ಸಿಗೋದು ತುಂಬಾ ಕಷ್ಟ , ಅದ್ರಲ್ಲೂ ಓದಿರೋ ಗಂಡು ಸಿಗೋದೆ ಇಲ್ಲ"
ಅಮ್ಮ: ನೀನೇನ್ ಬಿಡು ಒಳ್ಳೆ ಹುಡುಗಿ, ಸೈಲೆಂಟ್ ,ಓದಿದ್ದೀಯ ಒಳ್ಳೆ ಹುಡುಗಾನೆ ಸಿಕ್ತಾನೆ,
ನಮ್ಮ ಅಪ್ಪ ಇನ್ನೊಂದು ಹೆಜ್ಜೆ ಮುಂದಿ ಹೋಗಿ, ನಾನ್ ಪರಿಚಯ ಇರೊರ್ ಹತ್ತಿರ ವಿಚಾರಿಸಿ ಹೇಳ್ತೀನಿ ಬಿಡಮ್ಮ ನೀನೇನ್ ತಲೆ ಕೆಡಿಸಿಕೊಳ್ಳಬೇಡ, ನಿನ್ನಂತ ಒಳ್ಳೆ ಹುಡುಗಿಗೆ ಗಂಡು ಸಿಗಲ್ವಾ ನಿಜ ಹೇಳ್ತೀನಿ ನಮ್ ನಂದಿನಿ ಏನಾದ್ರೂ ಗಂಡ್ ಮಗ ಆಗಿದ್ರೆ ನಿಂಗೆ ಕೊಟ್ಟು ಮದ್ವೆ ಮಾಡ್ತಿದ್ದೆ.
ಅ ಪೆದ್ದು ಪುಟ್ಟಿ ಹೋ!! ಹೌದಾ ಅಂಕಲ್ ಥ್ಯಾಂಕ್ಯು ನೀವು ನನ್ನ ಮೇಲೆ ಇಟ್ಟಿರೊ ಅಭಿಮಾನಕ್ಕೆ ಅಂತು.
ನಾನ್ಗ್ಯಾಕೊ ರೇಗೋಯ್ತು . ಆ ಹಾ ಏನ್ ಚೋಡ್ತಿಯಣ್ಣಾ, ಈ ಡವ್ ಎಲ್ಲಾ ಮಾಡ್ಬೇಡಾ
ನೀನು ಜಾತಿ ರಾಮಾಯಣ ಮಾಡೋರು ನೀವು ಜಾತಿ ಅಡ್ಡ ಬರಲ್ವಾ ?
ನೋಡ್ ಕೂಸು ಈ ಜಾತಿ ಗೀತಿ ಎಲ್ಲಾ ಏನು ಇಲ್ಲ ಎಲ್ಲಾ ಒಂದೇ ಜಾತಿ ಮನುಷ್ಯ ಜಾತಿ
(ನಾನು ವ್ಯಂಗ್ಯವಾಗಿ) ಹೋ ಹೌದಾ ? ಹಾಗಾದ್ರೆ ನಾನು ಒಂದ್ ಹುಡಗನ್ನ ಪ್ರೀತಿ ಮಾಡ್ತೀನಿ ಮದ್ವೆ ಮಾಡ್ಸು ಮತ್ತೆ, ಆವಾಗ್ ಒಪ್ಪ್ತೀನಿ ನಿನ್ ಮಾ............ತ್ನಾ...........
ಅಪ್ಪ ಅಮ್ಮ ಇಬ್ಬರ ಮುಖದಲ್ಲೂ ಒಂದು ದೊಡ್ಡ ಎ‌ಕ್ಸ್ಲಾಮೇಟರಿ ಮಾರ್ಕ್!!!
(ಅಮ್ಮ ಮತ್ತೆ ನನ್ನ ಗೆಳತಿ ಜೋರಾಗಿ ನಗೋಕೆ ಶುರುಮಾಡಿದ್ರು ) ನಮ್ಮಮ್ಮ : ಅದಕ್ಕೆ ಹೇಳೋದು ಹೋಗಿ ಹೋಗಿ ಇವ್ಳ್ ಜೊತೆ ಮಾತಿಗಿಳಿತೀರಾ? ಅದೇನೋ ಹೇಳಿ ಈಗಾ....
ಹ್ಮ್ ಹ್ಮ್ ಹೇಳು ಹೇಳು ಏನ್ಮಾಡ್ತೀಯಾ ? ಇವತ್ತ್ ಹೇಳಿದ್ ಮಾತು ಮತ್ತೆ ಉಲ್ಟಾ ಹೊಡಿಬಾರ್ದು ??
ಅಪ್ಪ: ಅದೂ ............... ಅದ್ ಬೇರೆ ಇದ್ ಬೇರೆ
ವೋ.......... ಅದ್ ಹೆಂಗೆ?
ಅಪ್ಪ: ನಮ್ಮನೆ ಸೊಸೆ ನಮ್ ಮನೆ ಮಗಳು ಇದ್ದಂಗೆ ಮದ್ಪೆ ಆಯ್ತಾ? ಆಮೇಲೆ ನಮ್ಮಂತೆ ಮತಾಂತರ ಮಾಡಿ ದೇವಸ್ಥಾನಕೆ ಹೋಗಿ ದೀಕ್ಷೆ ಕೊಡಿಸಿ ಕರ್ಕೊಂಡ್ ಬಂದ್ರೆ ಆಯ್ತು, ಆದ್ರೆ ಮಗಳಂದ್ರೆ ಆ ಮನೆಗೆ ಹೋದ್ ಮೇಲೆ ಅವರಂತೆ ಇರ್ಬೇಕಾಗುತ್ತೆ. ಮತ್ತೆ ಈ ಮನೆಗೆ ಬಂದ್ರೆ ಎಲ್ಲಾ ಓಕ್ ಮಾಕಳಿ
ಹ್ಮ್ ಹ್ಮ್ ಅಂದ್ರೆ.......... ಮಗಳು ಸತ್ರು ಸೊಸೆಯಲ್ಲಾದ್ರೂ ನಿಮ್ಮ್ ಜಾತಿ ಉಳಿಸಿಕೊಳ್ಬೇಕು ಅಂತಾನಾ? ನಿಮ್ಗೆ ಗಂಡ್ ಮಗ ಇಲ್ಲ ಅನ್ನೊ ಕಾರಣಕ್ಕೆ ಈ ಮಾತು ಹೇಳ್ತಾ ಇದ್ದೀರಾ ಇಲ್ಲಾ ಅಂದ್ರೆ ಬೇರೇನೆ ಡೈಲಾಗ್ ಹೋಡಿತಾ ಇದ್ರು ಅಲ್ವಾ?
ಅಪ್ಪ ಅಷ್ಟೊತ್ತಿಗೆ ಏಯ್ ಟೈಮ್ ಆಯ್ತು ಹೋಗ್ ಬಸ್ ಸ್ಟಾಪಿಗ್ ಬಿಟ್ಬಾ ಲೇಟ್ ಆದ್ರೆ ಅವ್ರ್ ಮನೇಲ್ ಬಯ್ಯ್ಕೋತಾರೆ
ಆಯ್ತ್ ಬಿಡಪ್ಪ ತಂದೆ ಮಾತು ಮರೆಸ್ ಬೇಡಾ ಹೋಗ್ತೀನಿ, ಬೇರೇಯವ್ರ್ ಮಕ್ಕಳಿಗೆ ಮದ್ವೆ ಮಾಡುವಾಗ ಜಾತಿ ಅಡ್ಡ ಬರಲ್ಲ ಅದೇ ತಮ್ಮ ಮಕ್ಕಳಿಗೆ ಅಂದ್ರೆ ಹಿಂಗೆ, ಅಂತ ಹೋರ್ಟ್ವಿ
ನನ್ ಪ್ರೆಂಡ್ : ನಿಂಗ್ ಎಷ್ಟು ದೈರ್ಯ ಇದ್ರೆ ನಿಮ್ಮಪ್ಪನ ಎದ್ರು ಇಷ್ಟು ಮಾತಾಡ್ತೀಯಾ?
ಏ ಸುಮ್ನಿರು ಮಗ ಹೇಳಿದ್ ತಕ್ಷಣ ನಾನೇನ್ ಓಡೋಗ್ ಬಿಡ್ತೀನಾ? ಅವ್ರೂ ಪ್ರಾಕ್ಟಿಕಲ್ ಆಗಿ ಯೊಚ್ನೆ ಮಾಡ್ಲಿ ಅಂತ ಹೇಳ್ದೆ ಇದು ನಮ್ಮನೇಲಿ ಕಾಮನ್ ಆವ್ರು ಏನು ತಿಳ್ಕೋಳಲ್ಲ.
ಅಪ್ಪ ಈ ವರೆಗೂ ತುಂಬಾ ಮದುವೆ ಮಾಡಿಸಿದ್ದ್ದಾರೆ ಅದರಲ್ಲಿ ಅಂತರ್ಜಾತೀಯ ವಿವಾಹಗಳು ಇವೆ ಆದ್ರೂ ಅವ್ರ್ ಮಕ್ಕಳು ವಿಷಯ ಬಂದ್ರೆ ಸೆನ್ಸಿಟೀವ್ ಆಗ್ತಾರೆ ಹ್ಮ್.......... ಏನು ಮಾಡೋಕಾಗಲ್ಲ.... ಈ ಜಾತಿ ಭೂತ ಅಷ್ಟು ಸುಲಭವಾಗಿ ಬಿಟ್ಟು ಹೋಗೋದಿಲ್ಲ. ಅಲ್ವಾ?

Sunday 1 June 2014

ಹಳ್ಳಿ ಗಾದೆ
" ಕೊಟ ಕೊಟ ಅನ್ನೊ ಮಳೆ  ಬ್ಯಾಡ, ಲೊಟ  ಲೊಟ ಅನ್ನೋ ಗಂಡ ಬ್ಯಾಡ "
(ಅಪ್ಪ ಹೇಳಿದ್ದು, :)  ಹೆಂಗಿದೆ ಅಲ್ವಾ ? )
ಯಾವಾಗ್ಲೂ ಬಸ್ ಕಂಡಕ್ಟರ್ ಗಳನ್ನೆ ದೂರೋದು ತಪ್ಪು ರೀ....... ಮೊನ್ನೆ ಹಾಗನ್ನಿಸಿತು

ಮೊನ್ನೆ ನಮ್ಮ ಎದುರು ಮನೆ ಹುಡುಗಿಯ ಮದುವೆ ನೆಲಮಂಗಲದಲ್ಲಿ ಇತ್ತು.  ಬುಧವಾರ ಗುರುವಾರ ಬೇರೆ ಇತ್ತು. ಆ ಹುಡುಗಿ ಅಪ್ಪನಿಗೆ ಸ್ವಲ್ಪ ದುಡ್ಡಿನ ಕೊಬ್ಬು ಮತ್ತು ಕೊಚ್ಚಿಕೊಳ್ಳೋದು ಜಾಸ್ತಿ. (ಅದಕ್ಕೆ ಹೆಚ್ಚು ವರದಕ್ಷಿಣೆಗೆ ಡೀಲ್ ಮಾಡ್ಕೊಳ್ಳೊ ಹಾಗಾಯಿತು) ನಂದಿನಿ ಲೇಔಟ್ ನಿಂದ ಬಸ್ ಮಾಡ್ತೀನಿ, ಬಸ್ ಮಾಡ್ತಿನಿ ಅಂತ ಹೇಳಿ ಹೇಳಿ ಕಡೆಗೆ ರೈಲ್ ಬಿಟ್ ಬಿಟ್ರು. ಬಸ್ಸು ಇಲ್ಲ ಎಂತದು ಇಲ್ಲ, ಸಮಯ  ಸಂಜೆ  ೭.೩೦ ಆಗ್ಬಿಟ್ಟಿತ್ತು, ಇನ್ನೇನ್ ಮಾಡೋದು ಅಪ್ಪ ಊರಲ್ಲಿ ಇರ್ಲಿಲ್ಲ ಬೆಳಗ್ಗೆ ಆಪೀಸಿಗೆ ರಜಾ ಹಾಕಿ ಮದುವೆಗೆ ಹೋಗೋಕೆ ಆಗಲ್ಲ, ಹೋಗೋದ್ ಬೇಡ ಅನ್ನೋ ಹಾಗೂ ಇಲ್ಲ,  ಯಾಕೆಂದ್ರೆ ಅವ್ರು ನಮ್ಮ ಅಕ್ಕನ ಮದ್ವೆಗೆ ಬಂದಿದ್ರು , ಬೆಳಗೆ ಎದ್ದು ಮುಖ ನೋಡ್ವಾಗಲೆಲ್ಲ ಬಯ್ಯೊಕೋತಾರೆ ಅಷ್ಟೆ ಮತ್ತೆ ನನ್ ಮದ್ವೆ ಬೇರೆ ಲಿಸ್ಟ್ ನಲ್ಲಿ ಇದೆ, ಹಾಗಾಗಿ, ಅಮ್ಮ ನಾನು ಆರತಕ್ಷತೆಗೆ ಹೋಗಿ ಬರುವ ಅಂತ ಬಿ.ಎಂ.ಟಿ.ಸಿ. ಬಸ್ಸು ಹಿಡಿದು ಹೊರಟ್ವಿ, ಊಟ ಎಲ್ಲ ಮುಗೀತು ಮತ್ತೆ ವಾಪಾಸ್ ಬರುವಾಗ ಬಸ್ ನಂ.೨೫೮ ಸಿ. ಯಶವಂತ್ ಪುರ ಬಸ್ ಹತ್ಕೊಂಡ್ವಿ. ನಾನು  ಎರಡನೆ ಸೀಟ್ನಲಿ ಕುಳಿತಿದ್ದೆ, ಮಾರ್ಗ ಮಧ್ಯ ಒಂದು ಹುಡುಗಿ ಬಸ್ ಹತ್ಕೊಂಡ್ಲು. ಎರಡನೆ ಸ್ಟಾಪ್ ಇಳಿತೀನಿ ಕಂಡಕ್ಟರ್ ಕೈನಲ್ಲಿ ಎರಡು ರುಪಾಯಿ ಕೊಟ್ಲು .
ಆಗ ಆ ಕಂಡಕ್ಟರ್,  ಆರು ರುಪಾಯಿ ಕೊಡಮ್ಮ ಟಿಕೆಟ್ ಆರು ರೂಪಾಯಿ ಅಂದ್ರು
ರೀ ನೀ ಮೊದ್ಲು ಟಿಕೇಟ್ ಕೊಡ್ರಿ  (ಆ ಹುಡುಗಿ ದಪ್ಪ ದಪ್ಪ ಗೆಡ್ಡೆಗಣ್ಣು ಬಿಟ್ಕೊಂಡು)
ದುಡ್ ಕೊಡ್ದೆ ಟಿಕೇಟ್ ಕೊಡ್ತಾರೆನಮ್ಮ (ಕಂಡಕ್ಟರ್)
ನಂಗೊತ್ತಿಲ್ವ ನಿಮ್ ಬುದ್ದಿ ಅದೆಷ್ಟು ಜನರಿಗೆ ಮೋಸ ಮಾಡಿದ್ದೀರಾ ಅಂತ,  (ಹುಡುಗಿ ಜೋರಾಗಿ ಕಿರಿಚಿಕೊಂಡು ಹಾಗೆ ಹೀಗೆ ಅಂತ ಬಯ್ಯೊಕೆ ಶುರುಮಾಡಿದ್ಲು)
ಅವ್ನ್ಯಾವನೋ ಏನೋ ಮಾಡಿದ್ರೆ ನಮ್ಗೇನ್ ಹೇಳ್ತಿಯಾ ಸುಮ್ನೆ ಟಿಕೇಟ್ ತಗೊಳಮ್ಮ ಎಷ್ಟ್ ಮಾತಾಡ್ತೀಯ (ಕಂಡಕ್ಟರ್)
ಹೌದಯ್ಯ ನಾನ್ ಜಾಸ್ತಿ ಮಾತಾಡ್ತೀನಿ ಏನಿವಾಗ ? ನೀನ್ ಮಾತಾಡೋದು ಮೊದ್ಲು ಕಲಿ ನಾನ್ ಐನೂರು ರುಪಾಯಿ ದಂಡ ಕಟ್ಟಿದೀನಿ ನಿಮ್ಗೇನು ಗೊತ್ತು.
ಮ್ಮೌ ?? ದಂಡ ಕಟ್ದೆ ದಂಡ ಕಟ್ದೆ ಅಂತೀಯಲ್ಲ ಮತ್ಯಾಕಮ್ಮ ನನ್ ಕೈಗೆ ಎರಡು ರುಪಾಯಿ ಕೊಟ್ಟೆ? (ಕಂಡಕ್ಟರ್)
ಹಿಂಗೆ ಜಟಾಪಟಿ ನಡೀತು  ಹುಡುಗಿ ಬಾಯಿ ಮುಚ್ಚಲೇ ಇಲ್ಲ, ಆಗ ಬಸ್ ನಲ್ಲಿ ಇಲ್ಲ ಬುದ್ದಿ ಜೀವಿಗಳು ಹೋಗ್ಲಿ ಬಿಡ್ರಿ ಅಂತ ಕೂತಲ್ಲೆ ಸಮಾದಾನ  ಹೇಳೋಕೆ ಶುರು ಮಾಡಿದ್ರು. ನಾನ್ ನಗ್ತಾ ಕೂತಿದ್ದೆ, ಆಗ ಪಾಪ ಆ ಕಂಡಕ್ಟರ್ ನನ್ ಕಡೆ ತಿರುಗು ನೀವೆ ನೋಡಿ ಮೇಡಂ ನನ್ದೇನಾದ್ರು ತಪ್ಪು ಇದಿಯಾ? ಏನೋ ನನ್ ಟೈಂ ಏ ಸರಿ ಯಾಗಿಲ್ಲ ಅಂತ ತಲೆ ಚಚ್ಕಂಡ್ರು, ನಂಗೆ ಪಾಪ ಅನಿಸ್ತು. ಆ ಹುಡುಗಿಗೆ ಯಾಕ್ರಿ ಅಷ್ಟೋಂದು ಮಾತಾಡ್ತಿರಾ? ನಾನು ಅವಾಗ್ಲಿಂದ ನೋಡ್ತಾನೆ ಇದ್ದೀನಿ ಅತಿಯಾಯ್ತು ನಿಮ್ದು ಟಿಕೆಟ್ ತಗೋಳೋದು ಬಿಟ್ಟು ಸುಮ್ನೆ ಗಲಾಟೆಮಾಡ್ತೀರ ಅಂದೆ. ಆಗ ಎಲ್ಲಾ ಆ ಹುಡುಗಿಗೆ ಬಯ್ಯೊಕೆ  ಶುರುಮಾಡಿದ್ಲು. ಆಗ ಆಕೆ ಗೊಣ ಗೊಣಗುಟ್ಟುತ್ತ ಬಸ್ ಇಳಿಸು ಹೋದ್ಲು. (ನಮ್ಮಮ್ಮ ಸರಿಯಾಗೆ ಹೇಳ್ದೆ ಕಣೆ ಅಂದ್ರು)
ಇಷ್ಟಾಯ್ತು ನೋಡಿ, ತುಂಬಾ ಕಂಡಕ್ಟರ್ ಗಳು ಟಿಕೆಟ್ ಕೊಡದೆ ಏಮಾರಿಸೋದು ನಿಜ ನಾನು ತುಂಬಾ ಸಲ ನಿರ್ವಾಹಕರೊಂದಿಗೆ ಜಗಳಕ್ಕೆ ಆಡಿದುಂಟು . ಆದ್ರೆ ಈ ಮೇಲಿನ ಸಂಧರ್ಬದಲ್ಲಿ ದಲ್ಲಿ ನಿರ್ವಾಹಕನ ತಪ್ಪು ಏನು ಇಲ್ಲ. ಆ ಹುಡುಗಿಗೆ ಟಿಕೇಟ್ ತಗೊಳ್ಳೋ ಉದ್ದೇಶನೇ ಇರ್ಲಿಲ್ಲ. ನಾವೆ ಹೀಗೆ ಎರಡು ರೂಪಾಯಿ ಮೂರು ರೂಪಾಯಿ ಕೊಟ್ಟು ನಿರ್ವಾಹಕರನ್ನು ತಪ್ಪು ದಾರಿಗೆ ಎಳೆಯೋದು ತಪ್ಪು ಅಲ್ವಾ? ಅದರ ಹೊಣೆ ಹೊರಬೇಕಾದವ್ರು ನಾವೆ ತಾನೆ?
ಆವತ್ತು ಗುರುವಾರನೋ ಸಂಕಷ್ಟ ಹರನೋ ಇರುತ್ತೆ , ಸೊ ಉಪವಾಸ ಇರ್ತೀರಾ, ಬರೋಬ್ಬರಿ ಒಂದ್ ಕಿಲೋಮೀಟರ್  ಬೇರೆ ನಡೆದಿರ್ತೀರ , ಸಂಜೆ ಆಗಿರುತ್ತೆ ಬಿ  ಎಂ ಟಿ ಸಿ ಬಸ್ಸಲ್ಲಿ ಸೀಟ್ ಇಲ್ದೆ ಒಂದ್ ಗಂಟೆಯಿಂದ ನಿನ್ಕೊಂಡೆ  ಇರ್ತೀರಾ ಆಗ ಯಾರೋ ಇಳ್ಕೊತಾರೆ, ಉಸ್ಸ್ ಅಪ್ಪ ಸದ್ಯ  ಸೀಟ್ ಸಿಗ್ತಲ್ಲ ಅಂತ  ಇನ್ನೇನ್  ಕೂತ್ಕೊಬೇಕು, ಅನ್ನೋ ಅಷ್ಟ್ರ್ರಲ್ಲಿ ಯಾವ್ದೋ ಅಜ್ಜಿನೋ ತಾತನೋ ಬಸ್ ಹತ್ತುತ್ತಾರೆ   ಸೀಟ್ ಬಿಡಂಗಿಲ್ಲ ಬಿಡದೆ ಇರಂಗಿಲ್ಲ , ಬ್ಯಾಡ್ ಬ್ಯಾಡ ಆ ಧರ್ಮ ಸಂಕಟ , ರನ್ನಿಂಗ್ ರೇಸ್ ಹೊರಟಾಗ ಸಾಕ್ಸ್ ಒಳಗಡೆ ಮರಳು ಸೇರ್ಕಂಡಂಗೆ ಇರುತ್ತೆ ನಮ್ ಪರಿಸ್ "ತಿಥಿ" ಅಲ್ವ್ರಾ?
ಸುಮ್ ಸುಮ್ನೆ ವೀಟ್ (Waxing cream) ಜಾಹಿರಾತಿಗೆ ಕಾನ್ಸೆಪ್ಟ್
ರಮೇಶ್ ಸುರೇಶ ಅಂತಾ ಇಬ್ರು 5 ಸ್ಟಾರ್ ಫ್ರೆಂಡ್ಸ್ ಇರ್ತಾರೆ,ರಮೇಶ್  ಬಾಂಡ್ಲಿ ಅಂತ ಯಾವ್ ಹುಡುಗಿನು ಅವನ ಕಡೆ ತಿರುಗಿ ನೋಡ್ತಾ ಇರ್ಲಿಲ್ಲ , ಸುರೇಶ ಜಾಲಿ ಯಾಗಿ ಇರ್ತಾನೆ , ಮೊದ್  ಮೊದಲು ರಮೇಶ್ಗೆ ಸುರೇಶನ ಮೇಲೆ ಬೇಜಾರುತ್ತೆ ಬೇಜಾರು ಕೋಪಕ್ಕೆ  ತಿರ್ಗುತ್ತೆ , ಕೋಪದಿಂದ ದ್ವೇಷ , ವೈರಿಗಳಾಗುತ್ತಾರೆ  ಆಗ ,ಒಂದಿನ ಯಾರೋ  ತರಲೆಗಳು ಸುರೇಶana ಶಾಂಪು ಬಾಟಲ ತುಂಬಾ  ವೀಟ್ ತುಂಬಿಸಿ ಇಡ್ತಾನೆ ತಲೆಗೆ ಹಚ್ಕೊಂಡ್ ತಕ್ಷಣ  ಇವನೂ ಬಾಂಡ್ಲಿ ಯಾಗ್ತನೆ ಅದೇ ಸಮಯಕ್ಕೆ ರಮೇಶ್ ಬರ್ತಾನೆ. ರಮೇಶ್ !!!! ಸುರೇಶ !! ಒಬ್ಬರನ್ನು ಒಬ್ಬರು ಅಪ್ಕೊಂಡ ಅಳ್ತಾರೆ ಆಗ ಕೋಪ ಹೋಗಿ ಮತ್ತೆ  ಫ್ರೆಂಡ್ಸ್ ಆಗ್ತಾರೆ
ಸ್ನೇಹಕ್ಕೆ ವೀಟ್, ವೀಟ್ ಗ ಸಾಟಿ ವೀಟ್ :) take it easy
ಊರಿಗ್ ಬಂದವ್ಳು ನೀರಿಗೆ ಬರ್ದೇ ಇರ್ತಾಳ? ಇದು ಹಳೆಯ ಗಾದೆ
ಈಗ " ಪೇಸ್ಬುಕ್ಗೆ  ಬಂದವ್ಳು ವಾಟ್ಸಪ್ ಗೆ ಬರ್ದೇ ಇರ್ತಾಳ ? " ಸ್ವಲ್ಪ ಹೊಸದು ಅಲ್ವ್ರಾ?
ದುರುಪಯೋಗವಾಗ್ತಾ ಇದೇಯಾ ಸರ್ಕಾರದ ಯೋಜನೆಗಳು??
ನಂದಿನಿ ಬಡಾವಣೆಗೆ ಸೇರಿದ ಕೃಷ್ಣಾನಂದನಗರ ವೃತ್ತದ ಬಳಿ, ಸರ್ಕಾರದ ಯೋಜನೆಯಡಿಯಲ್ಲಿ ಒಂದು ಶುದ್ಧ ನೀರಿನ ಘಟಕ ಆರಂಭವಾಗಿದೆ. ಜಲಮಂಡಲಿಯವರು ಸರಬರಾಜುಮಾಡುವ ನಲ್ಲಿ ನೀರಿನ ಥರ ಈ ನೀರಲ್ಲಿ ಬ್ಲೀಚಿಂಗ್ ಪೌಡರ್ ವಾಸನೆ ಇರುವುದಿಲ್ಲ , ಬಣ್ಣನೂ ನೂ ಇರುವುದಿಲ್ಲ . ಥೇಟ್ ಆಕ್ವಾಫಿನ ಬ್ರ್ಯಾಂಡ್ ವಾಟರ್ ಬಾಟಲ್ ತರಹ ಇದೆ. ಒಂದು ರೂಪಾಯ್ಗೆ ೧೦ ಲೀಟರ್ ಶುದ್ಧ ನೀರು ದೊರೆಯುವಂತೆ ಮಾಡಿದ ಈ ಯೋಜನೆಗೆ ಧನ್ಯವಾದ , ಹತ್ತಿರದಲ್ಲಿ ಸುತ್ತಮುತ್ತ ಎಲ್ಲೂ ಈ ತರಹದ ಘಟಕ ಇಲ್ಲ.ವಿಷಯ ಏನಪ್ಪಾ ಅಂದ್ರೆ, ಮೊನ್ನೆ ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ ಗಮನಿಸಿದೆ, ಒಬ್ಬ ವ್ಯಕ್ತಿ ಲಗೇಜ್ ಆಟೋನಲ್ಲಿ ಬಂದು ಸುಮಾರು ಕ್ಯಾನ್ ಗಳಿಗೆ ನೀರು ತುಂಬಿಸಿಕೊಂಡು ಹೋದ. ನಮ್ಮನೆಗೆ ಮೂರು ದಿನಕ್ಕೊಮೆ ನೀರು ತರ್ತೀವಿ ಅಷ್ಟೆ. ಅವ ಅಷ್ಟು ನೀರು ತಗೊಂಡು ಹೋಗಿ ಏನ್ ಮಾಡ್ತಾನೆ? ಮಾರಿಕೊಳ್ತಾನ ಅಂತ ಅನುಮಾನ. ಅಪ್ಪನೊಂದಿಗೆ ಈ ವಿಷಯ ಪ್ರಸ್ತಾಪಿಸಿದೆ, ಆಗ ತಿಳಿಯಿತು ಆತನೊಬ್ಬನೆ ಅಲ್ಲ ಇನ್ನೂ ಕೆಲವು ಕೇವಲವಾದ ಮಂದಿ ನೀರನ್ನು ಲಾಭಕ್ಕೆ ಮಾರಿ ಕೊಳ್ಳುವುದೇ ಒಂದು ಬ್ಯುಸಿನೆಸ್ ಮಾಡ್ಕೊಂಡಿದ್ದಾರೆ ಅಂತ. ದಿನಕ್ಕೆ ೧೦ ರಿಂದ ೧೨ ಬಾರಿ ವಿಸಿಟ್ ಕೊಟ್ಟು, ೩೦೦ ರಿಂದ ೪೦೦ ರೂಪಾಯಿ ದುಡ್ಡು ಮಾಡಿಕೊಳ್ಳ್ತಾರಂತೆ. ಯಪ್ಪಾ ಇದು ಎಂಥಾ ಲೋಕವಯ್ಯ? ಜನನಾಯಕರಿಗೆ ತಕ್ಕ ಜನರಾಗ್ತಾ ಇದ್ದಾರಲ್ಲಪ್ಪಾ ಅನ್ಸ್ತು. ಇದೇನು ಹೊಸದಲ್ಲ ಬಿಡಿ ಸ್ವಂತ ಮನೆ ಮಾಲಿಕರು ಮೂರ್ ಮೂರು ಬಿ.ಪಿ.ಎಲ್ ಕಾರ್ಡ್ ಇಟ್ಕೋಂಡಿರೋದು., ಇತ್ಯಾದಿ ಇತ್ಯಾದಿ ಗೊತ್ತಿರೋ ವಿಷಯಾನೆ.
ಒಬ್ಬಬ್ಬರು ಮಾತನಾಡುವಾಗ ಹತ್ತು ನಿಮಿಷದಲ್ಲಿ ಒಂದ್ ಐವತ್ತು ಸಾರಿ ನಾನು ನಾನು ನಾನು ಅಂದಿರ್ತಾರೆ ಏನ್ ಗೊತ್ತಿದ್ದೂ ಅಂತಾರೋ ಗೊತ್ತಿಲ್ದೆ ಅಂತಾರೋ , ಕೇಳೋಕೆ ಹಿಂಸೆ ಅನ್ಸುತ್ತೆ, ಎಷ್ಟ್ ನಾನತ್ವ ! ಇಂಥವರು ಏನನ್ನು ಸಾಧಿಸಲಾರರು ಅನ್ಸುತ್ತೆ , ಯಾಕಂದ್ರೆ ಅವರ ಅರ್ಧ ಜೀವಮಾನ ವನ್ನು ಅವರನ್ನು ಅವ್ರೇ ಹೊಗಳಿಕೊಳ್ಳುವುದರಲ್ಲಿ, ಹಾಗು ಇನ್ನೂ ಅರ್ಧ ಜೀವನವನ್ನು ಮತ್ತೊಬ್ಬರನ್ನು ನಿಂದಿಸುವುದರಲ್ಲೂ ಕಳೆಯುತ್ತಾರೆ , ಯಾರು ಇಲ್ಲಿ ಪರ್ಫೆಕ್ಟ್ ಅಲ್ಲ ಅನ್ನೋ ಸತ್ಯ ಅವ್ರಿಗೆ ಆದಷ್ಟು ಬೇಗ ಅರ್ಥವಾಗಲಿ
ಮಹರಾಜ ಸತ್ತು ಯುವರಾಜ ಹುಟ್ಟಿ ಪಾಳು ತೋಟದಲ್ಲಿ ಹೂಗಳು ಅರಳೊ ಹೊತ್ತು ! ಅಂದ್ರೆ ಯಾವುದು? ಜನಪದರ ಕಥೆ (ಅಪ್ಪ ಹೇಳಿದ್ದು)

ಒಂದೂರಲ್ಲಿ ಒಬ್ಬ ರಾಜ ಇರ್ತಾನೆ. ಒಮ್ಮೆ ಅವನು ವಾಯು ವಿರಾಹಕ್ಕೆಂದು ಹೋಗುತ್ತಾನೆ , ಆಗ ಕುದುರೆ ಸವಾರಿ ಮಾಡುತ್ತಿದ್ದ ಒಬ್ಬ ಸುಂದರ ತರುಣಿಯನ್ನು ನೋಡುತ್ತಾನೆ ಅವಳ ಸೌಂದರ್ಯ ನೋಡಿ ಬೆರಗಾಗುತ್ತಾನೆ. ಇದನ್ನು ಗಮನಿಸಿದ ಮಂತ್ರಿಗಳು ಆಕೆ ಪಕ್ಕದ ರಾಜ್ಯದ ಯುವರಾಣಿ ಎಂದು ಮಾಹಿತಿ ನೀಡುತ್ತಾರೆ. ಆಗ ರಾಜ ಆಹಾ ಎಂಥ ಸುಂದರಿ ಆ ಯುವರಾಣೀ!! ಅವರನ್ನು ಒಮ್ಮೆ ಭೇಟಿಯಾಗಲೇ ಬೇಕಲ್ಲಾ? ಮಂತ್ರಿಗಳೆ" "ಇಂದೇ ಈ ವಿಷಯವನ್ನು ಯುವರಾಣಿಯವರಿಗೆ ಮುಟ್ಟಿ"ಸಿ ಎಂದು ಆಜ್ಞಾಪಿಸುತ್ತಾನೆ, ಆಗ ಮಂತ್ರಿ ಅನುಮತಿಯನ್ನು ಕೋರಿ ಒಂದು ಪತ್ರ ಬರೆದು ರಾಯಭಾರಿಯ ಮೂಲಕ ಕಳುಹಿಸಿಕೊಡುತ್ತಾನೆ. ಅದನ್ನು ಓದಿದ ರಾಜಕುಮಾರಿ, ಆ ರಾಯಭಾರಿಯನ್ನು ಕುರಿತು, " ರಾಯಭಾರಿಗಳೇ, ಮಹಾರಾಜ ಸತ್ತು, ಯುವರಾಜ ಹುಟ್ಟಿ ಪಾಳಾಗಿರೊ ತೋಟದಲ್ಲಿ ಹೂವುಗಳು ಅರಳೋ ಕಾಲದಲ್ಲಿ ನನ್ನನ್ನು ಬೇಟಿಮಾಡಬೇಕಾಗಿ ನಿಮ್ಮ ಯುವರಾಜನಿಗೆ ತಿಳಿಸಿ" ಎಂದು ಒಗಟಿನ ಉತ್ತರ ಹೇಳುತ್ತಾಳೆ. ಯುವರಾಜನಿಗೆ ಇದು ಅರ್ಥವಾಗುವುದಿಲ್ಲ, ಆಸ್ಥಾನಕವಿಗಳು, ಮಂತ್ರಿಗಳು ಯಾರಿಗು ಉತ್ತರ ತಿಳಿಯುವುದಿಲ್ಲ. ಇದು ರಾಜ್ಯದ ಮರ್ಯಾದೆ ಪ್ರಶ್ನೆಯಾಗಿದ್ದರಿಂದ ಒಗಟು ಬಿಡಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ರಾಜ್ಯದ ತುಂಬ ಡಂಗೂರ ಸಾರಲಾಗುತ್ತದೆ.
ಆಗ ಊರಿನ ಸಾಮಾನ್ಯ ಹಳ್ಳಿಗ ಆ ಒಗಟು ಬಿಡಿಸುವುದಾಗಿ ಬರುತ್ತಾನೆ. "ಪ್ರಭುಗಳೆ; , ಮಹರಾಜ ಎಂದರೆ ಲೋಕಕ್ಕೆ ಬೆಳಕು ಕೊಡುವ, ಸಂಜೆಯಾದಾಗ ಮರೆಯಾಗುವ ಸೂರ್ಯ. ಯುವರಾಜ ಅಂದರೆ ಸೂರ್ಯ ಮುಳುಗಿದ ನಂತರ ಹುಟ್ಟುವ ಚಂದ್ರ. ಚಂದ್ರ ಹುಟ್ಟಿದಾಗ ಆ ಆಕಾಶವೆಂಬ ಪಾಳುತೋಟದಲ್ಲಿ ಅರಳುವ ಗಗನಕುಸುಮಗಳೇ ಆ ತಾರಕ್ಕಿಗಳು (ನಕ್ಷತ್ರ) ಆ ಹೊತ್ತು ರಾತ್ರಿ ಮಹಾಪ್ರಭು ಎಂದು ಬಿಡಿಸಿ ಹೇಳುತ್ತಾನೆ. ಆಗ ರಾಜ ಆಹಾ ಆಹಾ!! ಪಾಳು ತೋಟದಲ್ಲಿ ಹೂ ಅರಳೋ ಕಾಲ!! ಅಂದ್ರೆ ರಾತ್ರಿ! ನೋಡಿದಿರಾ ಮಂತ್ರಿಗಳೇ ಯುವರಾಣಿಯ ಒಗಟು ಮಾತನ್ನು ನಮ್ಮ ರಾಜ್ಯದ ಒಬ್ಬ ಸಾಮಾನ್ಯ ಪ್ರಜೆ ಬಿಡಿಸುತ್ತಾನೆ ಎಂದರೆ ಇಂಥಾ ಬುದ್ದಿವಂತ ಪ್ರಜೆಗಳನ್ನು ಹೊಂದಿರುವ ನಾನೇ ಧನ್ಯ! ಎಂದು ಸಾವಿರ ವರಹಗಳನ್ನು ಕಾಣಿಕೆಯಾಗಿ ಕೊಟ್ಟು ಗೌರವಿಸುತ್ತಾನೆ.
ಅಲ್ಲಿಗೆ ಕಥೆ ಮುಗಿಯಿತು

Monday 19 May 2014

Nandhini Nanjappa: "ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ ಬ್ಯಾಡ ಸೂಳೆ ಸಂಗ ಮಾಡಿದ್ರೂ ಗೀಳೆ ಸಂಗಮಾಡ್ಬೇಡ ತಲೆ ಕಡ್ದು ಬಂದ್ರೂ ಹೆಂಡ್ತಿ ಹತ್ತಿರ ನಿಜ ಹೇಳ್ಬೇಡ" ಎಂಬ ಗಾದೆಮಾತಿಗೆ ಅಪ್ಪ ಹೇಳಿದ ಜನಪದರ ಕಥೆ

Nandhini Nanjappa: "ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ ಬ್ಯಾಡ ಸೂಳೆ ಸಂಗ ಮಾಡಿದ್ರೂ ಗೀಳೆ ಸಂಗಮಾಡ್ಬೇಡ ತಲೆ ಕಡ್ದು ಬಂದ್ರೂ ಹೆಂಡ್ತಿ ಹತ್ತಿರ ನಿಜ ಹೇಳ್ಬೇಡ" ಎಂಬ ಗಾದೆಮಾತಿಗೆ ಅಪ್ಪ ಹೇಳಿದ ಜನಪದರ ಕಥೆ: to

"ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ ಬ್ಯಾಡ ಸೂಳೆ ಸಂಗ ಮಾಡಿದ್ರೂ ಗೀಳೆ ಸಂಗಮಾಡ್ಬೇಡ ತಲೆ ಕಡ್ದು ಬಂದ್ರೂ ಹೆಂಡ್ತಿ ಹತ್ತಿರ ನಿಜ ಹೇಳ್ಬೇಡ" ಎಂಬ ಗಾದೆಮಾತಿಗೆ ಅಪ್ಪ ಹೇಳಿದ ಜನಪದರ ಕಥೆ

 ಒಬ್ಬ ಸಾಮಾನ್ಯ ಹಳ್ಳಿಗನಿರ್ತಾನೆ ಅವರಪ್ಪ ಸಾಯುವ ಮುನ್ನ ಮಗನನ್ನು ಕರೆದು ಮಗನೆ, "ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ ಬ್ಯಾಡ ಸೂಳೆ ಸಂಗ ಮಾಡಿದ್ರೂ ಗೀಳೆ ಸಂಗಮಾಡ್ಬೇಡ ತಲೆ ಕಡ್ದ್ ಬಂದ್ರೂ ಹೆಂಡ್ತಿ ಹತ್ರ ನಿಜ ಹೇಳ್ಬೇಡ" ಅಂತ ಹೇಳಿ ಪ್ರಾಣ ಬಿಡ್ತಾನೆ. ಮಗನಿಗೆ ಆಶ್ಚರ್ಯ ಆಯ್ತು, ಅಲ್ಲಲ್ಲೆ!! ಇದೇನಿದು? ಅಪ್ಪ ಹಿಂಗ್ ಹೇಳ್ಬುಟ್ಟು ಸತ್ತ್ನಲ್ಲ? ಇದ್ನ ಪರೀಕ್ಷೆ ಮಾಡ್ಲೇಬೇಕು ಅಂತ ಹೊರ್ಟ, ಒಂದ್ಸಾರಿ ಅವನ ಹೊಲದಲ್ಲಿ ಆಳುಗಳು ಕಳೆ ಕೀಳ್ತಾ ಇರ್ಬೇಕಾದ್ರೆ "ಏನ್ ಬುದ್ದಿ ನೀವು ಇಷ್ಟು ದಿನ ಕೆಲ್ಸ ಮಾಡಿದ್ರೂ ಒಂದಿನಾನು ಒಂದ್ ಎಲೆ ಅಡಿಕೆ ತಂದು ಕೊಡ್ನಿಲ್ಲ ಅಂತ ರೇಗ್ಸಕ್ ಹಿಡಿದ್ರು, ಇವ್ನು ಎಲೆ ಅಡಿಕೆ ತಾನೆ ತಂದ್ ಕೊಡ್ತೀನಿ ತಕಳಿ ಅದಕ್ಕೇನಂತೆ ಅಂತ ಊರೊಳಗ್ ಬಂದ. ಅಯ್ಯೊ ಈಗೇನ್ ಮಾಡೋದು ದುಡ್ಡೆ ಇಲ್ವಲ್ಲ ಮಾತಿಗ್ ಬೇರೆ ಒಪ್ಪ್ಕೊಂಡ್ ಬಿಟ್ನಲ್ಲಾ?...... ಅಂತ ಯೊಚ್ನೆ ಮಾಡ್ತಾ ಇರ್ತಾನೆ. ಆಗ ಒಂದು ಉಪಾಯ ಹೊಳೆಯುತ್ತೆ, ಹ್ಮ್ಮ್ಮ್ ಆ ಪೆಟ್ಟಿ ಅಂಗಡಿ ಸುಬ್ಬಣ್ಣನ ತವ ಸಾಲ ತಕ್ಕೊಂಡು ಹೋಗಿ ಎಲ್ರೂಗು ಎಲೆ ತಕ್ಕೊಂಡು ಹೋಗಿ ಕೊಡುವ ಅಂತ ಸಾಲ ಕೇಳ್ದಾ. ಅವ ಅದ್ಕೇನಂತೆ ತಕಳಿ ಅಂತ ಕೊಟ್ಟ. ಎಲೆ ಅಡ್ಕೆ ತಕ್ಕೊಂಡು ಹೋಗಿ ಆಳು ಕಾಳಿಗೆಲ್ಲ ಕೊಟ್ಟ, ಆಮೇಲೆ ಆ ಗಿಟ್ಟಿ (ಅಂದ್ರೆ ಸಾಮನ್ಯ ವ್ಯಾಪಾರಿ ಅಂತೆ) ದಿನ ಹೋಗೋ ಬರೋ ದಾರಿಲೆಲ್ಲ ಅಡ್ಡ ಹಾಕಿ ಎಲ್ಲೊ ನನ್ನ್ ದುಡ್ಡು ಎಲ್ಲೋ ನನ್ನ್ ದುಡ್ಡು ಅಂತ ಜನಗಳ್ ಮುಂದೆ ಕೇಳಿ ಕೇಳಿ ಮರ್ಯಾದೆ ಕಳೀತಾ ಇದ್ದ . ಆಗ ಅವನಿಗೆ ಅನ್ನಿಸ್ತು ಹೌದು ಅಪ್ಪ ಹೇಳಿದ್ದು ಸರಿ ಅಂತ . ಮತ್ತೆ ಎರಡನೇದು ಗೀಳೆ, ಅಂದ್ರೆ ಅತ್ತೆ ಮನೆ ಸೊಸೆ ಅಂತೆ , ಒಂದಿನ ಆ ಅತ್ತೆ ಮನೆ ಸೊಸೆ ಇವ್ನ್ ಕಡೆ ನೋಡ್ಕೊಂಡು ಹಲ್ಲ್ ಗಿಂಚ್ಕೊಂಡು ನೀರ್ ಸೇದ್ತಾ ಇದ್ಲಂತೆ , ಇವ್ನು ಸುಮ್ನೆ ಮಾತಿಗೆ ಏಯ್ ಬರ್ರ್ತೀಯಾ ಅಂದ. ಆಕೆ ಹೂಂ ಬರ್ತೀನಿ ೨೫ ರೂಪಾಯಿ ಕೋಡ್ತಿಯ? ಅಂದ್ಲು . ಅಷ್ಟೆ ತಾನೆ ಸರಿ ಬಾ ಅಂತ ಕೊಣೆಯೊಳಗೆ ಹೋದವ್ನೆ ಚಾಕು ತೋರಿಸ್ದ. ಈಕೆ ಅಯ್ಯೊಯ್ಯೊ ಬನ್ರಪ್ಪ್ಪ ಯಾರಾನು ಕಾಪಾಡಿ ಇವನು ನನ್ನ ಹಿಡ್ಕೊಳ್ಳೋಕೆ ಬಂದವ್ನೆ ಅಂತ ಬಾಯ್ ಬಡ್ಕೊಂಡ್ಲು, ಊರ್ ಜನ ಎಲ್ಲಾ ಬಂದು ಇವನನ್ನ್ ಕಂಬಕ್ಕೆ ಕಟ್ಟ್ ಹಾಕಿ ಚೆನ್ನಾಗ್ ಹೊಡ್ದು ಹಣ್ಗಾಯಿ ನೀರ್ಗಾಯಿ ಮಾಡ್ಬುಟ್ರು. ಅವ್ನು ಅವಮಾನ ತಡೆಯೋಕಾಗ್ದೆ , ಯಪ್ಪಾ ಸಾಕಪ್ಪ್ಪ ಈ ಗೀಳೆ ಸಂಗ ಅಂತ ಊರ್ ಬಿಟ್ಟು ಪಟ್ಟಣಕ್ಕೆ ಬಂದ. ಅಲ್ಲಿ ಒಬ್ಬ ಶೆಟ್ಟಿ ಪರಿಚಯವಾಯ್ತು, ಹಾಗೆ ವಿಶ್ವಾಸನೂ ಬೆಳೆಯಿತು ಅದೆ ವಿಶ್ವಾಸದ ಮೇಲೆ ಶೆಟ್ಟಿ ಇವನಿಗೆ ಸ್ವಂತ ಅಂಗಡಿ ಮಾಡೋಕೆ ಸಾಲ ಕೊಟ್ಟ. ಒಳ್ಳೆ ಲಾಭ ಬಂತು ಚೆನ್ನಾಗ್ ಸಂಪಾದನೆ ಮಾಡ್ದ. ಹಾಗೆ ಒಂದಿನ ದಾರಿಲಿ ಬರುವಾಗ ಒಬ್ಬ ವ್ಯೆಶ್ಯೆಯ ಮನೆ ಕಂಡ. ಮನೆ ಮುಂದೆ"೨೫೦೦" ಅಂತ ಬೋರ್ಡ್ ಹಾಕಿತ್ತು. ಇವ್ನು ಸರಿ ಅಂತ ಮನೆಯೊಳಗೆ ಹೋದ, ದುಡ್ಡು ಕೊಟ್ಟವನೆ ಆ ಗೀಳೆಗೆ ತೊರಿಸಿದಂಗೆ ಚಾಕು ತೋರಿಸಿ ನಿನ್ನ ಕೊಂದುಬಿಡ್ತೀನಿ ಅಂದ. ಈಕೆ "ನೋಡಪ್ಪ, ನಾನು ಸೂಳೆ ಈ ಕ್ಷಣಕ್ಕೆ ದುಡ್ಡಿಗಾಗಿ ನನ್ನನ್ನು ನಾನು ಮಾರ್ಕೊಂಡು ಬಿಟ್ಟಿದ್ದೀನಿ, ಈ ದೇಹ ನಿನ್ನದು ನಂಗೆ ಇಂಥ ಹೀನ ಬದುಕನ್ನ ಕೊಟ್ಟ ಆ ದೇವರು ನನ್ನ ಸಾವನ್ನೂ ನಿನ್ನ ಕಯ್ಯಲ್ಲಿ ಬರೆದಿದ್ದ್ರೆ ಹಾಗೆ ಆಗಲಿ ನಿನ್ನ ಇಚ್ಚೆ ಎಂದು ಮಯ್ಯೊಡ್ಡಿದಳು. ಆತನಿಗೆ ತನ್ನ ತಪ್ಪಿನ್ನ ಅರಿವಾಗಿ ದುಡ್ಡನ್ನು ಅಲ್ಲೆ ಬಿಟ್ಟು ಅಲ್ಲಿಂದ ಹೊರಟ. ತುಂಬಾ ಪಶ್ಚಾತಾಪವೆನಿಸಿ ಸಂಪಾದಿಸಿದನ್ನೆಲ್ಲ ಒಗ್ಗೂಡಿಸಿಕೊಂಡು ಆ ಊರು ಬಿಟ್ಟು ತನ್ನೂರಿಗೆ ಹೊರಟ . ಮನೆಗೆ ಬಂದು ಅಪ್ಪನ ಪಟ ನೋಡಿದವನಿಗೆ ಅಪ್ಪನ ಮಾತುಗಳು ಎಷ್ಟು ಸತ್ಯ ಅನ್ನಿಸಿತು. ಹ್ಮ್ ... ಎಲ್ಲಾ ಸರಿ ಇನ್ನೂ ಹಂಡ್ತಿ ಪರೀಕ್ಷೆಯೊಂದು ಬಾಕಿ ಐತೆ. ಅದನ್ನು ಪರೀಕ್ಕ್ಷೆ ಮಾಡೇ ಬಿಡುವ ಎಂದು ತೀರ್ಮಾನಿಸಿ ಒಮ್ಮೆ ಒಂದು ಆಡಿನ (ಮೇಕೆ) ಮರಿಯನ್ನು ತಂದು ಕತ್ತರಿಸಿ ಅದನ್ನು ಬಾವಿಗೆ ಹಾಕಿ ಮನೆಗೆ ಬರುತ್ತಾನೆ. ಅವನ ಬಟ್ಟೆ ಮೇಲಿನ ರಕ್ತದ ಕಲೆನೋಡಿ " ಎನ್ರೀ ಇದು ರಕ್ತಾ? ಅಂತ ಹೆಂಡ್ತಿ ಕೇಳ್ತಾಳೆ, ಅದಕ್ಕೆ ಇವ್ನು ಯಾರ್ಗೂ ಹೇಳ್ಬೇಡ ಕನಮ್ಮಿ ಈ ಗಂಟಿಗಾಗಿ ಊರಿನ ರಾಜನ್ ಮಗನ ತಲೆ ಕಡಿದು ಬಾವಿಗೆ ಹಾಕ್ಬಿಟ್ಟೆ ಅಂತ ತಾನು ಪಟ್ಟಣದಿಂದ ಸಂಪಾದಿಸಿ ತಂದ ಹಣ ತೋರಿಸ್ತಾನೆ (ಅದೇ ಸಮಯಕ್ಕೆ ಊರಿನ ರಾಜನ ಮಗ ಯಾರಿಗೂ ಹೇಳದೆ ದೇಶಾಂತರ ಹೋಗಿರುತ್ತಾನೆ,) ಒಂದಿನ ಯಾವುದೋ ಮಾತಿಗೆ ಗಂಡ ಹೆಂಡ್ತಿ ಇಬ್ರೂಗು ಜಗಳ ಆಗಿ, ಇವ್ನು ಹೆಂಡ್ತಿನ ಹಿಡ್ಕೊಂಡು ನಾಲ್ಕೇಟು ಬಿಡ್ತಾನೆ ಆಗ ಆಕೆ ಅಯ್ಯೊ ನಿನ್ ಕೈ ಸೇದ್ ಹೋಗಾ , ಅಂತವ್ನೆ, ಇಂತವ್ನೆ, ಬೊಂತೆವ್ನೆ ಅಂಗಾಗೋವೊತ್ಗೆ ಅಲ್ವ ಊರ ರಾಜ್ನ ಮಗನ ತಲೆ ಕಡ್ದು ಬಾವಿಗೆ ಹಾಕ್ದೋನು ನೀನು ಅಂತ ಊರ್ಗೆಲ್ಲಾ ಕೇಳ್ಸೋಸೊ ಹಾಗೆ ಬಯ್ಯೊಕೆ ಶುರುಮಾಡ್ತಾಳೆ. ಅದನ್ನ ಹಾಲು ಮಾರುವವಳು ಕೇಳಿಸಿಕೊಂಡು ರಾಜರ ಕಿವಿಗೆ ಊದುತ್ತಾಳೆ. ರಾಜನ ಅಪ್ಪಣೆಯಂತೆ ಮರುದಿನವೆ ಸೈನಿಕರು ಬಂದು ಇವನನ್ನು ರಾಜರ ಆಸ್ಥಾನಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವನ ಮಾತಿಗೆ ಅವಕಾಶ ಕೊಡದೆ ಅವನಿಗೆ ರಾಜ ಗಲ್ಲು ಶಿಕ್ಷೆ ಘೋಷಣೆ ಮಾಡ್ತನೆ. ಇವ್ನ ಅಯ್ಯೊ ಬಡ್ದಿ ಮಗ್ನೆ ಅಪ್ಪ ನೀನ್ ಹೇಳಿದ್ ಮಾತು ಪರೀಕ್ಷೆ ಮಾಡೋಕೋಗಿ ಹಿಂಗಾಯ್ತಲ್ಲೊ ಯಪ್ಪಾ ಅಂತ ಗೋಳಾಡೋಕೆ ಶುರುಮಾಡ್ತಾನೆ. ಅವನ ಅದೃಷ್ಟ, ಸದ್ಯ ದೇಶಾಂತರ ಹೋದ ರಾಜಕುಮಾರ ಮರಳಿ ಬರ್ತಾನೆ. ಆಗ ರಾಜ ಅಲ್ಲಯ್ಯ ನೀನು ನನ್ನ ಮಗನನ್ನು ಕೊಂದಿಲ್ಲ ಮತ್ತೆ ಯಾಕೆ ನಿನ್ನ ಹೆಂಡತಿಯ ಬಳಿ ಹಾಗೆ ಹೇಳಿದೆ ಎಂದು ಕೇಳಿದಾಗ, ಈತ ಎಲ್ಲಾ ನಿಜ ಸಂಗತಿಯನ್ನು ಅಪ್ಪನ ಮಾತನ್ನು ರಾಜನಿಗೆ ತಿಳಿಸುತ್ತಾನೆ. ಆಗ ರಾಜ ಇವನನ್ನು ಬಿಡುಗಡೆ ಮಾಡಿ ಕಳಿಸ್ತಾನೆ. ಅಂದಿನಿಂದ ಆತ ಅಪ್ಪನ ಮಾತನ್ನು ಯಥಾ ಪಾಲಿಸಲು ಶುರುಮಾಡ್ತಾನೆ .
//ನಂದಿನಿ


Wednesday 30 April 2014

ಕಾರ್ಮಿಕರ ದಿನಾಚರಣೆ....... ??

ಕಾರ್ಮಿಕರ ದಿನಾಚರಣೆ....... ??

ಅಯ್ಯೊ ನಾಳೆ ಕಾರ್ಮಿಕರ ದಿನಾಚರಣೆ, ಕಾರ್ಮಿಕರಿಗೆ ರಜೆ ಕೊಡ್ಬೆಕಲ್ಲಾ ಪ್ರೋಡಕ್ಷನ್ ಬೇರೆ ಆಗಿಲ್ಲ ಏನ್ಮಾಡೋದು? ತಲೆ ಯಾಕೆ ಕೆಡಿಸಿಕೊಳ್ಳೋದು? ಒಂದು ದಿನ ರಜೆ ಕೊಟ್ಟು ಎರಡು ಬಾನುವಾರ ಕೆಲಸ ಮಾಡಿಸಿಕೊಂಡ್ರೆ ಆಯ್ತು ಬಿಡು ಅಂತಾರೆ ಬಹುತೇಕ ಮಾಲಿಕರು!!.ರಜೆ ಒಂದೇ ವಿಷಯವಲ್ಲ. ಎಲ್ಲಾ ವಿಷಯದಲ್ಲೂ ಎಲ್ಲಾ ಕಡೆ ಕಾರ್ಮಿಕರಿಗೆ ಅನ್ಯಾಯ ನಡೆಯುತ್ತಲೇ ಇದೆ. ಅದಕ್ಕೆ ಕಾರಣ ಕಾರ್ಮಿಕರಲ್ಲಿ ಕಾನೂನಿನ ತಿಳುವಳಿಕೆ ಇಲ್ಲದಿರುವುದು ಹಾಗು ಮಾಲಿಕರನ್ನು ಎದುರು ಹಾಕೊಂಡ್ರೆ ಕೆಲಸ ಕಳೆದುಕೊಳ್ಳುವ ಭಯನೂ ಇರಬಹುದು,
ಉದಾಹರಣೆಗೆ ಗಾರ್ಮೆಂಟ್ಸ್ ಪ್ಯಾಕ್ಟರಿಗಳನ್ನೇ ತೆಗೆದುಕೊಳ್ಳಿ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಯಶವಂತ್ ಪುರ ಗೊರಗುಂಟೆ ಪಾಳ್ಯ ಈ ಏರಿಯಾಗಳಿಗೆ ಬಂದ್ರೆ ಸಾಲು ಸಾಲು ಗಾರ್ಮಂಟ್ಸ್ ಪ್ಯಾಕ್ಟರಿಗಳನ್ನ ಕಾಣಬಹುದು. ಅಕ್ಕ ಪಕ್ಕದ ಸ್ಲಂ ನಲ್ಲಿ ವಾಸವಿರುವ ಜನಗಳು ಚಿಕ್ಕವಯಸ್ಸಿನಲ್ಲಿ ವಿದ್ಯೆಗೆ ನೈವೇದ್ಯಮಾಡಿಕೊಂಡ ಬಡಕುಂಟುಂಬದ ಹೆಣ್ಣು ಮಕ್ಕಳು, ಮದುವೆಯಾಗಲು ದುಡ್ಡು ಹೊಂದಿಸಿಕೊಳ್ಳಲ್ಲೋ, ಜೀವನ ನಿರ್ವಹಣೆಗೋ, ಕುಡುಕ ಗಂಡನ ಹೊಟ್ಟೆ ತುಂಬಿಸುವ ಸಲುವಾಗಿಯೋ ... ಈ ಗಾರ್ಮಂಟ್ಸ್ ಗಳನ್ನೇ ಅವಲಂಬಿಸಿರುತ್ತಾರೆ. ಅಲ್ಲಿನ ಕಾರ್ಯ ವೈಖರಿ ಹೇಗಿರುತ್ತದೆ ಅಂದ್ರೆ ಅದು ಒಂದು" ಟೀಮ್ ವರ್ಕ್ ,ಕಾರ್ಮಿಕರನ್ನು ಬ್ಯಾಚ್ ಗಳಾಗಿ ವಿಂಗಡಿಸಲಾಗುತ್ತದೆ, ಒಂದು ಬ್ಯಾಚಿಗೆ ಒಬ್ಬ ಸೂಪರ್ ವೈಸರ್, ಎರಡೂ ಬ್ಯಾಚಿಗೆ ಸೇರಿ ಒಮ್ಮ್ ಪ್ಲೊರ್ ಇನ್ಚಾರ್ಜ್, ಅವರಿಗಿಂತ ಮೇಲ್ಪಟ್ಟವನು ಪಿ. ಎಮ್. ಇದು ಬಿಟ್ಟು ಕಟ್ಟಿಂಗ್ ಸೆಕ್ಷನ್, ವಾಷಿಂಗ್ ಯೂನಿಟ್, ಪ್ಯಾಕಿಂಗ್ ಸೆಕ್ಷನ್ ಹಾಗು ಲೇಬರ್ಸ್ ಕಷ್ಟ ಕೇಳದ ಒಂದು ಕಾರ್ಮಿಕ ಕಛೇರಿ ಇರುತ್ತದೆ. ಕಚ್ಚಾ ಉಡುಪುಗಳ ಒಂದೊಂದು ಭಾಗಗಳನ್ನು ಒಬ್ಬೊಬ್ಬ ಟೈಲರ್ ಹೊಲಿಯುತ್ತಾರೆ. ಒಬ್ಬರಿಂದೊಬ್ಬರಿಗೆ ಪಾಸ್ ಆನ್ ಆಗುತ್ತದೆ. ಟೈಲರ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲರೂ ಅಂದ್ರೆ, ಹೆಲ್ಪರ್ಸ್,ಚೆಕ್ಕರ್ಸ್, ಐರನರ್ ಎಲ್ಲರೂ ನಿಲುಗಾಲಿನಲ್ಲಿ ನಿಂತೇ ಕೆಲಸ ಮಾಡಬೇಕು. ೯ ರಿಂದ ೬.೦ ವರೆಗೂ ನಿಂತೇ ಕೆಲಸಮಾಡೋದು ಕಷ್ಟ. ಮತ್ತೆ ಗಂಟೆಗೆ ೭೦ ರಿಂದ ೮೦ ಸಿದ್ದ ಉಡುಪುಗಳನ್ನು ತಯಾರಿಲೇ ಅಂತ ಹಿಂಸೆ ಮಾಡ್ತಾರೆ, ಮುಗೀಲಿಲ್ಲಾ ಅಂದ್ರೆ ೭ .೩೦ ಆದ್ರೂ ಮನೆಗೆ ಹೋಗೋ ಹಾಗಿಲ್ಲ. ನ್ಯಾಯವಾಗಿ ನೋಡಿದ್ರೆ ಒವರ್ ಟೈಮ್ ಲೆಕ್ಕದಲ್ಲಿ ಅವರಿಗೆ ಎರಡರಷ್ಟು ಹಣ ಕೊಡ್ಬೇಕು. ಒಟಿ ಇಲ್ಲ ಎಲ್ಲಾ ಬರೀ ಓಸಿ. ಎಲೆಕ್ಷನ್, ಭಾರತ್ ಬಂದ್ ಸಮಯದಲಿ ಕೊಡಲೇ ಬೇಕಾದ ಕಡ್ಡಾಯ ರಜೆಗಳಿಗೂ ಸಂಬಳ ಕಟ್ಟಿಕೊಡುವುದಿಲ್ಲ ಬದಲಾಗಿ ಭಾನುವಾರಗಳಂದು ಕೆಲಸ ಮಾಡಿಸುತ್ತಾರೆ ಕೆಲಸ ಹಂಚಿಕೆಯಲ್ಲೂ ಅನ್ಯಾಯ ನಡೆಯುತ್ತದೆ, ಹಲ್ಲು ಬಾಯಿ ಬಿಡೋರಿಗೆ ಕಡಿಮೆ ಕೆಲಸಕ್ಕೆ ಅಧಿಕ ಸಂಬಳ ಗೊತ್ತುಮಾಡೋದು, ಬಡಪಾಯಿ ಮುಗ್ದರಿಗೆ ಕಡಿಮೆ ಸಂಬಳ ಹೆಚ್ಚು ಕೆಲಸ. ವರ್ಷಕ್ಕೊಮ್ಮೆ ಭೇಟಿ ನೀಡುವ ಅಧಿಕಾರಿಗಳು ಮಾಲಿಕನಿಂದ ದುಡ್ಡು ಪಡೆದು ಬಾಯ್ ಮುಚ್ಚಿಕೊಂಡು ಹೋಗುತ್ತಾರೆ. ಕೇಳುವ ದೈರ್ಯ ಯಾರಲ್ಲೂ ಇರುವುದಿಲ್ಲ . ಗಾರ್ಮಂಟ್ಸ್ ನಲ್ಲಿ ಹೆಂಗಸರಿಗೆ ಮೊದಲ ಆದ್ಯತೆ. ಯಾಕಂದ್ರೆ ಅವರಾದ್ರೆ ಗಲಾಟೆ ಮಾಡುವುದು ಕಡಿಮೆ

ಇನ್ನೂ ದಿನಗೂಲಿ ಕಾರ್ಮಿಕರು. ಯಶವಂತ್ ಪುರ ಯಾರ್ಡ್ ಗೆ ಬಂದ್ರೆ ಸಾಲು ಸಾಲು ಅಕ್ಕಿ ಅಂಗಡಿಗಳಿವೆ, ಇಲ್ಲಿನ ಅಕ್ಕಿ ವ್ಯಾಪಾರ ಹೇಗೆ ಅಂದ್ರೆ ರೈತರು ತಂದ ಲೋಡ್ ಗಟ್ಟಲೆ ಅಕ್ಕಿಯನ್ನು ದಲ್ಲಾಳಿಯೊಬ್ಬ ಲಾರಿ ಸಮೇತ ಕೊಂಡು, ಬೆವರಿಳಿಸದೆ ಕ್ಷಣದಲ್ಲೇ ಮಾರಿ ಲಕ್ಷಗಟ್ಟಲೆ ಹಣ ಮಾಡ್ತಾರೆ. ಲಾರಿ ಅನ್ ಲೋಡ್ ಮಾಡುವ ಕೂಲಿಗಳಿಗೆ ಕೊಡುವುದ್ ಮೂಟೆಗೆ ೨ ರೂಪಾಯಿ . ಅದು ನಿಧಾನವಾಗಿ ಮಾಡುವ ಕೆಲಸವಲ್ಲ, ಒಂದು ಮೂಟೆಯಲ್ಲಿ ೨೫ ಕೆ.ಜಿ ಅಕ್ಕಿ ಇರುತ್ತೆ ಪ್ರತಿ ಸಲವು ಬೆನ್ನ ಮೇಲೆ ತಲಾ ಮೂರು-ನಾಲ್ಕು ಮೂಟೆಗಳನ್ನು ಹೊತ್ತು ಓಡಬೇಕು ಆಗಲ್ಲ ಅಂದ್ರೆ ಹೋಗಯ್ಯ ನೀನಿಲ್ಲ ಅಂದ್ರೆ ಇನ್ನೊಬ್ಬ ಅಂತಾರೆ. ಮತ್ತು ಅಂಗಡಿಯಲ್ಲಿ ಮೂಟೆಗಳನ್ನು ಇಡಲು, ಸ್ಥಳಾವಕಾಶ ಕಡಿಮೆ ಇರುವುದರಿಂದ ಒಂದರ ಮೇಲೊಂದರಂತೆ ಅತೀ ಎತ್ತರಕ್ಕೆ ಜೋಡಿಸಬೇಕಾಗುತ್ತದೆ, ಈಗೀಗ ಪ್ಲಾಸ್ಟಿಕ್ ಚೀಲಗಳೇ ಹೆಚ್ಚಾಗಿರುವುದರಿಂಗ ಜೋಡಿಸುವಾಗ ಯಾಮಾರಿ ಮೂಟೆ ಜಾರಿ ಮೇಲೆ ಬಿದ್ರೆ. ಮುಗೀತು ಕಥೆ, ಇವರಿಗೆ ಯಾವುದೆ ಕಾರ್ಮಿಕರ ನಿಧಿಯಾಗಲಿ , ಇ.ಎಸ್.ಐ. ಕವರೇಜ್ ಆಗಲಿ ಇರೋದಿಲ್ಲ. ಅಂಗಡಿ ಮಾಲಿಕ ಎನಾದ್ರೂ ದೂಡ್ಡ ಮನಸು ಮಾಡಿ ದುಡ್ಡು ಕೊಟ್ರೆ ಪರಿಹಾರ ಇಲ್ಲಾ ಅಂದ್ರೆ ಇಲ್ಲ. ಕೂಲಿ ಕಾರ್ಮಿಕರ ಸಂಘಗಳು ಹೆಸರಿಗಷ್ಟೆ ಬೆಂಬಲ ಸಹಾಯದ ಹೆಸರಿನಲ್ಲಿ ದುಡ್ಡು ನುಂಗಿ ಸುಮ್ಮನಾಗುವರು.

ಇನ್ನೂ ಸರ್ಕಾರಿ ಕಛೇರಿಗಳು. ಬಹುತೇಕ ತುಂಬಾ ದೊಡ್ಡ ಮಟ್ಟ ಸರ್ಕಾರಿ ಸಾಮ್ಯದ ಕಂಪನಿಗಳಲ್ಲಿ, ಕಸ ಗುಡಿಸೋದು, ನೆಲ ವರೆಸೋದು ಕೈದೋಟ ನಿರ್ವಹಣೆ ಹೀಗೆ ಇತರ ಸಹಾಯಕ ಕೆಲಸಗಳಿಗೆ ಟೆಂಡರ್ ಕರೆಯುವ ಮೂಲಕ ಮ್ಯಾನ್ ಪವರ್ ಕನ್ಸಿಸ್ಟೆನ್ಸಿಗಳಿಂದ ಕಾರ್ಮಿಕರ ಸರಬರಾಜು ನಡೆಯುತ್ತದೆ. ಆ ಕನ್ಸಿಸ್ಟೆನ್ಸಿಯವರಿಗೆ ಸರ್ಕಾರಿ ಕಂಪನಿ ಕೆಡೆಯಿಂದ ಒಬ್ಬ ಕೂಲಿಗೆ ಇಂತಿಷ್ಟು ಸಂಬಳ ಅಂತ ಗೊತ್ತುಮಾಡಲಾಗಿರುತ್ತದೆ. ಆದರೆ ಅದರಲ್ಲಿ ಅರ್ಧ ದುಡ್ಡು ಮಾತ್ರ ಸಂಬಳ ರೂಪದಲ್ಲಿ ಸಿಗುತ್ತದೆ. ಉಳಿದ ಹಣ ಕನ್ಸಿಸ್ಟೆನ್ಸಿ ಹಾಗು ಬ್ರಷ್ಟ ಅಧಿಕಾರಿಗಳ ನಡುವೆ ಹಂಚಿಕೆಯಾಗುತ್ತದೆ. ಇದೇ ಕಾರಣಕ್ಕೆ ಪ್ರತೀ ವರ್ಷವೂ ಆ ಟೆಂಡರ್ ಒಂದೇ ಕನ್ಸಿಸ್ಟೆನ್ಸಿಗೆ ಸಿಗುತ್ತದೆ. ಇದು ಸಾಲದು ಅಂತ ಅಲ್ಲೊಬ್ಬ ಸೂಪರ್ ವೈಸರ್ ಇರ್ತಾನೆ. ಕೆಲಸಕ್ಕೆ ತೋಗೊಳೋದು ತೆಗೆದು ಹಾಕೋದು ಅವನ ಕೈಯಲಿ ಇರುತ್ತೆ. ಮತ್ತೆ ಅವನ ಕೈಯಲ್ಲಿ ನಲುಗಾಟ. ಇದು ಕೆಲವು ಉದಾಹರಣೆಗಳಷ್ಟೆ ಎಲ್ಲಾ ರಂಗದಲ್ಲೂ ಈ ವರ್ಗದ ಜನರಿಗೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ.

ಯಾವ ಕಾನುನು ಬಂದರೂ ಅಷ್ಟೆ ಬ್ರಷ್ಟಚಾರ ನಿರ್ಮೂಲನೆ ಆಗದ ಹೊರತು, ಈ ಗೋಳು ತಪ್ಪಿದ್ದಲ್ಲ. ಕಾರ್ಮಿಕರ ದಿನಾಚರಣೆ ಬರೀ ನೆಪ , ಆಚಾರ ಮಾತ್ರ
//ನಂದಿನಿ//

Monday 28 April 2014

ನೀ ಬಿಟ್ಟು ಹೋದ ಕಹಿನೆನಪುಗಳ ಗೋರಿಗೆ 
ನನ್ನ ನೊಂದ ಹೃದಯವೇ ಸ್ಮಶಾನ
ಆ  ಗೋರಿಯ ಸುತ್ತ ಸುತ್ತುತ್ತಿದೆ 
ನಾ ಸತ್ತರೂ ಸಾಯದ ಎನ್ನಾತ್ಮ 
//ನಂದಿನಿ// 


ಹಸಿವ ಉಣಬಡಿಸುವೆ
ನಿದಿರೆ ಧಾರೆ ಎರೆವೆ
ಅರಿವೆಂಬ ಆಶಿರ್ವಾದ
ಅರಸಿ ನಾ ಬಂದಿರುವೆ
ಹರಸೊ ಎನ್ನ ಹರನೆ
ಜನ ಜಾನುವಾರುಗಳ
ನಿತ್ಯ ಸಲಹುವ ಸತ್ಯ
ದಾಸೋಹಿ ನೀ ಜಗದೀಶ
ಆದ್ಯಾತ್ಮದ ಎಣ್ಣೆ ಎರೆಯಲು
ಜಗವನೆ ಬೆಳೆಗಿದ
ಜಗದೀಪ ನೀ ಜಗದೀಶ
ಜಗವೆಲ್ಲ ಜಾಗರಣೆ
ಎಲ್ಲೆಲ್ಲೂ ನಿನ್ನ ಸ್ಮರಣೆ
ಹಸಿವ ಸುಳಿವೇ ಇಲ್ಲ
ನಿದಿರೆ ಮಂಪರು ಇಲ್ಲ
ಹರನಾಮ ಬದುಕ ಗೆದ್ದಿತಲ್ಲ
ಪದಗಳು ಸಿಗದೆ
ನಾ ನರಳುವಾಗ
ಅರಳಬಾರದೇ ನೀ
ಅಕ್ಷರವಾಗಿ
ಅವಕಾಶದ ಹಾಳೆ ಇದ್ದರೆ ಸಾಕೆ?
ಪ್ರತಿಭೆಯ ಪೆನ್ನು ಬೇಕಲ್ಲವೆ
ಪುಟಗಳ ತುಂಬಿಸಲು?
//ನಂದಿನಿ//
ಭಾವದ ಬಿಂದಿಗೆ
ತುಂಬಿರಲು
ಪದಗಳ ಬರವೇಕೆ ?
ಈ ಲೈಫ್ ಅನ್ನೋದು ದೇವರು ಕೊಟ್ಟಿರೋ ಅಕ್ಕಿ ..... ಅದರಿಂದ ಖಾರ ಪೊಂಗಲ್ ಮಾಡ್ಬೇಕೋ ಸಿಹಿ ಪೊಂಗಲ್ ಮಾಡ್ಬೇಕೋ ಅದು ನಮ್ ಕೈಯಲ್ಲೇ ಇದೆ . ಎರಡು ಟೇಸ್ಟಿನೆ ... ಬಟ್ ಯೋಚನೆ ಮಾಡಿ ......
ಮನಮುಗಿಲ ಸೂರ್ಯನೀ
ನನ್ನೊಲವ ದರ್ಪಣ ಹಿಡಿದು
ಎನ್ನ ನೋಡಲು
ಮಳೆಬಿಲ್ಲಾಗಿ ಮೂಡಿದೆ
ನಿನ್ನೆದುರಲಿ , ನಾ ರಂಗೇರಿ.
ಆ ಬಣ್ಣಕೆ ನೀ ಕೊಟ್ಟ ಹೆಸರು,
ಮಳೆಬಿಲ್ಲಿನದ್ದಲ್ಲ, ಊಸರವಳ್ಳಿಯದ್ದು !!
ಬಿಲ್ಲಿನ ಡೊಂಕು ಬಣ್ಣಕೆ ಸೋಕೀತೆ ?
ಡೊಂಕಿತ್ತೇನೋ ಆ ನಿನ್ನ ನೋಟದಲಿ ,
ನನ್ನ ಪ್ರೀತಿಯಲಿ ಅಲ್ಲ
//ನಂದಿನಿ/
ನನ್ನ ಒಲವಿನ ಅರ್ಜಿಯ
ಓದಿತಾನೆಂದಳು ವಾಹ್ ವಾಹ್!!
ಎಂಥಾ ಅದ್ಬುತ ಕವಿತೆ!!
ಬಹುಶಃ ಕವಿಯಾಗಿದ್ದೇ ತಪ್ಪಾಯಿತೇನೋ
ನನ್ನ ಭಾವನೆಗಳೆಲ್ಲ ಅವಳಿಗೆ
ಕಲ್ಪನೆಗಳಾಗಿ ಕಂಡವು
//ನಂದಿನಿ//
ಭಾರತ ಕೋಟೆಯ ಕಾಯುವ
ಯೋಧರ ತಲೆ ಕಡಿದರೂ
ಕದಲದೆ ಕೂರುವ ಮಂತ್ರಿವರ್ಯರು
ಕ್ರಿಕೆಟ್ ಎಂಬ ಅರ್ಥಹೀನ ರಣರಂಗಕೆ
ಮಣೆಹಾಕುವ ಮಾಧ್ಯಮಗಳು,
ಸತ್ತರೊಂದು ಸುದ್ದಿಯಷ್ಟೆ ಸುಮ್ಮನಾಗುವರು
ಮಣ್ಣ ಮಹಿಮೆಯನರಿಯದ ಮಕ್ಕಳೇಕೆ ದೇಶಕೆ?
ದೇಶದ ನೆತ್ತಿಯಲ್ಲಿ ಹರಿದ ನೆತ್ತರು
ಸುಡುತಿದೆ ಭಾರತಾಂಬೆಯ ಒಡಲ
ಒಗ್ಗಟ್ಟು ಒಡೆದ ಒಡಲ ಕುಡಿಗಳ
ಕಂಡು ಕಣ್ಣೀರಿಡುತಿಹಳು ಭಾರತಿ
ಮಣ್ಣಿಗಾಗಿ ಮಡಿದವರ ಶ್ರಮವ
ಮಾಡದಿರಿ ಮಣ್ಣುಪಾಲು
//ನಂದಿನಿ//
ಯಾರೋ ಮಾತಾಡ್ಕೊಂತಾ ಇದ್ರೂ ನಂಗೊತ್ತಿಲ್ಲಪ್ಪ!!!

ಕೈ ಕೈಯ್ಯನು ಹಿಡಿಯಲು ಕಡೆಗೆ ಕೈ ಕೊಡುವರಂತೆ
ಕಮಲವ ನಂಬಿದರೆ ಕಿವಿಕಮಲಗಳಿಗೆ ಕಮಲ ಇಡುವರಂತೆ
ಪೊರಕೆ ಕೈಲಿ ಹಿಡಿದರೆ ಗೊರಕೆ ಹೊಡೆಯಬೇಕಾಗುತ್ತಂತೆ

ಯಾರ್ಗಪ್ಪ ಓಟ್ ಮಾಡೋದು? (ಬರೀ ತಮಾಷೆಗೆ, ಸೀರಿಯಸ್ ಆಗಿ ತಗೊಂಡ್ರೆ ಅದು ನಮ್ ಪ್ರೋಬ್ಲಮ್ ಅಲ್ಲ)
ಯಾರೋ ಮಾತಾಡ್ಕೊಂತಾ ಇದ್ರೂ ನಂಗೊತ್ತಿಲ್ಲಪ್ಪ!!!

ಕೈ ಕೈಯ್ಯನು ಹಿಡಿಯಲು ಕಡೆಗೆ ಕೈ ಕೊಡುವರಂತೆ
ಕಮಲವ ನಂಬಿದರೆ ಕಿವಿಕಮಲಗಳಿಗೆ ಕಮಲ ಇಡುವರಂತೆ
ಪೊರಕೆ ಕೈಲಿ ಹಿಡಿದರೆ ಗೊರಕೆ ಹೊಡೆಯಬೇಕಾಗುತ್ತಂತೆ

ಯಾರ್ಗಪ್ಪ ಓಟ್ ಮಾಡೋದು? (ಬರೀ ತಮಾಷೆಗೆ, ಸೀರಿಯಸ್ ಆಗಿ ತಗೊಂಡ್ರೆ ಅದು ನಮ್ ಪ್ರೋಬ್ಲಮ್ ಅಲ್ಲ)
ವರುಣ ಒಲಿಯಲು
ಧರಣಿಯೆದೆಯಲಿ
ತನನಂ ತನನ
ಇನಿಯ ಒಲಿಯಲು
ಧಮನಿ ದನಿಯಲಿ
ತನನಂ ತನನ
//ನಂದಿನಿ//
ನನ್ನವ ಆಗಸಕೆ ಮುಖಮಾಡಿ
ಕಣ್ಣು ಹೊಡೆಯಲು
ಕರಗಿ ನೀರಾಯ್ತು
ಕಪ್ಪು ಮೋಡ
ಬಿಸಿಲ ಬೇಗೆಯಲಿ ಬೆಂದ
ಇಳೆಗೆ ಮಳೆ ತಂಪು
ಮಳೆಯಲ್ಲಿ ಮಿಂದವನ
ತೋಳಿನಪ್ಪುಗೆ ತಂಪು
ವಿರಹವನೊಪ್ಪಿದ ಮದನಾರಿಗೆ
//ನಂದಿನಿ//
ಕವಿತೆ ಓದದೆ ಒತ್ತಿದ ಲೈಕು
ಮಾತುಗಾರನ ಮುಂದೆ ಹಿಡಿದ
ಕರೆಂಟ್ ಇಲ್ಲದ ಮೈಕು
ಎರಡೂ ಕಲಾವಿದನ ಕೊಲೆಯೇ
ಬರ್ತಾ ಬರ್ತಾ ನನ್ನಬಟ್ಟೆಗಳಿಗೂ
ನನ್ನ ಮೇಲೆ ಪ್ಯಾರ್ ಗೆ
ಆಗುಬುಟೈತೆ
ಅದ್ಕೆ ಬೀರು ಬಾಗಿಲು
ತೆಗೆದ ತಕ್ಷಣ
ಮ್ಯಾಲೆ ಬೀಳ್ತವೆ
ನನ್ನ ಹೆಸರು ಹೀಗೆ ನಂದಾಯಿತು

ಎರಡ್ನೆದೂ ಹೆಣ್ಣು ಮಗುನೇ ಆಯ್ತಲ್ಲಾ ಎಲ್ಲಾರು ಕೋಪ ಮಾಡ್ಕೊಂಡಿದ್ರಂತೆ ತಾತ ಅಂತೂ ಸಿಕ್ಕಪಟ್ಟೆ ಕೋಪ ಮಾಡ್ಕೊಂಡಿದ್ರಂತೆ, ಸಾಲದಕ್ಕೆ ನಾನು ಮಟ ಮಟ ಮಂಗಳವಾರ ಮಟ ಮಟ ಮಧ್ಯಾಹ್ನ ಮಹಾಲಯ ಅಮವಾಸೆ ಹಿಂದಿನ ದಿನ ಹುಟ್ಟಿದ್ದು... ನಾಮಕರಣ ಮಾಡೋ ಆಸಕ್ತಿ ಯಾರ್ಗೂ ಇರ್ಲಿಲ್ಲ, ಆದ್ರೂ ನಮ್ಮಲ್ಲಿ ಹೆಣ್ ಮಕ್ಕಳು ಹುಟ್ಟಿದ್ರೆ ಮನೆದೇವ್ರ ಹೆಸರು ಇಡೋದು ಪದ್ದತಿ. ಹಾಗೆ ನಮ್ಮ ಮನೆ ದೇವ್ರು ಒಳಕಲ್ಲು (ರುಬ್ಬುವಕಲ್ಲು ) ದೇವಮ್ಮ ಅಂತಾ, ಹಾಗಾಗಿ ದೇವಮ್ಮ ಅಂತ ಹೆಸರಿಟ್ಟ್ರು. ತುಂಬಾ ಚೂಟಿಯೂ ಗಾಟಿಯೂ ಕಿತಾಪತಿಯೂ ಆಗಿದ್ದ ಈ ಮಗುವಿನ ಕಾಟ ತಾಳಲಾರದೆ, ಕಾಲಿಗೆ ದಾರ ಕಟ್ಟಿ, ಕಂಬಕ್ಕೆ ಕಟ್ಟಿಹಾಕುತಿದ್ದರಂತೆ ಅಮ್ಮ. ಏನ್ ಈ ಮಗ ಸುಮ್ನ್ನೆನೇ ಇರಲ್ಲ ಗುಂಡ್ ಉರುಳಾಡೊ ಹಂಗೆ ಉರುಳಾಡ್ತಾ ಇರ್ತದೆ ಅಂತ ನಮ್ಮತ್ತೆ ನನ್ನ ಗುಂಡಿ ಗುಂಡಿ ಅಂತಾ ಕರಿತಾ ಇದ್ರಂತೆ. ಒಮ್ಮೆ ರೋಡ್ ಮಧ್ಯ ಕೂತ್ಕೋಂಡು ಆಟ ಆಡ್ತಾ ಇರ್ಬೆಕಾದ್ರೆ, ಪಕ್ಕದ ಮನೆಯವರ ಕೊಟ್ಟಿಗೆಯಿಂದ ಸುಮಾರು ೩೦ ರಾಸು ಧನ ಕರುಗಳನ್ನು ಆಚೆ ಬಂದ್ವಂತೆ , ಆಗ ಎಲ್ಲಾ ಗಾಬರಿಯಿಂದ ಅಯ್ಯೊ ಪಾಪುಗೇನಾಯ್ತೋ ಎನೋ ಅಂತ ನೋಡೋಕೆ ಬಂದ್ರೆ, ಆದ್ರೆ ಈ ಮಗೂ ಆರಾಮವಾಗಿ ಆಟ ಆಡ್ತಾ ಇತ್ತು , ಪಾಪ ಮೂಕ್ ಪ್ರಾಣಿಗಳಾದ್ರೂ ಅವಕ್ಕೂ ಗೊತ್ತು ನೋಡಿ ಸಣ್ ಮಗು ತುಳಿಬಾರ್ದು ಅಂತ ದಾಟಿಕೊಂಡು ಹೋದವು. ಇನ್ನೊಂದು ಸಲ ಅಮ್ಮ ನನ್ನ ಮರದಡಿ ಬಿಟ್ಟು ಹಿಪ್ಪುನೇರಳೆ ಸೊಪ್ಪು (ರೇಷ್ಮೆ ಹುಳುವಿನ ಆಹಾರ) ಬಿಡಿಸೋಕೆ ಅಂತ ಹೋದಾಗ, ಒಂದು ಹಾವು ಬಂತಂತೆ, ನಾನು ಹುಳ.... ಹುಳ...... ಅಂತ ಹತ್ತಿರ ಹೋಗೋ ಅಷ್ಟೊತ್ತಿಗೆ ಅಪ್ಪ ಬಂದ್ರಂತೆ . ಹೀಗೆ ತುಂಬಾಸಲ ಸಾವಿನ ದವಡೆಯಿಂದ ಪರಾಗಿದ್ದ ಕಾರಣ, ಈ ಹುಡುಗಿ ತುಂಬ ಗಟ್ಟಿ, ತಲೆಮ್ಯಾಲೆ ಗುಂಡ್ ಕಲ್ಲು ಎತ್ತಾಕುದ್ರೂ ಸಾಯಲ್ಲ ಅಂತ ಮತ್ತೆ ಗುಂಡಿ ಅನ್ನೋ ಹೆಸರೆ ಗಟ್ಟಿಯಾಯ್ತು. ನಂಗೊಂದು ಹೆಸರಿದೆ ಅನ್ನೋದನ್ನೆ ಎಲ್ಲ ಮರೆತು ಬಿಟ್ರು ಅನ್ನಿ. ಒಂದಾನೊಂದು ಕಾಲದಲ್ಲಿ ನಾವು ರೆಷ್ಮೆ ಉದ್ಯಮ ಮಾಡ್ತಾ ಇದ್ವು. ಅದು ಕೈ ಕೊಟ್ಟ ಕಾರಣ ಬಾಚಳ್ಳಿ ಬಿಟ್ಟು, ಬೆಂಗಳೂರು ಬೀದಿ ಹಿಡಿದ್ವಿ ಆಗ ನಂಗೆ ೨ ವರ್ಷ. ಮತ್ತೆ ನಾವು ಬಂದು ಸೇರಿದ್ದು ಮಹಾಲಕ್ಷ್ಮಿ ಲೇಔಟ್ ಪಕ್ಕ ಇರೊ ನಂದಿನಿ ಲೇಔಟ್ ಗೆ . ನಮ್ ಪುಣ್ಯಕ್ಕೆ ನಮ್ಮನೆ ಪಕ್ಕ ಒಂದು ಆಂಟಿ ಇದ್ರು ಅವರ ಹೆಸರು ಮಹಾಲಕ್ಶ್ಮಿ . ಅವ್ರ್ಗೆ ನನ್ನ ಕಂಡ್ರೆ ತುಂಬಾ ಇಷ್ಟ ಅವ್ರೂ ನನ್ನ ಗುಂಡಿ ಅಂತಾನೆ ಕರೀತಾ ಇದ್ರು. ಇಲ್ಲೊಮ್ಮೆ ಬೆಳಗ್ಗೆ10. ಗಂಟೆಗೆ ಕಾಣೆಯಾದವಳು ಮತ್ತೆ ಸಂಜೆ 7 ಗಂಟೆಗೆ ಸಿಕ್ಕಿದ್ನಂತೆ ಹೀಗೆ ಹಾಗೆ ಮತ್ತೆ ಗುಂಡು. ನನಗೆ ಮೂರು ವರ್ಷ ಆಯ್ತು ಶಾಲೆಗೆ ಸೇರಿಸ್ಬೇಕು, ಆಗ ಉದ್ಬವ ಆಯ್ತು ಒಂದು ಪ್ರಶ್ನೆ!. ಹೌದು ? ಈ ಗುಂಡಿ ಹೆಸರೇನು ಅಂತ ! ಆಗ ಆ ಆಂಟಿ ನಂದಿನಿ-ಮಹಾಲಕ್ಶ್ಮಿ ಲೇಔಟ್ ಪಕ್ಕ-ಪಕ್ಕ, ನಾನು ನೀನು ಅಕ್ಕ-ಪಕ್ಕ ಅಂತ ಆ ಹೆಸರು ಇಟ್ಟ್ರಂತೆ. ಇದು ನಮ್ಮ ಹೆಸರಿನ ವೃತ್ತಾಂತ.
ಮದುವೆಯಾಗದ
ಮಡಿವಂತರ ಮನೆಮಗಳು
ಕವನ ಕಟ್ಟುವ ಹಠಕ್ಕಾಗಿ
ಮೊದಲರಾತ್ರಿಯ ಕಲ್ಪನೆಗೆ
ಬಣ್ಣ ಕಟ್ಟಿ ಕಾವ್ಯ ಬರೆಯಲು
ಮೈಲಿಗೆಯಾಗದಿರುವುದೇ ಮನಸು?
//ನಂದಿನಿ//
ಕಣ್ಣ ಸನ್ನೆಗೆ
ಸರಿಯಿತು ಮುಂಗುರುಳು
ನಲ್ಲನೆಡೆಗೆ

ಸವಾರಿ೨

ಸವಾರಿ೨ ಸಾಹಿತಿ ಹುಡುಕಾಟ ಸ್ಪರ್ಧೆಗಾಗಿ ನಾ ಬರೆದಿದ್ದ ಸಾಲುಗಳು

ಬಿಟ್ ಹಾಕ್ಲ ಬೇಜಾರು
ಹಾಳಾಗ್ಲಿ ಪ್ಯೂಚರ್ರು
ಊರ್ ಮೇಲೆ ಊರ್ ಬಿದ್ರು
ನಮ್ದೆ ಇಲ್ಲಿ ಕಾರ್ಬಾರು

ತಲ್ ನೊವ್ಗೆ ಸುಕ್ಕ ಹೊಡಿ
ತಲೆಕೆಟ್ರೆ ಪಲ್ಟಿ ಹೊಡಿ
ತಮಟೆಗೂ ಕಲ್ಸೋಣ
ಟಪ್ಪಾಂಗುಚ್ಚಿ ಕದರ್ರು

ಬಾಡ್ಗೆ ಬಟ್ಟೆ ಹಾಕ್ಕೊಂಡು
ಕೈಲಿ ಪ್ಲವರ್ ಹಿಡ್ಕೊಂಡು
ಕೋಳಿಗೆ ಕಾಳ್ ಹಾಕೊ
ಕರ್ಮ ನಮ್ಗಿಲ್ಲ

ಪೋಲಿ ಪೊಯಮ್ ಗೀಚ್ಕೊಂಡು
ಸ್ಕಯಿಲೆ ಟೆಂಟು ಹಾಕ್ಕೊಂಡು
ರಂಬೆಗೂ ಲೈನ್ ಹೊಡೆಯೊ
ಪಂಟ್ರು ನಾವೆಲ್ಲ
ನಡಿ ನಡಿ ತಡ ಯಾಕೆ ಹೊರ್ಟೆ ಬಿಡ್ಲಿ ಸವಾರಿ

ಬಿಟ್ ಹಾಕ್ಲ, ಬಿಟ್ ಹಾಕ್ಲ
ಬಿಟ್ ಹಾಕ್ಲ ಬೇಜಾರು
ಹಾಳಾಗ್ಲಿ ಪ್ಯೂಚರ್ರು
ಊರ್ ಮೇಲೆ ಊರ್ ಬಿದ್ರು
ನಮ್ದೆ ಇಲ್ಲಿ ಕಾರ್ಬಾರು

ತಲ್ ನೊವ್ಗೆ ಸುಕ್ಕ ಹೊಡಿ
ತಲೆಕೆಟ್ರೆ ಪಲ್ಟಿ ಹೊಡಿ
ತಮಟೆಗೂ ಕಲ್ಸೋಣ
ಟಪ್ಪಾಂಗುಚ್ಚಿ ಕದರ್ರು

ಕನಸೆಂಬ ಪ್ಲೈಟ್ ಇದೆ
ಸೀಟೊಂದು ಎಮ್ಟಿ ಇದೆ
ಯಾರಾದ್ರೂ ಕರ್ಚೀಫು
ಹಾಕೋ ಬಹುದು

ಹಾರ್ಟೆಂಬ ತಿಜೋರಿ
ಹಾಗಯ್ತೆ ರಾಬಾರಿ
ದಾನಮಾಡಿ ಪುಣ್ಯ
ಕಟ್ಕೊಬಹುದು

ನಾವ್ಯಾಕೆ ಹಾಕ್ ಬೇಕು ಲೋಕಲ್ ಸೆಂಟು
ಸ್ಯಾಂಡಲ್ಗೆ ಫೇಮಸ್ಸು ನಮ್ಮ ಸ್ಟೇಟು
ಕರುನಾಡು ಕೈಲಾಸ ಕ್ಕಿಂತ ಗ್ರೇಟು
ಕಾವೇರಿ ಕನ್ನಡ ನಮ್ ಫೇವ್ರೇಟು

ಬಿಟ್ ಹಾಕ್ಲ, ಬಿಟ್ ಹಾಕ್ಲ
ಬಿಟ್ ಹಾಕ್ಲ ಬೇಜಾರು
ಹಾಳಾಗ್ಲಿ ಪ್ಯೂಚರ್ರು
ಊರ್ ಮೇಲೆ ಊರ್ ಬಿದ್ರು
ನಮ್ದೆ ಇಲ್ಲಿ ಕಾರ್ಬಾರು

ತಲ್ ನೊವ್ಗೆ ಸುಕ್ಕ ಹೊಡಿ
ತಲೆಕೆಟ್ರೆ ಪಲ್ಟಿ ಹೊಡಿ
ತಮಟೆಗೂ ಕಲ್ಸೋಣ
ಟಪ್ಪಾಂಗುಚ್ಚಿ ಕದರ್ರು
//ನಂದಿನಿ//

ಬರೆಯ ಬೇಕಿದೆ ನಾ ಒಂದು ಕವಿತೆ

ಬರೆಯ ಬೇಕಿದೆ ನಾ ಒಂದು ಕವಿತೆ
ಕಲ್ಲು ಕರಗಿ ನೀರಾಗುವ ಕವಿತೆ
ಕನಸ ಕದವನು ತಟ್ಟುವ ಕವಿತೆ
ಕಹಿನೆನಪ ತಿಳಿನೀರ ಕದಡಿದ ಕವಿತೆ
ಕೊರಳ ಹಿಂಡುವ ಭಾವುಕ ಕವಿತೆ
ಚಿತ್ತವ ಕಲಕುವ ಕೊರಗಿನ ಕವಿತೆ
ಪ್ರೀತಿಯ ಪ್ರಣತೆಯ ಹಚ್ಚಿದ ಕವಿತೆ
ಒಲವಿಗೆ ಒಲಿಯದ ಒಲವಿನ ಕವಿತೆ
ಸೊರಗಿದ ಮನಸಿಗೆ ಮರುಗುವ ಕವಿತೆ
ಸತ್ತರು ಸಾಯದ ಜೀವಂತ ಕವಿತೆ
ಅರ್ಥವಾಗದ ಅರ್ಥಪೂರ್ಣ ಕವಿತೆ
ಅಯ್ಯೊ.. ಪದಗಳು ಸಿಗದೆ ಸೊರಗಿದೆ ಕವಿತೆ
ಪದಕೋಶದಲೂ ಪದಗಳ ಕೊರತೆ
 ಕಟ್ಟಲಾಗದೆ ಕವಿತೆ ಕಡೆಗೂ ಸೋತೆ
//ನಂದಿನಿ//
ಕವಿಯೊಬ್ಬ
ಬಿಳಿಚಿಟ್ಟೆಗೆ ಬಣ್ಣ ಕಟ್ಟೊ
ಜಾಣಕುರುಡ
//ನಂದಿನಿ//

Thursday 27 March 2014

ಪ್ರೈಮರಿ ಸ್ಕೂಲ್ ನಲ್ಲ್ಲಿ ಇದ್ದಾಗಲೇ ಯಾರದ್ರೂ ಈ ಥರ ಸ್ಕೂಲಿಗೆ  ಬಂಕ್ ಮಾಡಿ ಸಿಕ್ಕಕೊಂಡಿದೀರ ??

ನಾನು ೫ ನೆ ತರಗತಿಗೆ ಬಾರೋ ವರ್ಗು ನೋಟ್ಸ್ ಮಾಡೋ ಅಭ್ಯಾಸ ನೆ ಇರ್ಲಿಲ್ಲ, ಮನೇಲಿ, ಸ್ಕೂಲ್ನಲ್ಲಿ ಚೆನ್ನಾಗ್  ಚೆಚ್ಚೋರು ನಾನು ತಲೇನೆ ಕೆಡ್ಸ್ಕೊತಾ ಇರ್ಲಿಲ್ಲ  . ಆದ್ರೆ ನಮ್ಮ ಕನ್ನಡ ಟೀಚರ್ ತುಂಬಾನೆ ಸ್ಟ್ರಿಕ್ಟ್ . ಒಂದು ದಿನ ಪೂರ್ತಿ ಕುರ್ಚಿ ಕೂರ್ಸ್ತ ಇದ್ರೂ , ಬಾಣ ಬಗ್ಗಿಸ್ತಾ ಇದ್ರು, ನಾನು ಆವಾಗ ೩ರದ ತರಗತಿ , ಯಾವಾಗ್  ಯಾವಾಗ್ ನೋಟ್ಸ್ ನೋಡ್ತೀನಿ ಅಂತಿದದ್ರೋ  ಅವತ್ತೆಲ್ಲ ಸುಮ್ನೆ ಸ್ಕೂಲ್ಗೆ ಬಂಕ್ ಮಾಡ್ತಿದ್ದೆ .ಆದ್ರೆ ಅದೊಂದು ದೊಡ್ಡ ತಲೆ ನೋವು ಅಪ್ಪನಿಗೆ ಊರ್ ತುಂಬಾ ಪರಿಚಯಸ್ತರು . ಬಂಕ್ ಮಾಡಿ ರೋಡ್ ನಲ್ಲಿ ನಿಂತಿರೋದು ನೋಡಿದ್ರೆ ಮನೇಲಿ ಚಾಡಿ ಹೇಳ್ಬಿಡ್ತಾರೆ ಅಂತ ಭಯ. ಆಗ ನನ್ನ ಸ್ನೇಹಿತ ಇದ್ದ ಅವನ್ ಹೆಸರು ಮಹೇಶ್ ಅಂತ ಕ್ಲಾಸ್ಮೇಟ್ , ಅವ್ನು ಆಚೆ ಇಂದ ನಮ್ಮನೆ ಲಾಕ್ ಮಾಡಿ ಕೀ ನ ನಮ್ಮನೆಯ ರಂಗೋಲಿ ಡಬ್ಬದ ಒಳಗೆ ಇತ್ತು ಆವಾ ಸ್ಕೂಲ್ಗೆ ಹೋಗ್ತಿದ್ದ,  ನಾನು ಮನೆಯೊಳಗೆ ಇರ್ತಿದ್ದೆ , ಮತ್ತೆ ಸಂಜೆ ಅವ್ನೆ ಬಂದು ಬಾಗಿಲು ತೆಗಿತಾ ಇದ್ದಿದ್ದು. ನಾನು ಮನೇಲಿ ಲೈಟ್ ಆನ್  ಮಾಡ್ತಾ ಇರ್ಲಿಲ್ಲ  ಯಾಕೆಂದ್ರೆ ಪಕ್ಕದ ಮನೆಯವರ ಕಾಟ,  ಸೇಪ್ಟಿಗೆ ಅಂತ ಸ್ಕೂಲ್ ಯುನಿಫಾರ್ಮ್ ನಲ್ಲಿ ಇರ್ತಿದ್ದೆ ಒಮ್ಮೆ ಗ್ರಹಚಾರ ಕೆಟ್ಟು ಅಪ್ಪ ಬೇಗ ಬಂದು ಬಿಟ್ಟಿದ್ದಾರೆ!!! ಅಯ್ಯೋ ದೇವ್ರೇ ನಂಗೆ ಸಿಕ್ಕಾಪಟ್ಟೆ ಭಯ ಆಗ್ತ ಇದೆ . ಆಮೇಲ್ ಅಪ್ಪ ಡೋರ್ ಓಪೆನ್ ಮಾಡಿ ಏಯ್ ಇದ್ಯಾಕೆ ಸ್ಕೂಲ್ ಗೆ ಹೋಗಿಲ್ವಾ ?
 ನಾನು ಅಣ್ಣ ಅಣ್ಣಾ   ಹೋಗಿದ್ದೆ , (ಅಪ್ಪನ ಅಣ್ಣ ಅಂತೀವಿ ನಾವು)
ಮತ್ತ್ಯಾಕೆ ಇಲ್ಲೇ ಇದ್ದೀಯ ,
 ಅದು ಅದು... ಹೊಟ್ಟೆ  ತುಂಬ ನೋಯ್ ತಾ ಇತ್ತು  ಮಿಸ್ ವಾಪಸ್ ಕಳ್ಸಿ ಬಿಟ್ಟರು ಈಗಾ ತಾನೇ ಬಂದೆ ,
ಮತ್ತೆ ಬೀಗ ಯಾರು ಹಾಕಿದ್ದು
ಅಣ್ಣಾ ಅದು ಅದು, ಗೊತ್ತಿಲ್ಲ ಅಣ್ಣಾ 
ಅಯ್ಯೋ ಬಡ್ಡಿ ಕೂಸೇ ನ್ಯಾಯವಾಗಿ ಸ್ಕೂಲ್ಗೆ ಹೋಗೋದು ಬಿಟ್ಟು ಚಕ್ಕರ್ ಹಾಕ್ತಿಯ ಅಂತ ಎರಡು ಬಿಡೋರು ಮತ್ತೆ ಒಂದು ವಾರ ನೆನ್ಸ್ಕೊಂಡ್ ನೆನಸ್ಕೊಂಡು ಬೈತಾನೆ ಇರೋರು ಬಂಡ ನೆನ್ತರಿಗೆಲ್ಲ ಹೇಳೋರು .

Monday 17 March 2014

ನನ್ನ ಒಲವಿನ ಅರ್ಜಿಯ
ಓದಿತಾನೆಂದಳು  ವಾಹ್ ವಾಹ್!!
ಎಂಥಾ  ಅದ್ಬುತ ಕವಿತೆ!!
ಬಹುಶಃ  ಕವಿಯಾಗಿದ್ದೇ ತಪ್ಪಾಯಿತೇನೋ
ನನ್ನ ಭಾವನೆಗಳೆಲ್ಲ ಅವಳಿಗೆ
ಕಲ್ಪನೆಗಳಾಗಿ ಕಂಡವು 
//ನಂದಿನಿ//

ಕನ್ನಡ ಭಾಷೆಯೊಂದಿಗೆ ಆಂಗ್ಲಭಾಷೆಯ ಪದಗಳ ಮಿಕ್ಸಿಂಗ್, ಒಂದು ದೊಡ್ಡ ಅಪರಾದವೇ ?

ಕನ್ನಡದಲ್ಲಿ ಲೇಖನ, ಕವಿತೆ, ಕಥೆ, ಕಾದಂಬರಿ, ಚುಟುಕು ಇತ್ಯಾದಿಗಳನ್ನೂ ಬರೆಯುವಾಗ, ಕನ್ನಡ ಭಾಷೆಯ ಜೊತೆ ಬೇರೆ ಬಳಸಬಾರದು, ಅದು ಪ್ರಕಟಿತ ಮಾಧ್ಯಮವಾಗಬಹುದು, ಅಥವಾ ಯಾವುದೇ ಸೋಶಿಯಲ್ ನೆಟ್ವರ್ಕ್ ಆಗಬಹುದು, ಕಾಮೆಂಟುಗಳು  ಕನ್ನಡದಲ್ಲೇ ಇರಬೇಕು ಎಂಬುದು ಕೆಲವರ ವಾದ. ಇದು ಎಷ್ಟರ ಮಟ್ಟಿಗೆ ಸರಿ ? ಯಾವುದೇ ಲೇಖನವಾಗಲಿ, ಲೇಖನದ ವಸ್ತು, ಸಂದೇಶ ಓದುಗನಿಗೆ ತಲುಪಿದೆಯೋ ಇಲ್ಲವೋ ಎಂಬುದು ತುಂಬಾ ಮುಖ್ಯ,  ಭಾವ ಬದಲಾಗದಂತೆ ಅಲ್ಲಲ್ಲಿ ಬೇರೆ ಭಾಷೆಯ ಪದಗಳನ್ನು, ಬಳಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ, ಉದಾಹರಣೆಗೆ  ಆ ಭಾಷೆ ಇಂಗ್ಲಿಷ್ ಇರಬಹುದು, ಕೆಲವು ಬಾರಿ ಬಳಸಲೇ ಬೇಕಾಗುತ್ತದೆ. ಉದಾಹರಣೆಗೆ ಪೆಸ್ಬುಕ್ ನಲ್ಲಿ ನಾವು ಬಳಸುವ, ನ್ಯೂ ಪೇಜ್ , ಗ್ರೂಪ್, ಕಾಮೆಂಟ್, ಲೈಕ್ ಇತ್ಯಾದಿ ಪದಗಳನ್ನು ಕನ್ನಡದಲ್ಲೇ ಬಳಸಬೇಕು ಎಂದಾದರೆ, ನಾವು ನಮ್ಮ ಇಮೇಲ್ ಓಪನ್ ಮಾಡುವಾಗ, ಲಾಗಿನ್ ಆಗುವಾಗ , ಪಾಸ್ ವರ್ಡ್ ಆಗಿ ಇಂಗ್ಲಿಷ್ ಬಳಸಿರುತ್ತೇವೆ ಅಲ್ಲವೇ? ಅದು ಟೆಕ್ನಾಲಜಿ ಕೊರತೆಯೇ ಆಗಿರಬಹುದು, ಆದರೂ ಪೇಸ್ಪುಕ್ ನಂತ ಸೋಶಿಯಲ್ ನೆಟ್ವರ್ಕ್ ನಲ್ಲಿ ನಮ್ಮ ಭಾಷೆಯನ್ನು, ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಲು ನಾವು ಬೇರೆ ಭಾಷೆಯ ಸಹಕಾರ ಪಡೆದುಕೊಂಡಿರುತ್ತೇವೆ  ಅಲ್ಲವೇ? ಕನ್ನಡ ಬಾಷೆಯ ಉಲ್ಲೇಖಗಳು ನಮಗೆ ಬೇರೆ ಭಾಷೆಯ ಗ್ರಂಥಗಳಲ್ಲಿ ಸಿಕ್ಕಿಲ್ಲವೆ?. ಇದು ಪರಸ್ಪರ ಸಹಕಾರವೇ ಹೊರತು ಮತ್ತೇನೂ  ಅಲ್ಲ ,ಹಾಗೆಂದ ಮಾತ್ರಕೆ ನಮಗೆ ಕನ್ನಡ ಬರುವುದಿಲ್ಲವೆಂತಲೋ ಅಥವಾ ನಮ್ಮಲ್ಲಿ ಭಾಷಾಭಿಮಾನದ ಕೊರತೆಯಿದೆ ಎಂತಲೂ ಅಲ್ಲ. ಮೊದಲಿಗೆ ನಾವು ನಮ್ಮ ಲೇಖನಗಳಿಗೆ ಕನ್ನಡ ಭಾಷೆಯನ್ನು ಆರಿಸಿಕೊಂಡಿದ್ದೀವಿ ಎಂದರೆ, ಅದು ನಮ್ಮ ಭಾಷಾಭಿಮಾನಕೆ ಹಿಡಿದ ಕನ್ನಡಿ ಆಗಿರುತ್ತದೆ. ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಮ್ಮ ಮಾತೃಭಾಷೆಗೆ ಇರುವಷ್ಟು ಸಾಮರ್ಥ್ಯ, ನಾವು ಸುಮ್ಮನೆ ಕಲಿತು ಆಡುವ ಭಾಷೆಗೆ ಇರುವುದಿಲ್ಲ. ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು ಎಂದರೆ, ಬೇರೆ ಭಾಷೆಯನ್ನೂ ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಸಹಕಾರ ಅತ್ಯಗತ್ಯ ಎಂಬುದು ನನ್ನ ಅನಿಸಿಕೆ . ನಿಮ್ಮ ಅಭಿಪ್ರಾಯ? 
//ನಂದಿನಿ//ಅಪರಾಧ 



Monday 10 March 2014

ಒಲಿಯದೆ ಒಲವು
ಮುದುಡಿದೆ ಮನವು
ಹುಡುಕಿ ಸೋತೆನು
ನಿನ್ನಲ್ಲಿ ಒಲವ ಸುಳಿವು
ಮುರಿದು ಮುನಿಸು 
ನೀಡೆಯ ಮನಸು
ಕಟ್ಟಿದ ಕನಸು
ಕುಸಿಯುವ ಮುನ್ನ ?
//ನಂದಿನಿ//

ಮದಿರೆ ಕವಿ ನಾನಲ್ಲ.



ನಿನ್ನ ಹಾಗೆ
ಕುಡಿದು ಕೂತು
ಕವನ ಕಟ್ಟೊ
ಮದಿರೆ ಕವಿ ನಾನಲ್ಲ.
ನಿದಿರೆಯಲಿ ಬಂದು
ಮದಿರೆಗೂ ಮೀರಿದ

ಮತ್ತ ಕೊಡುವ ಮುತ್ತನಿಡುವ
ಚದುರೆ ನಾ "ನಲ್ಲ"....
ನೀ ಶ್ರೀಮಂತ ಕವಿಯಾಗಲು
ನಿನ್ನ ಸಾಲುಗಳಿಗೆ
ಭಾವದ ಸಾಲ ಕೊಟ್ಟ
ಸಾಹುಕಾತಿ ನಾ ಗೆಳೆಯ
//ನಂದಿನಿ//

Tuesday 4 March 2014

ನಿಜ ಹೇಳ್ಬೇಕಂದ್ರೆ ಹುಡುಗಿಯರೇ  ಹೆಚ್ಚು ಪ್ರಯೋಗಶೀಲರು.... ನಮ್ಮ  ಲೈಫ್ ಟೈಮಲ್ಲಿ ನಾವೆಷ್ಟು ತರಹದ ಫೇರ್ ನೆಸ್ ಕ್ರೀಂ, ಫೇಸ್ ವಾಷ್, ಸೋಪ್ , ಟಾಲ್ಕಂ ಪೌಡರ್ ಅದು ಇದು ಅಂತ ಎಕ್ಸ್ಪಿರಿಮೆಂಟ್ ಮಾಡಿಲ್ಲ ಹೇಳಿ?

Friday 28 February 2014

ಮಟ ಮಟ ಮಂಗಳವಾರ
ಮಟ ಮಟ ಮಧ್ಯಾಹ್ನ
ನಾ ಹುಟ್ಟಿದ್ದು ಅಮಂಗಳವಾದರೂ
ಅಂದು "ಮಂಗಳ"ವಾರ
//ನಂದಿನಿ//
 


ಹಸಿವ ಅಟ್ಟಹಾಸಕೆ
ಜಂಬಕೂ ಜುಗುಪ್ಸೆ
//ನಂದಿನಿ//


ಏಕೆ ಕದ್ದೇನಿ
ರವಿಯಿಂದ ಹೊಳಪ
ಹೇಳೆ ಇಬ್ಬನಿ
//ನಂದಿನಿ //
 


ಕಷ್ಟ ಗೆಲುವ
ಸ್ಪಷ್ಟ ನಿಲುವಿರಲು
ಎಲ್ಲುಂಟು ಸೋಲು ?
//ನಂದಿನಿ //


ಜಗದ ದೋಣಿ
ಚೆಂದ ತೇಲಲು
ಆಧ್ಯಾತ್ಮದ ಹರಿಗೋಲು
ಅತ್ತ್ಯಾವಶ್ಯ


ಬದುಕ ಬೆಣ್ಣೆ
ಕರಗಿತು, ಕಷ್ಟದ
ಕಿಡಿ ಸೋಕಲು
//ನಂದಿನಿ //