ಇದು ನಮ್ಮೂರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಟ್ಟ ಕಡೆಯ ಊರು "ಬಾಚಹಳ್ಳಿ" ನಮ್ಮೂರು ಬಿಟ್ಟು ಮುಂದೆ ಬಂಡೀಪುರ ಕಾಡು ಪ್ರಾರಂಭ ಆಗುತ್ತೆ, ಮಲೆನಾಡು ಮಾತ್ರ ಸೊಗಸು ಅಂತ ತಿಳ್ಕೋಬೇಡಿ ಶ್ರಮಜೀವಿಗಳಿದ್ದರೆ ಬಯಲುಸೀಮೆ ಕೂಡ ಚೆನ್ನಾಗಿರುತ್ತೆ. ಹೊಲದ ತಪ್ಪಲಲ್ಲಿ ನಿಂತು ನೋಡಿದ್ರೆ, ಒಂದು ಕಡೆ ಹಿಮಹೊತ್ತ ಗೊಪಾಲಸ್ವಾಮಿ ಬೆಟ್ಟ, ಇನ್ನೊಂದು ಕಡೆ ಊಟಿಯ ಉದಕಮಂಡಲ (ನೀಲಗಿರಿ) ಕಾಣಬಹುದು. ಕಪಟವರಿಯದ ಮುಗ್ದ ಮನಸ್ಸಿನ ಜನ, ಎಲ್ಲೆಲ್ಲೂ ಹಸಿರು ......... ಶುದ್ದವಾದ ಮಣ್ಣು...... ಮೊಣಕಾಲುದ್ದ ನೀರಿರುವ ಎರಡು ಕೆರೆಗಳು, ಒಂದು ಚಾವಡಿಯ ಮಾರಮ್ಮನ ಗುಡಿ, ಸುಮಾರು ಏಳುನೂರು ಮನೆಗಳು, ಒಂದು ಹೈಸ್ಕೂಲು, ಸರ್ಕಾರಿ ಆಸ್ಪತ್ರೆ, ಸುತ್ತೂರು ಸ್ವಾಮಿಯವರ ಅಧೀನದಲ್ಲಿರುವ ಒಂದು ಬಸವೇಶ್ವರ ಅನಾಥಾಲಯ ಸುಮಾರಾಗಿರುವ ರಸ್ತೆಗಳು ಇಷ್ಟು ಸೌಲಭ್ಯ ನಮ್ಮೂರಿನ ಪುಣ್ಯವೇ ಸರಿ ಅದಕ್ಕೆ ಕಾರಣ ಪಕ್ಕದಲ್ಲಿರುವ ಪ್ರವಾಸಿತಾಣ ಬಂಡೀಪುರ , ಯಾವ ಶಾಪವೊ ಕಾಣೆ ನಮ್ಮೂರಿಗೆ ಕಷ್ಟಗಳು ಮತ್ತು ಅಪವಾದಗಳೇ ಜಾಸ್ತಿ. ಈ ಫೋಟೊನಲ್ಲಿ ಇರೊಹಾಗೆ ಹಸಿರು ನೋಡಬೇಕಾದರೆ ನಮ್ಮ ಜನ ತುಂಬಾ ಕಷ್ಟಪಡಬೇಕು, ಯಾಕಂದ್ರೆ ನಮ್ಮಲ್ಲಿ ನೀರಿನ ಸಮಸ್ಯೆ ತುಂಬಾ ಜಾಸ್ತಿ. ಅಲ್ಲೆಲ್ಲೋ ಊರು ಊರು ಕೊಚ್ಚ್ಕೊಂಡು ಹೋಗುವಷ್ಟು ಮಳೆ, ಇಲ್ಲಿ ಮಳೆ ಕಡಿಮೆ, ಬಂದ್ರೂ ಬೇಡದ ಸಮಯದಲ್ಲಿ ಬರುತ್ತೆ, ಬತ್ತಿದ ಭಾವಿಗಳು, ನೀರು ಬರದ ಬೋರ್ವೆಲ್ ಗಳು . ಮೈಸೂರಿಗೆ ಹತ್ತಿರವಾಗಿದ್ರೂ ತಮಿಳುನಾಡಿಗೆ ತಲುಪುವ ರೀತಿ ನಮಗೆ ನೀರು ತಲುಪುವುದಿಲ್ಲ. ಸಾದಾರಣವಾಗಿ ನೀರಾವರಿ ಇಲ್ಲದ ಕಾರಣ ನಮ್ಮಲ್ಲಿ ಜೋಳ, ಮೆಕ್ಕೆಜೋಳ, ಕಡಲೆಕಾಯಿಯಂತ ಬೆಳೆಗಳು ಬೆಳೆಯುತ್ತಾರೆ, ಪಂಪ್ ಸೆಟ್ ಇರೋವ್ರು, ಪಂಪ್ ಸೆಟ್ನಲ್ಲಿ ನೀರು ಬಂದ್ರೆ ಹರಿಸಿನ, ಈರುಳ್ಳಿಯಂತ ಆರ್ಥಿಕ ಬೆಳೆಗಳನ್ನು ಬೆಳೆಯುತ್ತಾರೆ. ಬತ್ತ, ಕಬ್ಬು ಬೆಳೆಯುವ ಮಣ್ಣಿನ ಗುಣ ಇದ್ದರೂ ಆನೆ-ಹಂದಿಗಳ ಕಾಟ ಬೇರೆ ಒಂದು ದಿನ ಎಚ್ಚರ ತಪ್ಪಿದರು ಎಲ್ಲ ದ್ವಂಸ ಮಾದಿಬಿಡತ್ವೆ , ಅಪ್ಪಿ ತಪ್ಪಿ ನೀರು ಬಂದ್ರೂ ಕರೆಂಟ್ ಇರಲ್ಲ... ಇದ್ರೂ ಸಿಂಗಲ್ ಫೇಸ್ ಕರೆಂಟ್, ಇನ್ನೂ ಜನರೇಟರ್ ತಂದು ಅದಕ್ಕೆ ಡೀಸೆಲ್ ಪೂರೈಸಿ, ಆಳು, ಕಾಳು, ಕಳೆ ಎಲ್ಲಾ ಕಳೆದರೆ ಎಂಥಾ ಆರ್ಥಿಕ ಬೆಳೆಯಾದ್ರು ಕೈನಲ್ಲಿ ಉಳಿಯೋದು ಪುಡಿಗಾಸೇ..., ಈರುಳ್ಳೀ ಬೆಲೆಯಲ್ಲಾಗುವ ಏರಿಳಿತ ಎಲ್ಲರಿಗೂ ಗೊತ್ತಿರೋದೆ, ಇನ್ನು ರೇಷ್ಮೆ ಬೆಳೆ, ಅದರಲ್ಲೂ ಎಡವಟ್ಟು ಜಾಸ್ತಿ ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಆಹಾರ, ಅದರಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ಹುಳ ಬದುಕಲ್ಲ, ನಷ್ಟ ಆದ್ರೆ ನಾವು ಬದುಕಲ್ಲ, ನಮ್ಮ ಜಿಲ್ಲೆ ಯಲ್ಲಿ ತುಂಬ ಪ್ರೇಕ್ಷಣೀಯ ಸ್ಥಳಗಳಿದ್ರೂ ಅದು ಗುರುತಿಸಲ್ಪತ್ತಿದ್ದೆ ಬೇರೇತರ... ಒಂದ್ ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ನಿಂದ ... ಈಗ ಇನ್ನೊಂದು ಥರ. ಯಾವ ರಾಜಕೀಯ ಪಾರ್ಟಿ ಬಂದರೂ ನಮ್ಮೂರಿಗೆ ಕಾಲಿಡಲ್ಲ ಯಾಕೆಂದ್ರೆ ಚಾಮರಾಜನಗರಕ್ಕೆ ಕಾಲಿಟ್ರೆ ಅಧಿಕಾರ ಕಳೆದು ಕೊಳ್ಳುತ್ತೀವಿ ಅನ್ನೋ ಮೂಡನಂಬಿಕೆ.... ಇನ್ನೂ ಕೊಳ್ಳೇಗಾಲ... ಈ ಕತ್ತಲ ಕಾಡಿನ ಜನ ಮಾಟ ಮಂತ್ರ ಮಾಡೋ ಮಾಂತ್ರಿಕರು ಅನ್ನ್ನೋ ಅಪವಾದ .. ಇಷ್ಟು ಸಾಲದು ಅಂತ ಎಲ್ಲಿಂದಲೋ ಬಂದ ಜನ ಗುಂಡ್ಲುಪೇಟೆ ರೆಸಾರ್ಟ್ ಹೆಸರಲ್ಲಿ ಸಲ್ಲದ ಆರೋಪ ಬೇರೆ ಮಾಡ್ತಾ, ನಮ್ಮೂರ ಹೆಸರು ಹಾಳುಮಾಡ್ತಾ ಇದ್ದಾರೆ. ಇದು ನಿಜಕ್ಕೂ ವಿಪರ್ಯಾಸ !!! ನಮ್ಜನ ಎಷ್ಟು ಮುಗ್ದರು ಅಂದ್ರೆ ನಿಮ್ಮ ಜಮೀನುಗಳನ್ನು ಅರಣ್ಯ ಇಲಾಕೆಗೆ ಒತ್ತುವರಿ ಮಾಡ್ಕೋತೀವಿ ಅಂತ ಹೇಳೋಕೆ ಅಧಿಕಾರಿಗಳು ಬಂದ್ರೆ ಅದನ್ನ ಯಾವ್ದೋ ಭಾಷಣ ಅಂತ ತಿಳ್ಕೊಂಡು ಚಪ್ಪಾಳೆ ತಟ್ಟಿದವರು .. ಅಂತವರ ಮೇಲೆ ಇಂಥ ಅಪವಾದಗಳು ಸರಿನಾ?Thursday, 9 January 2014
ಇದು ನಮ್ಮೂರು ನಮ್ಮೂರಿಗೇಕಿಂತ ಶಾಪ
ಇದು ನಮ್ಮೂರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಟ್ಟ ಕಡೆಯ ಊರು "ಬಾಚಹಳ್ಳಿ" ನಮ್ಮೂರು ಬಿಟ್ಟು ಮುಂದೆ ಬಂಡೀಪುರ ಕಾಡು ಪ್ರಾರಂಭ ಆಗುತ್ತೆ, ಮಲೆನಾಡು ಮಾತ್ರ ಸೊಗಸು ಅಂತ ತಿಳ್ಕೋಬೇಡಿ ಶ್ರಮಜೀವಿಗಳಿದ್ದರೆ ಬಯಲುಸೀಮೆ ಕೂಡ ಚೆನ್ನಾಗಿರುತ್ತೆ. ಹೊಲದ ತಪ್ಪಲಲ್ಲಿ ನಿಂತು ನೋಡಿದ್ರೆ, ಒಂದು ಕಡೆ ಹಿಮಹೊತ್ತ ಗೊಪಾಲಸ್ವಾಮಿ ಬೆಟ್ಟ, ಇನ್ನೊಂದು ಕಡೆ ಊಟಿಯ ಉದಕಮಂಡಲ (ನೀಲಗಿರಿ) ಕಾಣಬಹುದು. ಕಪಟವರಿಯದ ಮುಗ್ದ ಮನಸ್ಸಿನ ಜನ, ಎಲ್ಲೆಲ್ಲೂ ಹಸಿರು ......... ಶುದ್ದವಾದ ಮಣ್ಣು...... ಮೊಣಕಾಲುದ್ದ ನೀರಿರುವ ಎರಡು ಕೆರೆಗಳು, ಒಂದು ಚಾವಡಿಯ ಮಾರಮ್ಮನ ಗುಡಿ, ಸುಮಾರು ಏಳುನೂರು ಮನೆಗಳು, ಒಂದು ಹೈಸ್ಕೂಲು, ಸರ್ಕಾರಿ ಆಸ್ಪತ್ರೆ, ಸುತ್ತೂರು ಸ್ವಾಮಿಯವರ ಅಧೀನದಲ್ಲಿರುವ ಒಂದು ಬಸವೇಶ್ವರ ಅನಾಥಾಲಯ ಸುಮಾರಾಗಿರುವ ರಸ್ತೆಗಳು ಇಷ್ಟು ಸೌಲಭ್ಯ ನಮ್ಮೂರಿನ ಪುಣ್ಯವೇ ಸರಿ ಅದಕ್ಕೆ ಕಾರಣ ಪಕ್ಕದಲ್ಲಿರುವ ಪ್ರವಾಸಿತಾಣ ಬಂಡೀಪುರ , ಯಾವ ಶಾಪವೊ ಕಾಣೆ ನಮ್ಮೂರಿಗೆ ಕಷ್ಟಗಳು ಮತ್ತು ಅಪವಾದಗಳೇ ಜಾಸ್ತಿ. ಈ ಫೋಟೊನಲ್ಲಿ ಇರೊಹಾಗೆ ಹಸಿರು ನೋಡಬೇಕಾದರೆ ನಮ್ಮ ಜನ ತುಂಬಾ ಕಷ್ಟಪಡಬೇಕು, ಯಾಕಂದ್ರೆ ನಮ್ಮಲ್ಲಿ ನೀರಿನ ಸಮಸ್ಯೆ ತುಂಬಾ ಜಾಸ್ತಿ. ಅಲ್ಲೆಲ್ಲೋ ಊರು ಊರು ಕೊಚ್ಚ್ಕೊಂಡು ಹೋಗುವಷ್ಟು ಮಳೆ, ಇಲ್ಲಿ ಮಳೆ ಕಡಿಮೆ, ಬಂದ್ರೂ ಬೇಡದ ಸಮಯದಲ್ಲಿ ಬರುತ್ತೆ, ಬತ್ತಿದ ಭಾವಿಗಳು, ನೀರು ಬರದ ಬೋರ್ವೆಲ್ ಗಳು . ಮೈಸೂರಿಗೆ ಹತ್ತಿರವಾಗಿದ್ರೂ ತಮಿಳುನಾಡಿಗೆ ತಲುಪುವ ರೀತಿ ನಮಗೆ ನೀರು ತಲುಪುವುದಿಲ್ಲ. ಸಾದಾರಣವಾಗಿ ನೀರಾವರಿ ಇಲ್ಲದ ಕಾರಣ ನಮ್ಮಲ್ಲಿ ಜೋಳ, ಮೆಕ್ಕೆಜೋಳ, ಕಡಲೆಕಾಯಿಯಂತ ಬೆಳೆಗಳು ಬೆಳೆಯುತ್ತಾರೆ, ಪಂಪ್ ಸೆಟ್ ಇರೋವ್ರು, ಪಂಪ್ ಸೆಟ್ನಲ್ಲಿ ನೀರು ಬಂದ್ರೆ ಹರಿಸಿನ, ಈರುಳ್ಳಿಯಂತ ಆರ್ಥಿಕ ಬೆಳೆಗಳನ್ನು ಬೆಳೆಯುತ್ತಾರೆ. ಬತ್ತ, ಕಬ್ಬು ಬೆಳೆಯುವ ಮಣ್ಣಿನ ಗುಣ ಇದ್ದರೂ ಆನೆ-ಹಂದಿಗಳ ಕಾಟ ಬೇರೆ ಒಂದು ದಿನ ಎಚ್ಚರ ತಪ್ಪಿದರು ಎಲ್ಲ ದ್ವಂಸ ಮಾದಿಬಿಡತ್ವೆ , ಅಪ್ಪಿ ತಪ್ಪಿ ನೀರು ಬಂದ್ರೂ ಕರೆಂಟ್ ಇರಲ್ಲ... ಇದ್ರೂ ಸಿಂಗಲ್ ಫೇಸ್ ಕರೆಂಟ್, ಇನ್ನೂ ಜನರೇಟರ್ ತಂದು ಅದಕ್ಕೆ ಡೀಸೆಲ್ ಪೂರೈಸಿ, ಆಳು, ಕಾಳು, ಕಳೆ ಎಲ್ಲಾ ಕಳೆದರೆ ಎಂಥಾ ಆರ್ಥಿಕ ಬೆಳೆಯಾದ್ರು ಕೈನಲ್ಲಿ ಉಳಿಯೋದು ಪುಡಿಗಾಸೇ..., ಈರುಳ್ಳೀ ಬೆಲೆಯಲ್ಲಾಗುವ ಏರಿಳಿತ ಎಲ್ಲರಿಗೂ ಗೊತ್ತಿರೋದೆ, ಇನ್ನು ರೇಷ್ಮೆ ಬೆಳೆ, ಅದರಲ್ಲೂ ಎಡವಟ್ಟು ಜಾಸ್ತಿ ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಆಹಾರ, ಅದರಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ಹುಳ ಬದುಕಲ್ಲ, ನಷ್ಟ ಆದ್ರೆ ನಾವು ಬದುಕಲ್ಲ, ನಮ್ಮ ಜಿಲ್ಲೆ ಯಲ್ಲಿ ತುಂಬ ಪ್ರೇಕ್ಷಣೀಯ ಸ್ಥಳಗಳಿದ್ರೂ ಅದು ಗುರುತಿಸಲ್ಪತ್ತಿದ್ದೆ ಬೇರೇತರ... ಒಂದ್ ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ನಿಂದ ... ಈಗ ಇನ್ನೊಂದು ಥರ. ಯಾವ ರಾಜಕೀಯ ಪಾರ್ಟಿ ಬಂದರೂ ನಮ್ಮೂರಿಗೆ ಕಾಲಿಡಲ್ಲ ಯಾಕೆಂದ್ರೆ ಚಾಮರಾಜನಗರಕ್ಕೆ ಕಾಲಿಟ್ರೆ ಅಧಿಕಾರ ಕಳೆದು ಕೊಳ್ಳುತ್ತೀವಿ ಅನ್ನೋ ಮೂಡನಂಬಿಕೆ.... ಇನ್ನೂ ಕೊಳ್ಳೇಗಾಲ... ಈ ಕತ್ತಲ ಕಾಡಿನ ಜನ ಮಾಟ ಮಂತ್ರ ಮಾಡೋ ಮಾಂತ್ರಿಕರು ಅನ್ನ್ನೋ ಅಪವಾದ .. ಇಷ್ಟು ಸಾಲದು ಅಂತ ಎಲ್ಲಿಂದಲೋ ಬಂದ ಜನ ಗುಂಡ್ಲುಪೇಟೆ ರೆಸಾರ್ಟ್ ಹೆಸರಲ್ಲಿ ಸಲ್ಲದ ಆರೋಪ ಬೇರೆ ಮಾಡ್ತಾ, ನಮ್ಮೂರ ಹೆಸರು ಹಾಳುಮಾಡ್ತಾ ಇದ್ದಾರೆ. ಇದು ನಿಜಕ್ಕೂ ವಿಪರ್ಯಾಸ !!! ನಮ್ಜನ ಎಷ್ಟು ಮುಗ್ದರು ಅಂದ್ರೆ ನಿಮ್ಮ ಜಮೀನುಗಳನ್ನು ಅರಣ್ಯ ಇಲಾಕೆಗೆ ಒತ್ತುವರಿ ಮಾಡ್ಕೋತೀವಿ ಅಂತ ಹೇಳೋಕೆ ಅಧಿಕಾರಿಗಳು ಬಂದ್ರೆ ಅದನ್ನ ಯಾವ್ದೋ ಭಾಷಣ ಅಂತ ತಿಳ್ಕೊಂಡು ಚಪ್ಪಾಳೆ ತಟ್ಟಿದವರು .. ಅಂತವರ ಮೇಲೆ ಇಂಥ ಅಪವಾದಗಳು ಸರಿನಾ?
Subscribe to:
Post Comments (Atom)
3 comments:
ಒಂದು ಹಳ್ಳಿಯ ನೋವಿನ ಕಥೆ ಹೇಳಿದ ಹಳ್ಳಿ ಹುಡುಗಿ , ನಿಮ್ಮ ನೋವಿನಲ್ಲಿ ನಮ್ಮ ಪಾಲು ಇದೆ , ಹೌದು ನಿಮ್ಮ ಹಳ್ಳಿಯ ಹಾದಿಯಲ್ಲಿ ನಾನೂ ತೆರಳಿದ್ದೇನೆ , ದೂರದ ಬೆಟ್ಟ ನುಣ್ಣಗೆ ಅನ್ನೋಹಾಗೆ , ಪ್ರವಾಸಿಯಾಗಿ ತೆರಳುವ ಜನಕ್ಕೆ ಅಲ್ಲಿನ ಸುತ್ತ ಮುತ್ತ ಹಳ್ಳಿಗಳ ಜನರ ಬವಣೆ ಅರ್ಥ ಆಗುವುದಿಲ್ಲ, ನಿಮ್ಮ ಪ್ರತೀ ಮಾತು ನೈಜತೆಯ ಚಾಟಿ ಏಟು ಇಂದಿನ ನಾಗರೀಕ ಸಮಾಜಕ್ಕೆ. ಒಳ್ಳೆಯ ಲೇಖನ ನಿಮಗೆ ಧನ್ಯವಾದಗಳು
thank you very much sir
'ಬೆಂಗಳೂರು ಗೆ ಶಿಕ್ಷಣ ಹಾಗು ಉದ್ಯೋಗ ಬಯಸಿ ಬರುವ ಯುವಕ ಯುವತಿಯರು ತಮ್ಮ ಬಾಲ್ಯದಲ್ಲಿ ಬದುಕು ಕಲಿಸಿ ಕೊಟ್ಟ ಹಳ್ಳಿ ಯನ್ನು ಮರೆಯುತ್ತಿದ್ದಾರೆ ಹಾಗು ತಮ್ಮ ಮೂಲವನ್ನು ನಿರ್ಲಕ್ಷದಿಂದ ಕಾಣುತ್ತಿದ್ದಾರೆ..ಅಂತಹ ಮಿತ್ರರನ್ನು ಹೆಚ್ಚರಿಸುವ ಲೇಖನ
ನಮ್ಮ ಹಳ್ಳಿಗಳ ಗೋಳು ಕೇಳೋರು ಯಾರು ?
Post a Comment