Friday, 2 December 2011

ಬಾಬಾರೊ ಸೂರ್ಯ ನನ್ನ ಮನಮುಗಿಲಿಗೆ

ಬಾಬಾರೊ ಸೂರ್ಯ  ನನ್ನ ಮನಮುಗಿಲಿಗೆ
ನೀನಾದೆ    ಸ್ಫೂರ್ತಿ  ನನ್ನ   ಕವಿತೆಗೆ
ಬರೆಯಲಾರೆನು ಇನ್ನು ಈ ವಿರಹಗೀತೆ
ಗಂಟಲು ಬಿಗಿದಿದೆ ಬರದಿನ್ನು ಮಾತೆ
 ಬಾಬಾರೊ ಸೂರ್ಯನೆ ನನ್ನ ಮನಮುಗಿಲಿಗೆ 

ನಿನ ನಗೆಯ ಅಲೆ ಇಂದು, ನನ್ನ ಬಂಧಿ ಮಾಡಿದೆ
ಅಲೆಯಲ್ಲ ಅದು ಪ್ರೀತಿ  ಬಲೆಯೆಂದು ಹೇಳಿದೆ
ಕಣ್ಮುಚ್ಚಿ ಕೊಂಡರು ನಿನ  ರೂಪ ಮೂಡಿದೆ  
ನನ್ನನ್ನು ಕಾಡಿದೆ    ನನ್ನನ್ನು ಕಾಡಿದೆ
ಬಾಬಾರೊ ಸೂರ್ಯನೆ ನನ್ನ ಮನಮುಗಿಲಿಗೆ  

ನಿನ್ನ ಪ್ರೀತಿ ಹರಸಿ, ಮನ ನಲುಗಿ ಹೋಗಿದೆ
ಕಣ್ಣಿರು ಸುರಿಸಿ  ನಾನೊಂದು ಹಾಡಿದೆ
ನಿನ್ನ ಎದೆಯ ಗೂಡಲ್ಲಿ ನೆಲೆಯೊಂದ ಬೇಡಿದೆ
ಎಷ್ಟು ಕೂಗಿದರು ಬರದಾದೆ ಏಕೆ ಬರದಾದೆ ಏಕೆ
ಬಾಬಾರೊ ಸೂರ್ಯನೆ ನನ್ನ ಮನಮುಗಿಲಿಗೆ  







 

 

No comments: