ಅಪ್ಪ ನಾ ಕಂಡ ನಿಜವಾದ ಹೀರೋ
ಅಪ್ಪನ ಪ್ರೀತಿಯ ಲೆಕ್ಕವಿಡುವುದು
ಹೇಗೆ? ಅವ ನಮಗಾಗಿ ಸುರಿಸಿದ
ಬೆವರ ಹನಿಗಳಂತೆ ಅದೂ ಅಗಣಿತ
APMC ಯಾರ್ಡ್ ನ
ಬೀದಿ ಬೀದಿಯೂ ಇಟ್ಟಿವೆಯಂತೆ
ಅವ ನಮಗಾಗಿ ಹೊತ್ತ ಮೂಟೆಗಳ ಲೆಕ್ಕವ
ಒಂದು ದಿನವೂ ಕುಡಿದು ಬಂದವನಲ್ಲ
ಬೀದಿಯಲ್ಲಿ ತೂರಾಡಿ ಬಿದ್ದವನಲ್ಲ
ಮೋಜಿನ ಗೋಜಿಗೆ ಹೋದವನಲ್ಲ
ಆದರೂ ಒಮ್ಮೊಮ್ಮೆ ಇವ
ಪೋಲಿ ಇರಬಹುದೇನೋ ? ಎಂದು
ಈ ಸಮಾಜ ಊಹಿಸಲು ಕಾರಣ
ಜನಕನಿಗೆ ಒಲಿಯದ ಕನಕಾಂಬರ ನೋಟುಗಳು
ನಂಬಿದ್ದ ರೇಷ್ಮೆ ಉದ್ಯಮ ನೆಲ ಕಚ್ಚಿತ್ತು
ರೆಷ್ಮೆಯೂ ಮುಳ್ಳಾಗಿ ನಮ್ಮನ್ನು ಚುಚ್ಚಿತ್ತು
ಅಯ್ಯೋ ಕಷ್ಟ ಎಂದಾಗ, ಹೆಂಡತಿ ಮಕ್ಕಳ
ಕನ್ನಂಬಾಡಿಗೆ ತಳ್ಳೆಂದ ಅವರಪ್ಪ
ಎಂದೂ ಪೇಟೆ ಮುಖ ನೋಡದವನು
ಮಕ್ಕಳಿಗಾಗಿ ಬೆಂಗಳೂರಿನ
ಬೀದಿ ಹಿಡಿದ ಎನ್ನಪ್ಪ ಮುಗ್ದ ಮಡದಿಯೊಂದಿಗೆ
ಗಾಳಿ ಬೆಳಕಿಲ್ಲದ ಗುಬ್ಬಚ್ಚಿ ಗೂಡಲ್ಲಿ
ಮಲಗಿದ್ದ ಮಗಳ ಸುಖ ನಿದ್ರೆಗಾಗಿ
ಅವ ಹಾಕುತಿದ್ದ ಬೀಸಣಿಗೆ ಗಾಳಿ
ನನ್ನ ಹೃದಯವ ಮತ್ತುಷ್ಟು ಹಗುರಗೊಳಿಸಿದೆ
ಹೆಣ್ಣು ಮಕ್ಕಳಿಗೇಕೆ ಓದು ಬರಹ?
ಗಟ್ಟಿಯಿದೇ ಗಾರ್ಮೆಂಟ್ಸ್ ಪ್ಯಾಕ್ಟರಿ
ದುಡಿಸಿ ಅವರ ದುಡ್ಡಲ್ಲಿ
ಮದುವೆ ಮಾಡಿ ಅಟ್ಟೆಂದು
ಕಿವಿತುಂಬಲು ನೆಂಟರ ಬಳಗ
ಅಗುಳ ಕಷ್ಟದ ಬೇವು ನನಗೇ ಇರಲಿ
ಮಕ್ಕಳು ಕಲಿತು ಸಿಹಿಬೆಲ್ಲದ ಬಾಳು
ಅವರದಾಗಲಿ ಎಂದು
ಸಾಲಕೆ ಬಿದ್ದು ಶಾಲೆಗೆ ಕಳಿಸಿ
ನನ್ನ ಯಶಸ್ಸಿನ ಹಾದಿಗೆ
ಮುನ್ನಿಡಿಬರೆದ ಎನ್ನಪ್ಪ
ಎಲ್ಲಾ ಹೇಳುವರು
ನಾ ಹುಟ್ಟಿ ನಿನಗೆ ಕಷ್ಟ ಬಂತಂತೆ
ಕೋಪದಲಿ ಕೆಲವೊಮ್ಮೆ
ಅನಿಷ್ಟ , ಶನಿ ಎಂದು ನೀನೂ ಬೈದಿದ್ದುಂಟು
ನಿನ್ನ ತ್ಯಾಗವ ಅರಿತವಳು ನಾನಲ್ಲವೇ?
ನನಗೆ ಗೊತ್ತಿದೆ , ಅವು ಕಷ್ಟದ ಬಾಯಿಂದ
ಬಂದ ಮಾತುಗಳಷ್ಟೇ ಹೊರತು
ಮನದ ಮಾತುಗಳಲ್ಲವೆಂದು
ಅಪ್ಪ ! ನೀ ಎತ್ತು ಆಡಿಸಿದ್ದು ಸರಿಯಾಗಿ ನೆನಪಿಲ್ಲ
ಕ್ಷಮಿಸು, ಆದರೆ
ಅಮ್ಮನಿಲ್ಲದಾಗ ನೀ ಹಾಕಿದ
ಬೇಬಿ ಶ್ಯಾಮಿಲಿ ಜಡೆ
ನಾಲ್ಕಾಣಿ ಕದ್ದುದಕೆ ನೀ ಕೊಟ್ಟ ಏಟು
ಇನ್ನೂ ನೆನಪಿದೆ, ನೀಯತ್ತು ಕಲಿಸಿದೆ
ನಿನ್ನ ಗದರು ದನಿ, ಭಯ ಭಕ್ತಿಯ ಕಲಿಸಿದೆ
ನಾ ತಪ್ಪದ ದಾರಿಗೆ ನಿನ್ನ ನಂಬಿಕೆಯೇ ದೀವಿಗೆ
ಈ ಜೀವ, ಜೀವನ ಎರಡೂ ನೀ ಕೊಟ್ಟ ಭಿಕ್ಷೆ
ಈ ಹುಟ್ಟು ತರಲೆ ಈವರೆಗೂ
ಆಡದೆ ಉಳಿಸಿದ ಮಾತುಗಳಿವು
ಇಂದು ತಡೆಯಲಾರದೆ ಕಣ್ಣಿಂದ ಸುರಿದಿವೆ
ಅಪ್ಪ ನೀ ನನ್ನ ಜೀವಮಾದಲ್ಲಿ ಕಂಡ
ನಿಜವಾದ ಹಿರೋ
//ನಂದಿನಿ//
ಅಪ್ಪನ ಪ್ರೀತಿಯ ಲೆಕ್ಕವಿಡುವುದು
ಹೇಗೆ? ಅವ ನಮಗಾಗಿ ಸುರಿಸಿದ
ಬೆವರ ಹನಿಗಳಂತೆ ಅದೂ ಅಗಣಿತ
APMC ಯಾರ್ಡ್ ನ
ಬೀದಿ ಬೀದಿಯೂ ಇಟ್ಟಿವೆಯಂತೆ
ಅವ ನಮಗಾಗಿ ಹೊತ್ತ ಮೂಟೆಗಳ ಲೆಕ್ಕವ
ಒಂದು ದಿನವೂ ಕುಡಿದು ಬಂದವನಲ್ಲ
ಬೀದಿಯಲ್ಲಿ ತೂರಾಡಿ ಬಿದ್ದವನಲ್ಲ
ಮೋಜಿನ ಗೋಜಿಗೆ ಹೋದವನಲ್ಲ
ಆದರೂ ಒಮ್ಮೊಮ್ಮೆ ಇವ
ಪೋಲಿ ಇರಬಹುದೇನೋ ? ಎಂದು
ಈ ಸಮಾಜ ಊಹಿಸಲು ಕಾರಣ
ಜನಕನಿಗೆ ಒಲಿಯದ ಕನಕಾಂಬರ ನೋಟುಗಳು
ನಂಬಿದ್ದ ರೇಷ್ಮೆ ಉದ್ಯಮ ನೆಲ ಕಚ್ಚಿತ್ತು
ರೆಷ್ಮೆಯೂ ಮುಳ್ಳಾಗಿ ನಮ್ಮನ್ನು ಚುಚ್ಚಿತ್ತು
ಅಯ್ಯೋ ಕಷ್ಟ ಎಂದಾಗ, ಹೆಂಡತಿ ಮಕ್ಕಳ
ಕನ್ನಂಬಾಡಿಗೆ ತಳ್ಳೆಂದ ಅವರಪ್ಪ
ಎಂದೂ ಪೇಟೆ ಮುಖ ನೋಡದವನು
ಮಕ್ಕಳಿಗಾಗಿ ಬೆಂಗಳೂರಿನ
ಬೀದಿ ಹಿಡಿದ ಎನ್ನಪ್ಪ ಮುಗ್ದ ಮಡದಿಯೊಂದಿಗೆ
ಗಾಳಿ ಬೆಳಕಿಲ್ಲದ ಗುಬ್ಬಚ್ಚಿ ಗೂಡಲ್ಲಿ
ಮಲಗಿದ್ದ ಮಗಳ ಸುಖ ನಿದ್ರೆಗಾಗಿ
ಅವ ಹಾಕುತಿದ್ದ ಬೀಸಣಿಗೆ ಗಾಳಿ
ನನ್ನ ಹೃದಯವ ಮತ್ತುಷ್ಟು ಹಗುರಗೊಳಿಸಿದೆ
ಹೆಣ್ಣು ಮಕ್ಕಳಿಗೇಕೆ ಓದು ಬರಹ?
ಗಟ್ಟಿಯಿದೇ ಗಾರ್ಮೆಂಟ್ಸ್ ಪ್ಯಾಕ್ಟರಿ
ದುಡಿಸಿ ಅವರ ದುಡ್ಡಲ್ಲಿ
ಮದುವೆ ಮಾಡಿ ಅಟ್ಟೆಂದು
ಕಿವಿತುಂಬಲು ನೆಂಟರ ಬಳಗ
ಅಗುಳ ಕಷ್ಟದ ಬೇವು ನನಗೇ ಇರಲಿ
ಮಕ್ಕಳು ಕಲಿತು ಸಿಹಿಬೆಲ್ಲದ ಬಾಳು
ಅವರದಾಗಲಿ ಎಂದು
ಸಾಲಕೆ ಬಿದ್ದು ಶಾಲೆಗೆ ಕಳಿಸಿ
ನನ್ನ ಯಶಸ್ಸಿನ ಹಾದಿಗೆ
ಮುನ್ನಿಡಿಬರೆದ ಎನ್ನಪ್ಪ
ಎಲ್ಲಾ ಹೇಳುವರು
ನಾ ಹುಟ್ಟಿ ನಿನಗೆ ಕಷ್ಟ ಬಂತಂತೆ
ಕೋಪದಲಿ ಕೆಲವೊಮ್ಮೆ
ಅನಿಷ್ಟ , ಶನಿ ಎಂದು ನೀನೂ ಬೈದಿದ್ದುಂಟು
ನಿನ್ನ ತ್ಯಾಗವ ಅರಿತವಳು ನಾನಲ್ಲವೇ?
ನನಗೆ ಗೊತ್ತಿದೆ , ಅವು ಕಷ್ಟದ ಬಾಯಿಂದ
ಬಂದ ಮಾತುಗಳಷ್ಟೇ ಹೊರತು
ಮನದ ಮಾತುಗಳಲ್ಲವೆಂದು
ಅಪ್ಪ ! ನೀ ಎತ್ತು ಆಡಿಸಿದ್ದು ಸರಿಯಾಗಿ ನೆನಪಿಲ್ಲ
ಕ್ಷಮಿಸು, ಆದರೆ
ಅಮ್ಮನಿಲ್ಲದಾಗ ನೀ ಹಾಕಿದ
ಬೇಬಿ ಶ್ಯಾಮಿಲಿ ಜಡೆ
ನಾಲ್ಕಾಣಿ ಕದ್ದುದಕೆ ನೀ ಕೊಟ್ಟ ಏಟು
ಇನ್ನೂ ನೆನಪಿದೆ, ನೀಯತ್ತು ಕಲಿಸಿದೆ
ನಿನ್ನ ಗದರು ದನಿ, ಭಯ ಭಕ್ತಿಯ ಕಲಿಸಿದೆ
ನಾ ತಪ್ಪದ ದಾರಿಗೆ ನಿನ್ನ ನಂಬಿಕೆಯೇ ದೀವಿಗೆ
ಈ ಜೀವ, ಜೀವನ ಎರಡೂ ನೀ ಕೊಟ್ಟ ಭಿಕ್ಷೆ
ಈ ಹುಟ್ಟು ತರಲೆ ಈವರೆಗೂ
ಆಡದೆ ಉಳಿಸಿದ ಮಾತುಗಳಿವು
ಇಂದು ತಡೆಯಲಾರದೆ ಕಣ್ಣಿಂದ ಸುರಿದಿವೆ
ಅಪ್ಪ ನೀ ನನ್ನ ಜೀವಮಾದಲ್ಲಿ ಕಂಡ
ನಿಜವಾದ ಹಿರೋ
//ನಂದಿನಿ//
2 comments:
ಎಂತಹ ಶ್ರಮ ಜೀವಿ ತಮ್ಮ ತಂದೆಯವರು.
ಅವರು ತಮಗಾಗಿ ಪಟ್ಟ ಕಷ್ಟಗಳನ್ನು ಒಳ್ಳೆಯ ಕವನ ಕುಸುಮವಾಗಿಸಿ ಕೊಟ್ಟಿದ್ದೀರ.
ಅಪ್ಪನ ಮನದೊಳಗಿನ ಮೌನಕ್ಕೆ ಭಾಷೆ ಕೊಟ್ಟ ರೀತಿ ಚೆನ್ನಾಗಿತ್ತು, ಓದುವಾಗ ಅದೇನೋ ತರ ತರದ ಚಿತ್ರಗಳು ಮನದಲ್ಲಿ ಮಿಂಚಿ ಮರೆಯಾದವು, "ಇಂಗೆ ಹೋಯ್ತಾ ಇರ್ಲಿ writinguuuuu"
Post a Comment