Thursday, 13 February 2014

ಭ್ರಷ್ಟಾಚಾರ

ಬ್ರೈಬರಿ ಹೆಸರಲಿ ಜೇಬಿಗೆ ಕತ್ತರಿ
ರಾಬರಿ ಮಾಡುವ ರಾಯಲ್ ವೈಖರಿ
ಬರಿದಾಗುತಿದೆ ರಾಷ್ಟ್ರದ ತಿಜೋರಿ
ಬೇಕೇನೂ ಇಂತಹ ಸರ್ಕಾರಿ ನೌಕರಿ?
ಪ್ರಜೆಗಳೆ ನೀವಾಗದಿರಿ ಹರಕೆಯ ಕುರಿ

ಅರಿವಿಲ್ಲದೆ ಗರಿಗೆದರಿದೆ ಕೆಟ್ಟ ಆಚಾರ
ಅದೇ ಈ ಭ್ರಷ್ಟಾಚಾರವೆಂಬ ಅನಾಚಾರ
ದೇಶದ ಪ್ರಗತಿಗಿದು ಬೆನ್ನಟ್ಟಿದ ಗ್ರಹಚಾರ
ಹುಡುಕಬೇಕಿದೆ ಹೋರಾಟದೆ ಪರಿಹಾರ
ಇಳಿಸಬೇಕಿದೆ ಭ್ರಷ್ಟ ಅಧಿಕಾರಿಗಳ ಅಹಂಕಾರ
ಬೇಕಿದೆ ನಿಮ್ಮೆಲ್ಲರ ಒಕ್ಕೊರಲಿನ ಸಹಕಾರ

No comments: