Saturday, 11 January 2014

ನೆನಪೆಂಬ ಭೋದಿ

ಮುಂಜಾನೆ ಭೋದಿವೃಕ್ಷ ಪ್ರದಕ್ಷಿಣೆಯತ್ತ
ತಲ್ಲೀನವಾಗಿರಲು ನನ್ನ ಚಿತ್ತ
ಗಾಳಿಗೆ ತೂರಿ ಬಂದ ಎಲೆಯೊಂದು
ನಿಮಿಷದೆ ಕೊಂಡೊಯ್ಯಿತು ಎನ್ನ, ಕಳೆದ  ಬಾಲ್ಯದತ್ತ
ಸುತ್ತಲಾರಂಭಿಸಿತು ಮನವು ಸವಿ ನೆನಪುಗಳ ಸುತ್ತ


ಅರಳಿ ಎಲೆಯ ಮೇಲೆ ಅರಳಿದ್ದ ಪುಟ್ಟ  ಕೈಗಳ ಬರಹಗಳು
ಇಷ್ಟ ದೈವದ ಹೆಸರುಗಳು, ಹಳೆಯ  ಸ್ನೇಹದ ಕುರುಹುಗಳು
ಬೆಳೆಯದ ನವಿಲುಗರಿಯೊಂದಿಗೆ ಬೆಳೆದ ಕನಸುಗಳು
ಅರೆ ಗಳಿಗೆಯಲಿ  ಬಾಲ್ಯವ ನೆನೆನು ತುಂಬಿತ್ತೆನ್ನ ಕಣ್ಣುಗಳು

//ನಂದಿನಿ//




No comments: