Monday, 17 March 2014

ಕನ್ನಡ ಭಾಷೆಯೊಂದಿಗೆ ಆಂಗ್ಲಭಾಷೆಯ ಪದಗಳ ಮಿಕ್ಸಿಂಗ್, ಒಂದು ದೊಡ್ಡ ಅಪರಾದವೇ ?

ಕನ್ನಡದಲ್ಲಿ ಲೇಖನ, ಕವಿತೆ, ಕಥೆ, ಕಾದಂಬರಿ, ಚುಟುಕು ಇತ್ಯಾದಿಗಳನ್ನೂ ಬರೆಯುವಾಗ, ಕನ್ನಡ ಭಾಷೆಯ ಜೊತೆ ಬೇರೆ ಬಳಸಬಾರದು, ಅದು ಪ್ರಕಟಿತ ಮಾಧ್ಯಮವಾಗಬಹುದು, ಅಥವಾ ಯಾವುದೇ ಸೋಶಿಯಲ್ ನೆಟ್ವರ್ಕ್ ಆಗಬಹುದು, ಕಾಮೆಂಟುಗಳು  ಕನ್ನಡದಲ್ಲೇ ಇರಬೇಕು ಎಂಬುದು ಕೆಲವರ ವಾದ. ಇದು ಎಷ್ಟರ ಮಟ್ಟಿಗೆ ಸರಿ ? ಯಾವುದೇ ಲೇಖನವಾಗಲಿ, ಲೇಖನದ ವಸ್ತು, ಸಂದೇಶ ಓದುಗನಿಗೆ ತಲುಪಿದೆಯೋ ಇಲ್ಲವೋ ಎಂಬುದು ತುಂಬಾ ಮುಖ್ಯ,  ಭಾವ ಬದಲಾಗದಂತೆ ಅಲ್ಲಲ್ಲಿ ಬೇರೆ ಭಾಷೆಯ ಪದಗಳನ್ನು, ಬಳಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ, ಉದಾಹರಣೆಗೆ  ಆ ಭಾಷೆ ಇಂಗ್ಲಿಷ್ ಇರಬಹುದು, ಕೆಲವು ಬಾರಿ ಬಳಸಲೇ ಬೇಕಾಗುತ್ತದೆ. ಉದಾಹರಣೆಗೆ ಪೆಸ್ಬುಕ್ ನಲ್ಲಿ ನಾವು ಬಳಸುವ, ನ್ಯೂ ಪೇಜ್ , ಗ್ರೂಪ್, ಕಾಮೆಂಟ್, ಲೈಕ್ ಇತ್ಯಾದಿ ಪದಗಳನ್ನು ಕನ್ನಡದಲ್ಲೇ ಬಳಸಬೇಕು ಎಂದಾದರೆ, ನಾವು ನಮ್ಮ ಇಮೇಲ್ ಓಪನ್ ಮಾಡುವಾಗ, ಲಾಗಿನ್ ಆಗುವಾಗ , ಪಾಸ್ ವರ್ಡ್ ಆಗಿ ಇಂಗ್ಲಿಷ್ ಬಳಸಿರುತ್ತೇವೆ ಅಲ್ಲವೇ? ಅದು ಟೆಕ್ನಾಲಜಿ ಕೊರತೆಯೇ ಆಗಿರಬಹುದು, ಆದರೂ ಪೇಸ್ಪುಕ್ ನಂತ ಸೋಶಿಯಲ್ ನೆಟ್ವರ್ಕ್ ನಲ್ಲಿ ನಮ್ಮ ಭಾಷೆಯನ್ನು, ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಲು ನಾವು ಬೇರೆ ಭಾಷೆಯ ಸಹಕಾರ ಪಡೆದುಕೊಂಡಿರುತ್ತೇವೆ  ಅಲ್ಲವೇ? ಕನ್ನಡ ಬಾಷೆಯ ಉಲ್ಲೇಖಗಳು ನಮಗೆ ಬೇರೆ ಭಾಷೆಯ ಗ್ರಂಥಗಳಲ್ಲಿ ಸಿಕ್ಕಿಲ್ಲವೆ?. ಇದು ಪರಸ್ಪರ ಸಹಕಾರವೇ ಹೊರತು ಮತ್ತೇನೂ  ಅಲ್ಲ ,ಹಾಗೆಂದ ಮಾತ್ರಕೆ ನಮಗೆ ಕನ್ನಡ ಬರುವುದಿಲ್ಲವೆಂತಲೋ ಅಥವಾ ನಮ್ಮಲ್ಲಿ ಭಾಷಾಭಿಮಾನದ ಕೊರತೆಯಿದೆ ಎಂತಲೂ ಅಲ್ಲ. ಮೊದಲಿಗೆ ನಾವು ನಮ್ಮ ಲೇಖನಗಳಿಗೆ ಕನ್ನಡ ಭಾಷೆಯನ್ನು ಆರಿಸಿಕೊಂಡಿದ್ದೀವಿ ಎಂದರೆ, ಅದು ನಮ್ಮ ಭಾಷಾಭಿಮಾನಕೆ ಹಿಡಿದ ಕನ್ನಡಿ ಆಗಿರುತ್ತದೆ. ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಮ್ಮ ಮಾತೃಭಾಷೆಗೆ ಇರುವಷ್ಟು ಸಾಮರ್ಥ್ಯ, ನಾವು ಸುಮ್ಮನೆ ಕಲಿತು ಆಡುವ ಭಾಷೆಗೆ ಇರುವುದಿಲ್ಲ. ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು ಎಂದರೆ, ಬೇರೆ ಭಾಷೆಯನ್ನೂ ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಸಹಕಾರ ಅತ್ಯಗತ್ಯ ಎಂಬುದು ನನ್ನ ಅನಿಸಿಕೆ . ನಿಮ್ಮ ಅಭಿಪ್ರಾಯ? 
//ನಂದಿನಿ//ಅಪರಾಧ 



No comments: