Sunday, 13 July 2014

ಹಂಚಿ ತಿಂದರೆ ಸ್ವರ್ಗ ಸುಖ ಎಂಬ ನಾನ್ನುಡಿಯ ಜೊತೆಗೆ ಕದ್ದು ತಿನ್ನುವುದು ಪರಮ ನರಕ ಅಂತನೂ ಸಂಧರ್ಬಕ್ಕೆ ತಕ್ಕಂತೆ ಸೇರಿಸ್ಕೊಂಡ್ರೆ ಚೆನ್ನ . ಈ ನಾನ್ನುಡಿ,  ಫೇಸ್ ಬುಕ್ ನ ಗೋಡೆ ಬರಹಗಳಿಗೂ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ , ಹಂಚಿ ತಿನ್ನೋದು ಅಂದ್ರೆ ಬರಹ/ ಕವಿತೆಗಳನ್ನು ಪರಸ್ಪರ ಮೆಚ್ಚಿ, ಹಂಚಿ ಕೊಳ್ಳೋದು , ಪರಸ್ಪರ ಹಂಚಿಕೊಂಡ ಕೈಗಳು ಕಾಣುವಂತೆ ಮಾಹಿತಿಸಹಿತ ಶೇರ್ ಮಾಡಿಕೊಳ್ಳೋದು . ಕದ್ದು ತಿನ್ನೋದು ಅಂದ್ರೆ ಅದೇ ಬರಹಗಳನ್ನು ನೋಡಿ , ಲೈಕ್ಆದರೂ ಲೈಕಿಸದೆ , ಕಮೆಂಟಿಸದೇ ಸೈಲೆಂಟ್ ಆಗ್ ಕದ್ದು ಅವ್ರ ಗೋಡೆಮೇಲೆ ಅಂಟಿಸಿಕೊಳ್ಳೋದು , ಕದ್ದು ತಿಂದ್ ಮೇಲೆ  ಬಿಕ್ಕಳಿಕೆ ಬರ್ಲೇ ಬೇಕು, ಇವತ್ತಲ್ಲಾ ನಾಳೆ ಸಿಕ್ಕಾಕಳ್ಳೇಬೇಕು  , ಸಿಕ್ಕಾಕಂಡ್ರೆ , ಏನೋ ಕೆಲವರು ನಮ್ ಥರಾನೆ ಆಲೋಚನೆಗಳು ಅವ್ರ್ಗು ಬಂದಿರ್ಬಹುದು ನಾವೆನ್ ಮಹಾ? ಅವ್ರ್ಗಿಂತ ಬರೀತೀವಾ? ಅಂತ ಬೇಸರ ಪಟ್ಕೊಂಡು ಸುಮ್ನಾಗ್ತಾರೆ ಅದೇ ವಸಿ ಜನ ಅವ್ರೇ.... ಅಪ್ಪೀ ತಪ್ಪಿ ಸಿಕ್ಬಿದ್ರೋ.......   ಅವ್ರ್ ಫೇಸ್ ಬುಕ್ ಸ್ಟೇಟಸ್ನಲ್ಲಿ ನಿಮ್ ಸ್ಟೇಟಸ್ ಬಗ್ಗೆ ಅಪ್ ಡೇಟ್ ಮಾಡಿ ಇಗ್ಗಾ ಮುಗ್ಗ್ಗಾ ಬೈದು ನಿಮ್ ನಿಜ್ವಾದ ಸ್ಟೇಟಸ್ ಏನು ಅಂತ ಜಗತ್ತಿಗೆ ತಿಳಿಸುತ್ತಾರೆ. ಅಲ್ಲಿ ಬರೋ ಕಮೆಂಟ್ ಪ್ರತಿಕ್ರಿಯೆ ಬಗ್ಗೆ ಹೆಚ್ಚಿಗೆ ಹೇಳೋದೇನ್ ಬೇಡ ಅನುಸ್ತ್ತೆ . ಹೀಗೆ ನಿಮ್ ಸ್ಟೇಟಸ್ ಹಾಳಾಗೋದು ನಿಮ್ಗ್ ಬೇಕಾ?  ಹಾಗಾದ್ರೆ ಕದಿಯೋದ್ ಬಿಟ್ಬಿಡಿ, ನಾನ್ ಹೇಳೋದೆಲ್ಲ ಹೇಳಿದ್ದೀನಿ , ಇದಾಗ್ಯೂ ಕದ್ದು ಕರ್ಮ ಕಟ್ಕೊಳ್ಳೇ ಬೇಕಂತಿದ್ರೆ ಅದ್ಕೂ ಒಂದ್ ಐಡಿಯಾ ಕೊಡ್ತೀನಿ  " ಎರಡು ಫೇಸ್ಬುಕ್ ಅಕೌಂಟ್ ಓಪನ್ ಮಾಡ್ಕೋಳಿ, ಫೇಕ್ ಅಕೌಂಟ್ ಸಹಾಯದಿಂದ ನಿಮ್ಮ ಸ್ನೇಹಿತರ ವಾಲ್ ನಿಂದ ಕದ್ದು ನಿಮ್ ಒರಿಜಿನಲ್ ಅಕೌಂಟ್ ನ ಗೋಡೆ ಮೇಲೆ ಅಂಟಿಸಿಕೊಳ್ಳಿ ಮತ್ತೆ ಯಾರ್ ವಾಲ್ ನಿಂದ ಕದ್ದಿರ್ತೀರೋ ಅವ್ರನ್ನ ಮರೆಯದೆ ಬ್ಲಾಕ್ ಮಾಡಿ ಅಥವಾ ರಿಸ್ಟ್ರಿಕ್ಟೆಡ್ ಫ್ರೆಂಡ್ ಲಿಸ್ಟ್ ಗೆ ಸೇರಿಸಿ, ನೀವು ಕದ್ದಿರೋ ವಿಷ್ಯ ಅವ್ರ್ ಗೊತ್ತಾಗೋದೆ ಇಲ್ಲ, ಆದ್ರೂ ಇದ್ರಲ್ಲೂ ಒಂದ್ ರಿಸ್ಕ್ ಇದೆ . ಏನಂದ್ರೆ  Mutual Friends  ಜಾಸ್ತಿ ಇದ್ರೆ ನೀವು ಕದ್ದಿರೋ ವಿಷ್ಯ ನಿಧಾನವಾಗಾದ್ರೂ ಅವ್ರ್ಗೆ ಗೊತ್ತೇ ಗೊತ್ತಾಗುತ್ತೆ  . ಆಗಾ ನಾನ್ ಆಗ್ಲೇ ಹೇಳಿದ್ನಲ್ಲಾ? ಕದ್ದು ತಿಂದ್ ಮೇಲೆ  ಬಿಕ್ಕಳಿಕೆ ಬರ್ಲೇ ಬೇಕು, ಇವತ್ತಲ್ಲಾ ನಾಳೆ ಸಿಕ್ಕಾಕಳ್ಳೇಬೇಕು  ಅಂತ ? ಈ ಮಾತ್ನ ಒಂದ್ ಸಾರಿ  ನೆನಪ್ ಮಾಡ್ಕೊಳ್ಳಿ" ನಾನೇನಾದ್ರೂ  ತಪ್ಪು ಹೇಳಿದ್ನಾ ?

No comments: