Sunday, 13 July 2014

"ಸಾಕಪ್ಪ ಸಾಕು ಈ ಮನೆಮಾಲಿಕರ ಸಹವಾಸ, ಬಾಡಿಗೆ ಮನೆಯವರ ಪರದಾಟ"

"ಸಾಕಪ್ಪ ಸಾಕು ಈ ಮನೆಮಾಲಿಕರ ಸಹವಾಸ, ಬಾಡಿಗೆ ಮನೆಯವರ ಪರದಾಟ"

ಬೆಂಗ್ಳೂರಲ್ಲಿ ಬಾಡಿಗೆ ಮನೆ ಹುಡ್ಕೋದು, ಮನೆ ಸಿಕ್ಕ ಮೇಲೆ, "ನೋಡ್ರಪ್ಪ ನಮ್ಗೆ ಜಾಸ್ತಿ ಗಲಾಟೆ ಮಾಡ್ಬಾರ್ದು ಮನೆಲೀ ನಾಲ್ಕು ಜನರ ಮೇಲೆ ಇರ್ಬಾರ್ದು. ನೆಂಟ್ರು ಗಿಂಟ್ರು ಅಂತೆಲ್ಲ ಬರ್ಬಾರ್ದು" ಹಾಗೆ ಹೀಗೆ ಅಂತ ಮಾಲಿಕರು ಹಾಕೋ ಕಂಡೀಷನ್ ಕೇಳೋದು, ಇವೆಲ್ಲದ್ರ ಮಧ್ಯೆ ನಮ್ಮ ಕಂಡೀಷನ್ ಹಾಳಾಗೋಗಿರುತ್ತೆ. ಅಸಲಿಗೆ ಮಾಲಿಕರ ಮನೇಲಿ ಸರಿ ಸುಮಾರು 20 ಜನ ಇರ್ತಾರೆ ಅವಿಭಕ್ತ ಕುಟುಂಬದ ಕೂಡಿ ಬಾಳೋಣ ಅನ್ನೊ ಸಂದೇಶ ಅವ್ರಿಗೆ ಮಾತ್ರ ಅಪ್ಲೈ ಆಗೋದಾ? ಎಂಥಾ ಮೋಸ ರೀ ಇದು . ಮನೆ ಬಾಡಿಗೆ ಸಾಲದು ಅಂತ, ದಿನಕ್ಕೆ ಅವ್ರ್ ಬಿಡೋ ಒಂದ್ ಘಂಟೆ ನೀರ್ ಗೇ 500 ರೂಪಾಯ್ ನೀರ್ ಬಿಲ್ಲ್ ಅಂತ ಕಿತ್ಕೊಳ್ತಾರೆ. ಮನೆ ಮಾಲಿಕರದ್ದೂ ಸೇರಿ 4+1 +೫ ಮನೆಗಳು ಇರ್ತವೆ. ನೀರ್ ಬಿಲ್ ಏನ್ ಅಬ್ಬಬ್ಬಾ ಅಂದ್ರೆ ಒಂದ್ ಒಂದೂವರೆ ಸಾವಿರ ಬರ್ಬಹುದು. ಅಸಲಿಗೆ ಕಟ್ಟೋ ಬಿಲ್ಲ್ ನಲ್ಲಿ ಅವ್ರೆ ಜಾಸ್ತಿ ಕಟ್ಬೇಕು ಅಲ್ವಾ. ಯಾಕೆಂದ್ರೆ ಜನಗಣತಿ ಪ್ರಕಾರ ಚಿಳ್ಳೆಗಳು ಮಿಳ್ಳೆಗಳು ಎಲ್ಲಾ ಸೇರಿ ಅವ್ರ ಮನೆಯಲ್ಲೆ ಹೆಚ್ಚು ಜನ ಇರ್ತಾರೆ . ಇವ್ಗೆ ಕೊತಂಬರಿ ಕರಿಬೇವು ತಂದ್ ಕೊಡೋಕೆ ನಮ್ಮನೆ ಮಕ್ಳೆ ಆಗ್ಬೇಕು , ಇದೆಲ್ಲಾ ಆಯ್ತಾ? ಮತ್ತೆ ಮನೆ ಖಾಲಿ ಮಾಡ್ವಾಗ ಪೇಂಟಿಂಗ್ ಚಾರ್ಜು, ಆ ಲೈಟ್ ಹೊಡ್ದೋಗಿದೆ ಈ ಸ್ವಿಚ್ ಹಾಳಾಗಿದೆ, ಬಾಗಿಲು ಬ್ರೇಕ್ ಆಗಿದೆ ಕಾಲಿಂಗ್ ಬೆಲ್ ವರ್ಕ್ ಆಗ್ತಿಲ್ಲ ಹಾಗೆ ಹೀಗೆ ಅಂತೆಲ್ಲ ಇರೋ ಬರೋ ಅಡ್ವಾನ್ ಮನಿ ಎಲ್ಲಾ ಕಟ್ ಕಟ್ ಕಟಾರ್ ಅಂತ ಕಟ್ ಮಾಡ್ಬಿತಾರೆ .ನಿಜ ಹೇಳ್ಬೇಕಂದ್ರೆ ಈ ಕಾಲಿಂಗ್ ಬೆಲ್ಲ್ , ಸ್ವಿಚ್ ಇವೆಲ್ಲ ಅವರ ಮನೆ ಮಕ್ಕಳ ಆಟಕ್ಕೆ ಬಲಿ ಆಗಿರ್ತಾವೆ. ಮತ್ತೊಂದು ಮನೆಯ ಮಾಲೀಕರಿಗೆ ಕೊಡೋಕೆ ಮತ್ತೆ "shortage of advance". ಆ ಕಾಲದಲ್ಲಿ ಬೆಂಗ್ಳೂರ್ಗೆ ಬಂದು ಬೆನಾಮಿ ಸೈಟ್ ಗಳನ್ನು ಹಿಡಿದು ಹಾಗೋ ಹೀಗೋ ಮಾಡಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿ ಕೊಂಡು ಊರ್ ತುಂಬಾ ಮನೆಗಳ್ ಕಟ್ಟಿದ್ದೀವಿ ಅಂತ ಹೀಗಾ ಮಾಡೋದು (ಎಲ್ಲರೂ ಅಲ್ಲ..... ಕೆಲವರು ). ? ಈ ಮಿಡ್ಲ್ ಕ್ಲಾಸ್ ಪ್ಯಾಮಿಲಿ ಪರದಾಟ ಸಾಯೋವರೆಗೂ ತಪ್ಪಿದ್ದಲ್ಲ ಎನಂತೀರಾ?

No comments: