ಮಹಾಲಕ್ಷ್ಮಿ ಲೇಔಟ್ ನಲ್ಲಿ ಎಷ್ಟೋಂದು ಟೆಂಪಲ್ಸ್ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಆದ್ರೆ, ಅಲ್ಲೊಂದು ಟೆಂಪಲ್ಲ್ ನಲ್ಲಿ ಪ್ರತಿ ಶುಕ್ರವಾರ ೮.೦೦ ಗಂಟೆಗೆ ಸರಿಯಾಗಿ. ಒಂದ್ ಅಂಕಲ್ ಮೇಲೆ ದೇವ್ರು ಬರುತ್ತೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರ್ಲಿಲಿಕ್ಕಿಲ್ಲ, , ೮ ನೆ ಕ್ಲಾಸ್ ನಲ್ಲಿ ಇದ್ದಾಗ, ಪಕ್ಕದ ಮನೆ ಆಂಟಿ ಜೊತೆ ಆ ದೇವಸ್ಥಾನಕ್ಕೆ ಹೋಗಿದ್ದೆ, ಆ ಅಂಕಲ್ ದೇವ್ರ್ ಬರೋದ್ ಅರ್ಧ ಗಂಟೆ ಮುಂಚೆ ಸೀರೆ ಉಟ್ಕೊಂಡು ಒಡವೆ ಎಲ್ಲಾ ಹಾಕೊಂಡು ತ್ರಿಶೂಲ ಹಿಡ್ಕೊಂಡು ೮.೦೦ ಗಂಟೆಗೆ ಆಗ್ತಿದ್ದಂಗೆ, ಅಹ್ಮ್ ಹ್ಮ್ ಹ್ಮ್ ಅಂತ ತಲೆ ಒದರುತ್ತಾ ಡ್ಯಾನ್ಸ್ ಆಡೋಕೆ ಶುರುಮಾಡಿದ್ರು, ಭಕ್ತಾದಿಗಳೆಲ್ಲಾ ಭಯ ಭಕ್ತಿಯಿಂದ , ಭಕ್ತಿಯ ಪ್ರರಾಕಾಷ್ಟೆ ಜಾಸ್ತಿಯಾಗಿ, ಕೈ ಜೋಡಿಸಿ ದೇವಿ ಯನ್ನು ಬೇಡಿಕೊಳ್ಳಲಾಗಿ, ಅಂಕಲ್ ತಮಿಳ್ ಭಾಷೆಯಲ್ಲಿ ಮಾತಾಡೋಕೆ ಶುರು ಮಾಡಿದ್ರು. ನಂಗ್ ಒಂದ್ ಡೌಟ್ ಬಂತು, ಇದ್ಯಾಕೆ ಹಿಂಗೆ ಅಂತ
ಆಂಟಿನ ಕೇಳ್ದೆ ." ಆಂಟಿ ಯಾಕೆ ಆ ಅಂಕಲ್ ತಮಿಳ್ ನಲ್ಲಿ ಮಾತಾಡ್ತಾವ್ರೆ? ಅಂಕಲ್ ಗೆ ಕನ್ನಡ ಬರಲ್ವಾ?"
ಅದು ಅಂಕಲ್ ಅಲ್ಲ, ದೇ............ವ್ರು, ಹಾಗೆಲ್ಲ ಹೇಳ್ಬಾರ್ದು
ಅಯ್ಯೊ ಆಂಟಿ..... ಮ್ಯಾಟ್ರು ಅದಲ್ಲ....... ಆ ಅಂಕಲ್ ಗೆ ಕನ್ನಡ ಬರಲ್ಲ ಅನ್ಸುತ್ತೆ.
ಅಷ್ಟೊತ್ತಿಗೆ ಒಂದಿಬ್ಬರು ನಮ್ಕಡೆ ಗುರಾಯ್ಸ್ತಾ ಇದ್ರೂ. ಆ ಆಂಟಿ " ಎಷ್ಟ್ ಮಾತಾಡೋದು ಮಕ್ಕ್ಳು ಮುಚ್ ಬಾಯಿ" ಅಂದ್ರು,
(ನಾನು ಗಪ್ ಚುಪ್ ಸೈಲೆಂಟ್, (ಎರಡು ನಿಮಿಷ) ಈ ಆಂಟಿ ನಂಗೆ ಶೇಪ್ ಔಟ್ ಮಾಡ್ತಾರೆ, ನಾನೇನ್ ಅಂಥದ್ ಕೇಳ್ಬಾರ್ದ್ ಕೇಳ್ದೆ ? ಮಾಡ್ತಿನಿರು ಅಂತ ಮನಸಲ್ಲೇ ಅನ್ಕೊಂಡು)
ಆಂಟಿ ನೀವ್ ಹೋದ್ ವಾರಾನೂ ಇದೇ ರೇಷ್ಮೆ ಸೀರೆ ಉಟ್ಟಿದ್ರಿ ಅಲ್ಲ್ವಾ ಅಯ್ಯಯ್ಯೋ.....................?? (ಶ್ ಶ್ ಅಂತ ಸನ್ನೆ ಮಾಡಿದ್ರು, )
ದಕ್ಷ್ನಿಣೆ ಆಧಾರದ ಮೇಲೆ ಪ್ರಸಾದ ವಿನಿಯೋಗ ಆಯ್ತು, ಪೂಜೆ ಮುಗೀತು , ಮನೆಗೆ ಬಂದ್ಮೇಲೆ ಆವಮ್ಮ "ಇವತ್ತೇ ಕಡೆ ನಿಮ್ ಮಗಳನ್ನು ಎಲ್ಲೂ ಕರ್ಕೋಂಡು ಹೋಗಲ್ಲ . ನನ್ ಮರ್ಯಾದೆ ಎಲ್ಲಾ ಹೋಯ್ತು ಅಂದ್ರು. ನಮ್ಮಮ್ಮ ಆವಮ್ಮನ್ ಮಾತ್ ಕೇಳ್ಕೊಂಡ್ "ಹೋದ್ಕಡೆ ಸುಮ್ನೆ ಇರೋಕಾಗಲ್ಲ್ವ ನಿಂಗೆ ಅಂತ ನಂಗೆ ಬಯ್ದ್ರೂ
ನಾನು ಹೋಗಮ್ಮ ಆ ಆಂಟಿ ಅದ್ಯಾವ್ದೋ ದೇವಸ್ಥಾನಕ್ಕ್ ಕರ್ಕಂಡ್ ಹೋಗಿ ದೇವ್ರ್ ಬರುತ್ತೆ ಅದೂ ಇದೂ ಅಂತೆಲ್ಲಾ ಮಿಸ್ ಗೈಡ್ ಮಾಡ್ತಾರೆ , ಈಗ ದೇವ್ರ್ಗೆ ಎಲ್ಲಾ ಭಾಷೆ ಬರ್ಬೇಕಲ್ವಾ ಕನ್ನಡ ಯಾಕ್ ಬರಲ್ಲ? ನಾವ್ ಟೆಂಪಲ್ ಗೆ ಹೋದ್ರೆ ಕನ್ನಡ್ದಲ್ಲಿ ತಾನೆ ಬೇಡ್ಕೋಳೋದು?
ನೋಡಿ ನೋಡಿ ನಿಮ್ಮುಂದೆನೆ ಹೇಗ್ ಮಾತಾಡ್ತಾಳೆ ಇನ್ನು ಅಲ್ ಕೇಳ್ಬೇಕಾ? ಇರು ನಿಮ್ಮಪ್ಪ ಬರ್ಲಿ.
ಅದೇ ಕಡೆ ನಾನ್ ಆ ದೇವಸ್ಥಾನಕ್ಕೆ ಹೋಗೇ ಇಲ್ಲಾ... ನೀವೆ ಹೇಳಿ ನಾನ್ ಕೇಳಿದ್ ತಪ್ಪಾ. ? ನಿಜ್ವಾಗ್ಲೂ ಮೈಮೇಲೆ ದೇವ್ರು ಬಂದಿದ್ದೇ ಆದ್ರೆ, ಅಂಕಲ್ ಕಂಟ್ರೋಲ್ ನಲ್ಲಿ ಯಾಕ್ ಇರ್ಬೇಕಿತ್ತು? ಭಕ್ತಾದಿಗಳು ಯಾವ್ ಭಾಷೆಲಿ ಪ್ರಶ್ನೆ ಕೇಳ್ತಾರೋ ಅದೇ ಭಾಷೆಲಿ ಉತ್ತರ ಕೊಡ್ಬೇಕಪ್ಪ...........? ಕಸ್ಟಮರ್ ಕೇರ್ ನಲ್ಲಿ ಇರೋ ಸೌಲಭ್ಯ ಇಲ್ಲ್ಯಾಕಿಲ್ಲ? ದೇವರು ಸರ್ವಾಂತರ್ಯಾಮಿ, ಹಾಗಂದ್ ಮೇಲೆ ಸರ್ವಾಭಾಷೆಗಳೂ ಬರ್ಬೇಕಲ್ವಾ? ಅದ್ರಲ್ಲೂ ಅದೇ ವಾರ ಅದೇ ಟೈಂ ಅದೇ ಅಂಕಲ್ ಮೇಲೆ ಯಾಕ್ ಬರ್ಬೇಕು, ನಾವೆಲ್ಲ ಭಕ್ತಾದಿಗಳಲ್ವಾ? ನಾವೇನಪ್ಪ ಪಾಪ ಮಾಡಿದ್ವಿ? ನಮ್ಮೇಲು ಒಂದ್ ಕಿತಾ ದೇವ್ರ್ ಬರ್ಬಹುದಿತ್ತಲ್ವಾ? ಹ್ಮ್............ . ಐ ಹೇಟ್ ದಿಸ್ ಮೂಢನಂಬಿಕೆ
ಅದಕ್ಕೆ ಹೇಳೋದು ಜನ ಮರುಳೋ ಜಾತ್ರೆ ಮರುಳೋ ಅಂತ. ಆ ದೇವಸ್ಥಾನ ಈಗ್ಲೂ ಇದೆ. ಮೋಸ್ಟ್ ಲಿ ಈಗ ಆ ಅಂಕಲ್ ಕನ್ನಡ ಕಲ್ತಿರ್ಬಹುದು. :)

No comments:
Post a Comment