Tuesday, 25 February 2014

minigavana

1 .
ನೀನಿಲ್ಲದ ನಾನು
ನೀರಿಲ್ಲದ ಮೀನು


2.
 ನಿನ್ನ ನೋಟವು
ಇರಿಯದೇ ಕೊಲ್ಲುವ
ಈಳಿಗೆಮಣೆ


3.
ನೀಲಿ ಕಡಲ
ಕೆನ್ನೆಗೆ, ಚಂದಿರನ
ಬಿಂಬದ ಬಿಂದಿ
 


4
ಆಗಸದಿ
ಪ್ಲಸ್ ಮೈನಸ್ ಸಮ್ಮಿಲನ
ಧರಣಿಯ ಎದೆಯಲ್ಲಿ
ವರುಣನ ತನನಂ ತನನ

5.
ರೆಕ್ಕೆಗಳೇಕೆ
ಬಾನಿಗೆ ಹಾರಲು
ಕನಸ flight
ಸಾಕಲ್ಲವೇ?
 

6.
ನೆನಪ ಮೋಡ
ಎದೆಯ ಗೂಡ
ಅಪ್ಪಳಿಸಲು
ಕಣ್ಣ ಕೆರೆಯು ತುಂಬಿತು
//ನಂದಿನಿ//
 

 

No comments: