ಕತ್ತಲಲ್ಲಿ ಹುಡುಕದಿರು ಬೆಳದಿಂಗಳ ಬಾಲೆಯ
ಒಪ್ಪಿಕೊಳ್ಳಲು ಮರೆಯದಿರು ಎದುರಿರುವ ನಲ್ಲೆಯ
ಮರೆತು ಬಿಡು ಗೆಳೆಯಾ...
ಕನಸ ಕತ್ತಲೆಯಲಿ ಕಾಣಿಸಿ
ಕ್ಷಣದೆ ಮರೆಯಾಗಿ
ಕಹಿ ನೆನಪ ಕೂಪದಲಿ ನಿನ್ನ ದೂಡಿದ
ಆ ಬೆಳದಿಂಗಳ ಬಾಲೆಯ
ಒಪ್ಪಿಕೊಳ್ಳೊ ಇನಿಯ ಈ ನಿನ್ನ ನಲ್ಲೆಯ
ಈ ತನುವ ದೀವಿಗೆಗೆ
ಈ ಮನವ ಬತ್ತಿಯ ಮಾಡಿ
ಎನ್ನಾತ್ಮದಾ ಜ್ಯೋತಿ ಬೆಳಗಿಸಿ
ಕಳೆಯುವೆ ನಿನ್ನ ಮನದ ಕತ್ತಲೆಯ
//ನಂದಿನಿ ನಂಜಪ್ಪ//
ಒಪ್ಪಿಕೊಳ್ಳಲು ಮರೆಯದಿರು ಎದುರಿರುವ ನಲ್ಲೆಯ
ಕನಸ ಕತ್ತಲೆಯಲಿ ಕಾಣಿಸಿ
ಕ್ಷಣದೆ ಮರೆಯಾಗಿ
ಕಹಿ ನೆನಪ ಕೂಪದಲಿ ನಿನ್ನ ದೂಡಿದ
ಆ ಬೆಳದಿಂಗಳ ಬಾಲೆಯ
ಈ ತನುವ ದೀವಿಗೆಗೆ
ಈ ಮನವ ಬತ್ತಿಯ ಮಾಡಿ
ಎನ್ನಾತ್ಮದಾ ಜ್ಯೋತಿ ಬೆಳಗಿಸಿ
ಕಳೆಯುವೆ ನಿನ್ನ ಮನದ ಕತ್ತಲೆಯ
No comments:
Post a Comment