ಯಾವಾಗ್ಲೂ ಬಸ್ ಕಂಡಕ್ಟರ್ ಗಳನ್ನೆ ದೂರೋದು ತಪ್ಪು ರೀ....... ಮೊನ್ನೆ ಹಾಗನ್ನಿಸಿತು
ಮೊನ್ನೆ ನಮ್ಮ ಎದುರು ಮನೆ ಹುಡುಗಿಯ ಮದುವೆ ನೆಲಮಂಗಲದಲ್ಲಿ ಇತ್ತು. ಬುಧವಾರ ಗುರುವಾರ ಬೇರೆ ಇತ್ತು. ಆ ಹುಡುಗಿ ಅಪ್ಪನಿಗೆ ಸ್ವಲ್ಪ ದುಡ್ಡಿನ ಕೊಬ್ಬು ಮತ್ತು ಕೊಚ್ಚಿಕೊಳ್ಳೋದು ಜಾಸ್ತಿ. (ಅದಕ್ಕೆ ಹೆಚ್ಚು ವರದಕ್ಷಿಣೆಗೆ ಡೀಲ್ ಮಾಡ್ಕೊಳ್ಳೊ ಹಾಗಾಯಿತು) ನಂದಿನಿ ಲೇಔಟ್ ನಿಂದ ಬಸ್ ಮಾಡ್ತೀನಿ, ಬಸ್ ಮಾಡ್ತಿನಿ ಅಂತ ಹೇಳಿ ಹೇಳಿ ಕಡೆಗೆ ರೈಲ್ ಬಿಟ್ ಬಿಟ್ರು. ಬಸ್ಸು ಇಲ್ಲ ಎಂತದು ಇಲ್ಲ, ಸಮಯ ಸಂಜೆ ೭.೩೦ ಆಗ್ಬಿಟ್ಟಿತ್ತು, ಇನ್ನೇನ್ ಮಾಡೋದು ಅಪ್ಪ ಊರಲ್ಲಿ ಇರ್ಲಿಲ್ಲ ಬೆಳಗ್ಗೆ ಆಪೀಸಿಗೆ ರಜಾ ಹಾಕಿ ಮದುವೆಗೆ ಹೋಗೋಕೆ ಆಗಲ್ಲ, ಹೋಗೋದ್ ಬೇಡ ಅನ್ನೋ ಹಾಗೂ ಇಲ್ಲ, ಯಾಕೆಂದ್ರೆ ಅವ್ರು ನಮ್ಮ ಅಕ್ಕನ ಮದ್ವೆಗೆ ಬಂದಿದ್ರು , ಬೆಳಗೆ ಎದ್ದು ಮುಖ ನೋಡ್ವಾಗಲೆಲ್ಲ ಬಯ್ಯೊಕೋತಾರೆ ಅಷ್ಟೆ ಮತ್ತೆ ನನ್ ಮದ್ವೆ ಬೇರೆ ಲಿಸ್ಟ್ ನಲ್ಲಿ ಇದೆ, ಹಾಗಾಗಿ, ಅಮ್ಮ ನಾನು ಆರತಕ್ಷತೆಗೆ ಹೋಗಿ ಬರುವ ಅಂತ ಬಿ.ಎಂ.ಟಿ.ಸಿ. ಬಸ್ಸು ಹಿಡಿದು ಹೊರಟ್ವಿ, ಊಟ ಎಲ್ಲ ಮುಗೀತು ಮತ್ತೆ ವಾಪಾಸ್ ಬರುವಾಗ ಬಸ್ ನಂ.೨೫೮ ಸಿ. ಯಶವಂತ್ ಪುರ ಬಸ್ ಹತ್ಕೊಂಡ್ವಿ. ನಾನು ಎರಡನೆ ಸೀಟ್ನಲಿ ಕುಳಿತಿದ್ದೆ, ಮಾರ್ಗ ಮಧ್ಯ ಒಂದು ಹುಡುಗಿ ಬಸ್ ಹತ್ಕೊಂಡ್ಲು. ಎರಡನೆ ಸ್ಟಾಪ್ ಇಳಿತೀನಿ ಕಂಡಕ್ಟರ್ ಕೈನಲ್ಲಿ ಎರಡು ರುಪಾಯಿ ಕೊಟ್ಲು .
ಆಗ ಆ ಕಂಡಕ್ಟರ್, ಆರು ರುಪಾಯಿ ಕೊಡಮ್ಮ ಟಿಕೆಟ್ ಆರು ರೂಪಾಯಿ ಅಂದ್ರು
ರೀ ನೀ ಮೊದ್ಲು ಟಿಕೇಟ್ ಕೊಡ್ರಿ (ಆ ಹುಡುಗಿ ದಪ್ಪ ದಪ್ಪ ಗೆಡ್ಡೆಗಣ್ಣು ಬಿಟ್ಕೊಂಡು)
ದುಡ್ ಕೊಡ್ದೆ ಟಿಕೇಟ್ ಕೊಡ್ತಾರೆನಮ್ಮ (ಕಂಡಕ್ಟರ್)
ನಂಗೊತ್ತಿಲ್ವ ನಿಮ್ ಬುದ್ದಿ ಅದೆಷ್ಟು ಜನರಿಗೆ ಮೋಸ ಮಾಡಿದ್ದೀರಾ ಅಂತ, (ಹುಡುಗಿ ಜೋರಾಗಿ ಕಿರಿಚಿಕೊಂಡು ಹಾಗೆ ಹೀಗೆ ಅಂತ ಬಯ್ಯೊಕೆ ಶುರುಮಾಡಿದ್ಲು)
ಅವ್ನ್ಯಾವನೋ ಏನೋ ಮಾಡಿದ್ರೆ ನಮ್ಗೇನ್ ಹೇಳ್ತಿಯಾ ಸುಮ್ನೆ ಟಿಕೇಟ್ ತಗೊಳಮ್ಮ ಎಷ್ಟ್ ಮಾತಾಡ್ತೀಯ (ಕಂಡಕ್ಟರ್)
ಹೌದಯ್ಯ ನಾನ್ ಜಾಸ್ತಿ ಮಾತಾಡ್ತೀನಿ ಏನಿವಾಗ ? ನೀನ್ ಮಾತಾಡೋದು ಮೊದ್ಲು ಕಲಿ ನಾನ್ ಐನೂರು ರುಪಾಯಿ ದಂಡ ಕಟ್ಟಿದೀನಿ ನಿಮ್ಗೇನು ಗೊತ್ತು.
ಮ್ಮೌ ?? ದಂಡ ಕಟ್ದೆ ದಂಡ ಕಟ್ದೆ ಅಂತೀಯಲ್ಲ ಮತ್ಯಾಕಮ್ಮ ನನ್ ಕೈಗೆ ಎರಡು ರುಪಾಯಿ ಕೊಟ್ಟೆ? (ಕಂಡಕ್ಟರ್)
ಹಿಂಗೆ ಜಟಾಪಟಿ ನಡೀತು ಹುಡುಗಿ ಬಾಯಿ ಮುಚ್ಚಲೇ ಇಲ್ಲ, ಆಗ ಬಸ್ ನಲ್ಲಿ ಇಲ್ಲ ಬುದ್ದಿ ಜೀವಿಗಳು ಹೋಗ್ಲಿ ಬಿಡ್ರಿ ಅಂತ ಕೂತಲ್ಲೆ ಸಮಾದಾನ ಹೇಳೋಕೆ ಶುರು ಮಾಡಿದ್ರು. ನಾನ್ ನಗ್ತಾ ಕೂತಿದ್ದೆ, ಆಗ ಪಾಪ ಆ ಕಂಡಕ್ಟರ್ ನನ್ ಕಡೆ ತಿರುಗು ನೀವೆ ನೋಡಿ ಮೇಡಂ ನನ್ದೇನಾದ್ರು ತಪ್ಪು ಇದಿಯಾ? ಏನೋ ನನ್ ಟೈಂ ಏ ಸರಿ ಯಾಗಿಲ್ಲ ಅಂತ ತಲೆ ಚಚ್ಕಂಡ್ರು, ನಂಗೆ ಪಾಪ ಅನಿಸ್ತು. ಆ ಹುಡುಗಿಗೆ ಯಾಕ್ರಿ ಅಷ್ಟೋಂದು ಮಾತಾಡ್ತಿರಾ? ನಾನು ಅವಾಗ್ಲಿಂದ ನೋಡ್ತಾನೆ ಇದ್ದೀನಿ ಅತಿಯಾಯ್ತು ನಿಮ್ದು ಟಿಕೆಟ್ ತಗೋಳೋದು ಬಿಟ್ಟು ಸುಮ್ನೆ ಗಲಾಟೆಮಾಡ್ತೀರ ಅಂದೆ. ಆಗ ಎಲ್ಲಾ ಆ ಹುಡುಗಿಗೆ ಬಯ್ಯೊಕೆ ಶುರುಮಾಡಿದ್ಲು. ಆಗ ಆಕೆ ಗೊಣ ಗೊಣಗುಟ್ಟುತ್ತ ಬಸ್ ಇಳಿಸು ಹೋದ್ಲು. (ನಮ್ಮಮ್ಮ ಸರಿಯಾಗೆ ಹೇಳ್ದೆ ಕಣೆ ಅಂದ್ರು)
ಇಷ್ಟಾಯ್ತು ನೋಡಿ, ತುಂಬಾ ಕಂಡಕ್ಟರ್ ಗಳು ಟಿಕೆಟ್ ಕೊಡದೆ ಏಮಾರಿಸೋದು ನಿಜ ನಾನು ತುಂಬಾ ಸಲ ನಿರ್ವಾಹಕರೊಂದಿಗೆ ಜಗಳಕ್ಕೆ ಆಡಿದುಂಟು . ಆದ್ರೆ ಈ ಮೇಲಿನ ಸಂಧರ್ಬದಲ್ಲಿ ದಲ್ಲಿ ನಿರ್ವಾಹಕನ ತಪ್ಪು ಏನು ಇಲ್ಲ. ಆ ಹುಡುಗಿಗೆ ಟಿಕೇಟ್ ತಗೊಳ್ಳೋ ಉದ್ದೇಶನೇ ಇರ್ಲಿಲ್ಲ. ನಾವೆ ಹೀಗೆ ಎರಡು ರೂಪಾಯಿ ಮೂರು ರೂಪಾಯಿ ಕೊಟ್ಟು ನಿರ್ವಾಹಕರನ್ನು ತಪ್ಪು ದಾರಿಗೆ ಎಳೆಯೋದು ತಪ್ಪು ಅಲ್ವಾ? ಅದರ ಹೊಣೆ ಹೊರಬೇಕಾದವ್ರು ನಾವೆ ತಾನೆ?

No comments:
Post a Comment