ಆವತ್ತು ಗುರುವಾರನೋ ಸಂಕಷ್ಟ ಹರನೋ ಇರುತ್ತೆ , ಸೊ ಉಪವಾಸ ಇರ್ತೀರಾ, ಬರೋಬ್ಬರಿ ಒಂದ್ ಕಿಲೋಮೀಟರ್ ಬೇರೆ ನಡೆದಿರ್ತೀರ , ಸಂಜೆ ಆಗಿರುತ್ತೆ ಬಿ ಎಂ ಟಿ ಸಿ ಬಸ್ಸಲ್ಲಿ ಸೀಟ್ ಇಲ್ದೆ ಒಂದ್ ಗಂಟೆಯಿಂದ ನಿನ್ಕೊಂಡೆ ಇರ್ತೀರಾ ಆಗ ಯಾರೋ ಇಳ್ಕೊತಾರೆ, ಉಸ್ಸ್ ಅಪ್ಪ ಸದ್ಯ ಸೀಟ್ ಸಿಗ್ತಲ್ಲ ಅಂತ ಇನ್ನೇನ್ ಕೂತ್ಕೊಬೇಕು, ಅನ್ನೋ ಅಷ್ಟ್ರ್ರಲ್ಲಿ ಯಾವ್ದೋ ಅಜ್ಜಿನೋ ತಾತನೋ ಬಸ್ ಹತ್ತುತ್ತಾರೆ ಸೀಟ್ ಬಿಡಂಗಿಲ್ಲ ಬಿಡದೆ ಇರಂಗಿಲ್ಲ , ಬ್ಯಾಡ್ ಬ್ಯಾಡ ಆ ಧರ್ಮ ಸಂಕಟ , ರನ್ನಿಂಗ್ ರೇಸ್ ಹೊರಟಾಗ ಸಾಕ್ಸ್ ಒಳಗಡೆ ಮರಳು ಸೇರ್ಕಂಡಂಗೆ ಇರುತ್ತೆ ನಮ್ ಪರಿಸ್ "ತಿಥಿ" ಅಲ್ವ್ರಾ?
No comments:
Post a Comment