ಬಂದೈತಿ ಸಂಕ್ರಾಂತಿ ,ನೊರೆಹಾಲು ಉಕ್ಕೈತಿ
ತೆನೆ ಎಲ್ಲ ತೂಗೈತಿ, ಸಿಹಿಕಬ್ಬು ಬಾಗೈತಿ
ಭುವಿ ಸ್ವರ್ಗ ಆಗೈತಿ, ನಗುತಾವೆ ಸೇವಂತಿ
ಹುಗ್ಗಿ ಊಟಕೆ ಹಿಗ್ಗಿ ಕುಣಿಯೋಣು ಏನಂತಿ?
ರಾಗಿ ರಟ್ಟೆಯ ತನ್ನಿ, ರಾಶಿ ಹಾಕುವ ಬನ್ನಿ
ಎಳ್ಳು ಬೆಲ್ಲವ ತನ್ನಿ, ಹಂಚಿ ತಿನ್ನುವ ಬನ್ನಿ
ಬಸವಣ್ಣ ಬಂದಾನು ನೆಗೀಲ ತಂದಾನು
ಬಣ್ಣ ಬಳಿಯಿರೆ ನಮ್ಮ ಬಸವಾನ ಕೊಂಬಿಗೆ
ಎಳೆಕಡಲೆ, ಹಸಿಅವರೆ, ಸಿಹಿಗೆಣಸು ಸಾಕೇನು ಪೂಜೆಗೆ ?
ಎಳೆಕಡಲೆ, ಹಸಿಅವರೆ, ಸಿಹಿಗೆಣಸು ಸಾಕೇನು ಪೂಜೆಗೆ ?
ಬೆಂಕಿ ಹಾಯುವ ಮುನ್ನ ಬೆಳಗವ್ವ ದೀವಿಗೆ
ಹಸುವ ಸಗಣಿಯ ತಂದು ಮಾಡವ್ವ ಗಣಪತಿ
ಶಿವನೊಟ್ಟು ಬಂದವಳೆ ನಮ್ಮವ್ವ ಪಾರೋತಿ
ಬಾರವ್ವ ವಾಸಂತಿ, ಬೆಳಗೂವ ಆರತಿ
ಅಯ್ಯಪ್ನ ದಯದಾಗೆ ಬೆಳಗಾಲಿ ಮಕರಜ್ಯೋತಿ
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
// ರಚನೆ & ವಿನ್ಯಾಸ - ನಂದಿನಿ ನಂಜಪ್ಪ //
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
// ರಚನೆ & ವಿನ್ಯಾಸ - ನಂದಿನಿ ನಂಜಪ್ಪ //
No comments:
Post a Comment