"ಫ್ರೆಂಡ್ ಶಿಪ್"
ಪ್ರಣಯವಿಲ್ಲದ ಪ್ರೀತಿ, ಸರಸವಿಲ್ಲದ ಸಲುಗೆ
ವಿರಸವಿಲ್ಲದ ಕದನ, ನನ್ನ ನಿನ್ನ ಗೆಳೆತನ
ಮುಖಪುಸ್ತಕದ ಪುಟ ತೆರೆಯುತಿದ್ದಂತೆ
ಹುಡುಕುವುದು ನನ್ನ ಕಣ್ಣು ನಿನ್ನನ್ನು
ನಾರ್ತ್ ನಲ್ಲಿ ನಾನು, ಸೌತ್ ನಲ್ಲಿ ನೀನು
ಆದರೇನು? ಇದೆಯಲ್ಲಾ ಸ್ಪಾರ್ಟ್ ಫೋನು?
ಮಾತು ಮೌನವಾದಾಗ ವಾಟ್ಸಪ್ಪ್
ಮೌನ ಮಾತಾದಾಗ ಸ್ಕೈಪ್
ಮುಳುಗದಿರಲಿ ಈ ನಮ್ಮ ಫ್ರೆಂಡ್ "ಶಿಪ್"
ಹೈ ಬಾಯ್ ನಡುವೆ ಉಳಿದ ಮಾತುಗಳೆಷ್ಟೋ
ಮಾತು ಮುಗಿದರೂ ಮುಗಿಯದ
ಮನ-ಮನಗಳ ಸಂಭಾಷಣೆಗಳೆಷ್ಟೋ..
ಹೇಗೋ ಅಪ್ಪಿಕೊಂಡೆನು ನಾ ನಿನ್ನ ಸ್ನೇಹವನು
//ನಂದಿನಿ//

No comments:
Post a Comment