(೨೦೦೮ ರಲ್ಲಿ ಕೆಲಸ ಹುಡುಕಿದ ಅನುಭವ )
ಸಿಗದ ಕೆಲಸದ ಬೇಟೆಗಂದು
ಪೂರ್ವ ಸಿದ್ದತೆ ನಡೆದಿತ್ತು
ಪಾಕಟ್ ಮನಿಗೆ, ಚಾಚಿದ ಕೈ
ಅಂದೇಕೋ ಹಿಂದೇಟು ಹಾಕಿತ್ತು
ಹಾಗೋ ಹೀಗೋ ನೂರನ ನೋಟೊಂದು
ನನ್ನದಾಯಿತು
ಮೊದಮೊದಲ ಸಂದರ್ಶನ
ಯುದ್ದ ಬೀತಿ ಎದೆಯೊಳು
ಯುದ್ಧಕ್ಕೆ ಮುಂಚೆಯೇ ಪಲಾಯನ ಮಾಡಲೇ?
ಎಂಬ ಆಲೋಚನೆಗಳು ಸುಳಿದಾಡಲು
ಇಷ್ಟ ದೈವವ ನೆನೆದು
ಗುಮ್ಮನೆ ಕುಳಿತೆ ನಡುನಡುಗಿ
ಸೀಟು ಸಿಗದ BMTC ಬಸ್ಸಿನ, ಪ್ರಯಾಸದ ಪ್ರಯಾಣ,
ಮಂಡೆ ಕೆಂಡವಾಗುವ ಬಿರು ಬಿರು ಬಿಸಿಲು,
ಬಹುರಾಷ್ಟ್ರೀಯ ಕಂಪನಿಯ
ಆ ಬಹುಮಹಡಿ ಕಟ್ಟಡ,
ಮುಖದಲ್ಲಿ ಬೆವರಿಳಿಸಿತ್ತು
ಗೊತ್ತಿರದ ಸಂಗತಿಗಳಿವು
ಸ್ವಾಗತಕಾರಿಣಿ ಮುಖ
ಬೆವರಬಾರದಂತೆ
ಸ್ಟೆನೋ ಗೆ ಸಿಟ್ಟು ಬರಬಾರದಂತೆ
ಸೊಂಟ ಮುರಿದ ಐಟಿ ನಂಬಿ
Shine, ನೌಕ್ರೀ , classified, ಇಣುಕುವುದು
ಅಂತರಜಾಲಗಳ ಕೆದಕುವುದು
ಸಿಕ್ಕ ಸಿಕ್ಕ ಕಡೆ resume ಕಳಿಸುವುದು
ದಿನಚರಿಯಾಗಿತ್ತು
ಅಲ್ಲೊಬ್ಬ ಸಂದರ್ಶಕ ಹಲ್ಲು ಕಿರಿಯುತ
"ನಿಮಗೆ ಸೀರೆ ಉಡಲು ಬರುತ್ತಾ?
ಫ್ಲರ್ಟಿಂಗ್ ಮಾಡೋಕೆ ಬರುತ್ತಾ?
ಯಾರಾದ್ರೂ ಪ್ರೋಪೋಸ್ ಮಾಡಿದ್ರೆ
ಹೇಗೆ ಪ್ರತಿಕ್ರಿಯಿಸುತ್ತೀರಾ ?"
ಎಂಬ ಅವನ ಹುಚ್ಚು ಪ್ರಶ್ನೆಗಳಿಗೆ
ನಾ ಕೊಟ್ಟ ಸಿಟ್ಟಿನುತ್ತರ
ಮೂಗನ್ನಾಗಲೇ ಕತ್ತರಿಸಿತ್ತು
ಕೆಲಸ ಕೈತಪ್ಪಿ ಹೋಗಿತ್ತು
ಬಿಟ್ಟಿ ಉಪದೇಶಗಳು
ನೆರೆಯವರ ಚುಚ್ಚು ಮಾತುಗಳು
ಕಾಲೇಜು ಕಲಿಸದೆ ಉಳಿಸಿದ
ಪಾಠಗಳ ಕಲಿಸಿತು
ದಿನ ಕಳೆದಂತೆ
ಕೆಲಸಕ್ಕೂ ಮೀರಿದ ಅನುಭವಗಳು
ನನ್ನದಾದವು
ಹೇಳಿಕೊಳ್ಳಲು ಕೆಲಸವೂ ಸಿಕ್ಕಿತು
ಜೇಬು ತುಂಬಿಸದ
ಈ ಅರೆಕಾಲಿಕ ಜಾಬುಗಳು
ಮರದಿಂದ ಮರಕೆ ಜಿಗಿಯುವ
ಕೆಲಸವ ಇನ್ನೂ ಬಾಕಿ ಉಳಿಸಿವೆ
//ನಂದಿನಿ//
ಸಿಗದ ಕೆಲಸದ ಬೇಟೆಗಂದು
ಪೂರ್ವ ಸಿದ್ದತೆ ನಡೆದಿತ್ತು
ಪಾಕಟ್ ಮನಿಗೆ, ಚಾಚಿದ ಕೈ
ಅಂದೇಕೋ ಹಿಂದೇಟು ಹಾಕಿತ್ತು
ಹಾಗೋ ಹೀಗೋ ನೂರನ ನೋಟೊಂದು
ನನ್ನದಾಯಿತು
ಮೊದಮೊದಲ ಸಂದರ್ಶನ
ಯುದ್ದ ಬೀತಿ ಎದೆಯೊಳು
ಯುದ್ಧಕ್ಕೆ ಮುಂಚೆಯೇ ಪಲಾಯನ ಮಾಡಲೇ?
ಎಂಬ ಆಲೋಚನೆಗಳು ಸುಳಿದಾಡಲು
ಇಷ್ಟ ದೈವವ ನೆನೆದು
ಗುಮ್ಮನೆ ಕುಳಿತೆ ನಡುನಡುಗಿ
ಸೀಟು ಸಿಗದ BMTC ಬಸ್ಸಿನ, ಪ್ರಯಾಸದ ಪ್ರಯಾಣ,
ಮಂಡೆ ಕೆಂಡವಾಗುವ ಬಿರು ಬಿರು ಬಿಸಿಲು,
ಬಹುರಾಷ್ಟ್ರೀಯ ಕಂಪನಿಯ
ಆ ಬಹುಮಹಡಿ ಕಟ್ಟಡ,
ಮುಖದಲ್ಲಿ ಬೆವರಿಳಿಸಿತ್ತು
ಗೊತ್ತಿರದ ಸಂಗತಿಗಳಿವು
ಸ್ವಾಗತಕಾರಿಣಿ ಮುಖ
ಬೆವರಬಾರದಂತೆ
ಸ್ಟೆನೋ ಗೆ ಸಿಟ್ಟು ಬರಬಾರದಂತೆ
ಸೊಂಟ ಮುರಿದ ಐಟಿ ನಂಬಿ
Shine, ನೌಕ್ರೀ , classified, ಇಣುಕುವುದು
ಅಂತರಜಾಲಗಳ ಕೆದಕುವುದು
ಸಿಕ್ಕ ಸಿಕ್ಕ ಕಡೆ resume ಕಳಿಸುವುದು
ದಿನಚರಿಯಾಗಿತ್ತು
ಅಲ್ಲೊಬ್ಬ ಸಂದರ್ಶಕ ಹಲ್ಲು ಕಿರಿಯುತ
"ನಿಮಗೆ ಸೀರೆ ಉಡಲು ಬರುತ್ತಾ?
ಫ್ಲರ್ಟಿಂಗ್ ಮಾಡೋಕೆ ಬರುತ್ತಾ?
ಯಾರಾದ್ರೂ ಪ್ರೋಪೋಸ್ ಮಾಡಿದ್ರೆ
ಹೇಗೆ ಪ್ರತಿಕ್ರಿಯಿಸುತ್ತೀರಾ ?"
ಎಂಬ ಅವನ ಹುಚ್ಚು ಪ್ರಶ್ನೆಗಳಿಗೆ
ನಾ ಕೊಟ್ಟ ಸಿಟ್ಟಿನುತ್ತರ
ಮೂಗನ್ನಾಗಲೇ ಕತ್ತರಿಸಿತ್ತು
ಕೆಲಸ ಕೈತಪ್ಪಿ ಹೋಗಿತ್ತು
ಬಿಟ್ಟಿ ಉಪದೇಶಗಳು
ನೆರೆಯವರ ಚುಚ್ಚು ಮಾತುಗಳು
ಕಾಲೇಜು ಕಲಿಸದೆ ಉಳಿಸಿದ
ಪಾಠಗಳ ಕಲಿಸಿತು
ದಿನ ಕಳೆದಂತೆ
ಕೆಲಸಕ್ಕೂ ಮೀರಿದ ಅನುಭವಗಳು
ನನ್ನದಾದವು
ಹೇಳಿಕೊಳ್ಳಲು ಕೆಲಸವೂ ಸಿಕ್ಕಿತು
ಜೇಬು ತುಂಬಿಸದ
ಈ ಅರೆಕಾಲಿಕ ಜಾಬುಗಳು
ಮರದಿಂದ ಮರಕೆ ಜಿಗಿಯುವ
ಕೆಲಸವ ಇನ್ನೂ ಬಾಕಿ ಉಳಿಸಿವೆ
//ನಂದಿನಿ//
No comments:
Post a Comment