Sunday, 1 June 2014

ದುರುಪಯೋಗವಾಗ್ತಾ ಇದೇಯಾ ಸರ್ಕಾರದ ಯೋಜನೆಗಳು??
ನಂದಿನಿ ಬಡಾವಣೆಗೆ ಸೇರಿದ ಕೃಷ್ಣಾನಂದನಗರ ವೃತ್ತದ ಬಳಿ, ಸರ್ಕಾರದ ಯೋಜನೆಯಡಿಯಲ್ಲಿ ಒಂದು ಶುದ್ಧ ನೀರಿನ ಘಟಕ ಆರಂಭವಾಗಿದೆ. ಜಲಮಂಡಲಿಯವರು ಸರಬರಾಜುಮಾಡುವ ನಲ್ಲಿ ನೀರಿನ ಥರ ಈ ನೀರಲ್ಲಿ ಬ್ಲೀಚಿಂಗ್ ಪೌಡರ್ ವಾಸನೆ ಇರುವುದಿಲ್ಲ , ಬಣ್ಣನೂ ನೂ ಇರುವುದಿಲ್ಲ . ಥೇಟ್ ಆಕ್ವಾಫಿನ ಬ್ರ್ಯಾಂಡ್ ವಾಟರ್ ಬಾಟಲ್ ತರಹ ಇದೆ. ಒಂದು ರೂಪಾಯ್ಗೆ ೧೦ ಲೀಟರ್ ಶುದ್ಧ ನೀರು ದೊರೆಯುವಂತೆ ಮಾಡಿದ ಈ ಯೋಜನೆಗೆ ಧನ್ಯವಾದ , ಹತ್ತಿರದಲ್ಲಿ ಸುತ್ತಮುತ್ತ ಎಲ್ಲೂ ಈ ತರಹದ ಘಟಕ ಇಲ್ಲ.ವಿಷಯ ಏನಪ್ಪಾ ಅಂದ್ರೆ, ಮೊನ್ನೆ ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ ಗಮನಿಸಿದೆ, ಒಬ್ಬ ವ್ಯಕ್ತಿ ಲಗೇಜ್ ಆಟೋನಲ್ಲಿ ಬಂದು ಸುಮಾರು ಕ್ಯಾನ್ ಗಳಿಗೆ ನೀರು ತುಂಬಿಸಿಕೊಂಡು ಹೋದ. ನಮ್ಮನೆಗೆ ಮೂರು ದಿನಕ್ಕೊಮೆ ನೀರು ತರ್ತೀವಿ ಅಷ್ಟೆ. ಅವ ಅಷ್ಟು ನೀರು ತಗೊಂಡು ಹೋಗಿ ಏನ್ ಮಾಡ್ತಾನೆ? ಮಾರಿಕೊಳ್ತಾನ ಅಂತ ಅನುಮಾನ. ಅಪ್ಪನೊಂದಿಗೆ ಈ ವಿಷಯ ಪ್ರಸ್ತಾಪಿಸಿದೆ, ಆಗ ತಿಳಿಯಿತು ಆತನೊಬ್ಬನೆ ಅಲ್ಲ ಇನ್ನೂ ಕೆಲವು ಕೇವಲವಾದ ಮಂದಿ ನೀರನ್ನು ಲಾಭಕ್ಕೆ ಮಾರಿ ಕೊಳ್ಳುವುದೇ ಒಂದು ಬ್ಯುಸಿನೆಸ್ ಮಾಡ್ಕೊಂಡಿದ್ದಾರೆ ಅಂತ. ದಿನಕ್ಕೆ ೧೦ ರಿಂದ ೧೨ ಬಾರಿ ವಿಸಿಟ್ ಕೊಟ್ಟು, ೩೦೦ ರಿಂದ ೪೦೦ ರೂಪಾಯಿ ದುಡ್ಡು ಮಾಡಿಕೊಳ್ಳ್ತಾರಂತೆ. ಯಪ್ಪಾ ಇದು ಎಂಥಾ ಲೋಕವಯ್ಯ? ಜನನಾಯಕರಿಗೆ ತಕ್ಕ ಜನರಾಗ್ತಾ ಇದ್ದಾರಲ್ಲಪ್ಪಾ ಅನ್ಸ್ತು. ಇದೇನು ಹೊಸದಲ್ಲ ಬಿಡಿ ಸ್ವಂತ ಮನೆ ಮಾಲಿಕರು ಮೂರ್ ಮೂರು ಬಿ.ಪಿ.ಎಲ್ ಕಾರ್ಡ್ ಇಟ್ಕೋಂಡಿರೋದು., ಇತ್ಯಾದಿ ಇತ್ಯಾದಿ ಗೊತ್ತಿರೋ ವಿಷಯಾನೆ.

No comments: