ಗಂಡ್ ಮಕ್ಕ್ಳಗೋಳು
ಮನೆಯಲ್ಲಿ ಶ್ರೀಮತಿಯದೆ ಕಾರು ಬಾರು
ಮತಿಗೆಟ್ಟ ಪತಿಗೆ ಗತಿ ಬೀರು "ಬಾರು"
ಮಾಡ್ತಾಳೆ ದಿನಕ್ಕೊಂದು ಹೊಸ ವಾರು
ಬಡಿಸ್ತಾಳೆ ಉಪ್ಪಿಲ್ಲದ ತಿಳಿಸಾರು
ತೆಗೆಯೋಣವೆಂದರೆ ತಕರಾರು
ಅವರಪ್ಪ ಹೈ ಕಮಿಷನರ್ರು.
ಆದ್ರೂ ನಾನ್ ತುಂಬ ಹುಷಾರು
ಹಾಕಿಕೊಂಡು ಸದಾ ಬಿಸಿನೆಸ್ ಟೂರು
ಅಲೆಯುತಿರುವೆ ಊರು ಊರು....
//ನಂದಿನಿ//
No comments:
Post a Comment