Thursday, 5 December 2013

ಕಾವೇರಿ ನೀ ಕನ್ನಡತಿ

ಕಾವೇರಿ ನೀ ಕನ್ನಡತಿ
ಕಾವೇರಿದ ಕಾವೇರಿ ಕಾವು
ಸುಪ್ರಿಂ ಕೋರ್ಟ್ ನ ಆಧೇಶ ಸಂಧಿ
ತಮಿಳುನಾಡಿಗೆ ಆಗಮ ಸಂಧಿ
ಕರುನಾಡಿಗೆ ಲೋಪಸಂಧಿ

ಶತಮಾನಗಳಿಂದ ನಡೆದಿದೆ ಶೋಷಣೆ
ಕನ್ನಡಿಗರಿಗರ ಪಾಲಿಗೇಕೆ ಮಲತಾಯಿ ಧೋರಣೆ ?
ಕೆಣಕದಿರಿ ಕನ್ನಡಿಗರ ಸಹನೆ
ಕಾವೇರಿ ಬರೀ ನೀರಲ್ಲ ಕನ್ನಡಿಗರ ಭಾವನೆ

ಜನನಾಯಕರಿಗೆ ಬೇಕು ಅಧಿಕಾರ
ಓಟ್ ಬ್ಯಾಂಕ್ ಮಾಡಿಕೊಳ್ಳುವ ಸರ್ಕಾರ
ನಮಗೆಲ್ಲಿ ಕೊಡುವುದು ಸಹಕಾರ?
ಸೆಂಟ್ರಲ್ ನಿಂದ ಸ್ಟೇಟ್ ವರೆಗೂ ತುಂಬಿದೆ ಭ್ರಷ್ಟಾಚಾರ
ಮುಗಿಲು ಮುಟ್ಟಿದೆ ನೀರಿಗಾಗಿ ಅಹಾಕಾರ
ಹೊರಾಟ ಒಂದೇ ಇದಕ್ಕೆ ಪರಿಹಾರ

ಎರಡೂ ನಿಮ್ಮ ಕಂಗಳೇ
ಕನ್ನಡಿಗರ ಕಣ್ಣಿಗೇಕೆ ಸುಣ್ಣದ ಮಳೆ
ಕಾವೇರಿ ಕನ್ನಡನಾಡಿನ ಜೀವನಾಡಿ
ಕಾವೇರಿ ಸಮಸ್ಯೆ
ಆಗದಿರಲಿ ಸಯಲೋಲ್ಲದ ಬದುಕಲೋಪ್ಪದ ಸಯಾಮಿ ಜೋಡಿ

No comments: