Sunday, 12 January 2014

ನನ್ನ ಬಾಳ ನೇಸರ


ಹೃದಯ ಮಂದಿರದಿ ಕುಳಿತ ಹೂಮನಸ ಹೂಗಾರ
ಹೆಜ್ಜೆಗೆ ಹೆಜ್ಜೆಯನಿಡು  ನೀ   ಸಪ್ತಪದಿಯ ಜೊತೆಗಾರ  
ಒಲವ ಉದಯವನಿತ್ತ ನನ್ನ ಬಾಳ ನೇಸರ
ನೀ ಕೊಟ್ಟ ಕಾಲ್ಗೆಜ್ಜೆಯೂ  ಕನವರಿಸಿದೆ ನಿನ್ನ ಹೆಸರ 

ಏಕೋ ಕಾಣೆ ಈಗೀಗ ಹೆಚ್ಚಾಗುತಿದೆ ನಮ್ಮ ನಡುವಣ ಅಂತರ 
ಅರಿಯದ ಅಂತರ ಮನಸಲಿ ಮೂಡಿಸಿದೆ  ಮುಗಿಯದ ಬೇಸರ
ನೀನಿಲ್ಲದೇ ಈ ಗಾಳಿಪಟಕೆ ಉಳಿವುಂಟೇ ಹೇಳೋ ಪ್ರಿಯಕರ ?  
ಮೌನವ ಮುರಿದು ವಿಚಾರ ಮಾಡಿ ನೀಡು ಬಾರೋ ಉತ್ತರ


ಕನಸ ನನಸು  ಮಾಡೋ ಮನಸು ಮಾಡು ಮನಸಚೋರ
ತಂದಿರುವೆ ನಿನಗಾಗಿ ಅಕ್ಕರೆಯ ಅಪರೂಪದ  ಅಕ್ಷರಮಾಲೆ 
ಕರುಣೆಯ ಕರಿಮಣಿಗೆ ಅಕ್ಕರೆಯ ಸಕ್ಕರೆ ಮಣಿಯ ಪೋಣಿಸಿ
ತೊಡಿಸೆನಗೆ ಸಂಪ್ರೀತಿಯ ಸಂಭಂದಮಾಲೆ
ಕರಿಮಣಿಯೇ  ನಾಚಿ ಹವಳವಾಗುವಂತೆ 

//ನಂದಿನಿ//










No comments: