ಅತ್ತಿಗೆ ತಂಗಿ
ಬೀಗರೂಟಕೆ ಬಂದು ಬೀಗ ಬ್ಯಾಡಲೇ ಹುಡುಗಿ
ಮುಂಗುರುಳಿಗೆ ಬೆರಳಾಡಿಸಿ ಕಾಡಬ್ಯಾಡಲೇ ಬೆಡಗಿ
ಬೆನ್ನ ತೋರಿಸಿ ಹಿಂಗೆ ಓಡಬ್ಯಾದಲೆ ಹುಡುಗಿ
ಬೇಸಗೆ ಬೇಗೆಯಲಿ ಬಸವಳಿದು ಬಂದಿವ್ನಿ
ಒಲವ ಉದಕವನೆರೆದು ಉಸಿರ ಉಳಿಸೆ ಹುಡುಗಿ
ಬೆಳ್ಳಿ ಕೊಳಗದ ಬಣ್ಣ, ಬಳ್ಳಿ ನಾಚುವ ಸಣ್ಣ
ಹೊಳೆವ ಕಣ್ಣವಳಣ್ಣ, ಬೆಲ್ಲದ ಮನಸವಳಣ್ಣ
ಮನದಮಾಳಿಗೆಯ ಹತ್ತಿ ಕೂತವಳಣ್ಣಾ
ನನ್ನ ಅತ್ತಿಗೆ ತಂಗಿ ಇವಳಣ್ಣ , ಅತ್ತಿಗೆ ತಂಗಿ ಇವಳಣ್ಣ
ಬಂದ ಬಧುಗಳ ಮನೆಕಡೆಗೆ ಕಳಿಸಿರುವೆ
ಬೆಂಡೋಲೆಗೆ ಬೆಲೆ ತೆತ್ತು ನಿನಗಾಗಿ ತಂದಿರುವೆ
ಬಿಂಕ ಬಿಟ್ಟು ಬಾರೆ ಬಾಗಿ ಬೊಟ್ಟಾನಿಡುವೆ
ಬರದ ಮನಕೆ ಸುರಿದ ಬಾನಹನಿ ನೀ ಚಲುವೆ
ಬೀಗರೂಟಕೆ ಬಂದು ಬೀಗ ಬ್ಯಾಡಲೇ ಹುಡುಗಿ
ಮುಂಗುರುಳಿಗೆ ಬೆರಳಾಡಿಸಿ ಕಾಡಬ್ಯಾಡಲೇ ಬೆಡಗಿ
ಬೆನ್ನ ತೋರಿಸಿ ಹಿಂಗೆ ಓಡಬ್ಯಾದಲೆ ಹುಡುಗಿ
ಬೇಸಗೆ ಬೇಗೆಯಲಿ ಬಸವಳಿದು ಬಂದಿವ್ನಿ
ಒಲವ ಉದಕವನೆರೆದು ಉಸಿರ ಉಳಿಸೆ ಹುಡುಗಿ
ಬೆಳ್ಳಿ ಕೊಳಗದ ಬಣ್ಣ, ಬಳ್ಳಿ ನಾಚುವ ಸಣ್ಣ
ಹೊಳೆವ ಕಣ್ಣವಳಣ್ಣ, ಬೆಲ್ಲದ ಮನಸವಳಣ್ಣ
ಮನದಮಾಳಿಗೆಯ ಹತ್ತಿ ಕೂತವಳಣ್ಣಾ
ನನ್ನ ಅತ್ತಿಗೆ ತಂಗಿ ಇವಳಣ್ಣ , ಅತ್ತಿಗೆ ತಂಗಿ ಇವಳಣ್ಣ
ಬಂದ ಬಧುಗಳ ಮನೆಕಡೆಗೆ ಕಳಿಸಿರುವೆ
ಬೆಂಡೋಲೆಗೆ ಬೆಲೆ ತೆತ್ತು ನಿನಗಾಗಿ ತಂದಿರುವೆ
ಬಿಂಕ ಬಿಟ್ಟು ಬಾರೆ ಬಾಗಿ ಬೊಟ್ಟಾನಿಡುವೆ
ಬರದ ಮನಕೆ ಸುರಿದ ಬಾನಹನಿ ನೀ ಚಲುವೆ

No comments:
Post a Comment