Monday, 28 April 2014

ಬರೆಯ ಬೇಕಿದೆ ನಾ ಒಂದು ಕವಿತೆ

ಬರೆಯ ಬೇಕಿದೆ ನಾ ಒಂದು ಕವಿತೆ
ಕಲ್ಲು ಕರಗಿ ನೀರಾಗುವ ಕವಿತೆ
ಕನಸ ಕದವನು ತಟ್ಟುವ ಕವಿತೆ
ಕಹಿನೆನಪ ತಿಳಿನೀರ ಕದಡಿದ ಕವಿತೆ
ಕೊರಳ ಹಿಂಡುವ ಭಾವುಕ ಕವಿತೆ
ಚಿತ್ತವ ಕಲಕುವ ಕೊರಗಿನ ಕವಿತೆ
ಪ್ರೀತಿಯ ಪ್ರಣತೆಯ ಹಚ್ಚಿದ ಕವಿತೆ
ಒಲವಿಗೆ ಒಲಿಯದ ಒಲವಿನ ಕವಿತೆ
ಸೊರಗಿದ ಮನಸಿಗೆ ಮರುಗುವ ಕವಿತೆ
ಸತ್ತರು ಸಾಯದ ಜೀವಂತ ಕವಿತೆ
ಅರ್ಥವಾಗದ ಅರ್ಥಪೂರ್ಣ ಕವಿತೆ
ಅಯ್ಯೊ.. ಪದಗಳು ಸಿಗದೆ ಸೊರಗಿದೆ ಕವಿತೆ
ಪದಕೋಶದಲೂ ಪದಗಳ ಕೊರತೆ
 ಕಟ್ಟಲಾಗದೆ ಕವಿತೆ ಕಡೆಗೂ ಸೋತೆ
//ನಂದಿನಿ//

No comments: