Friday, 6 December 2013

ಕನಸ ಕಾನನ -

ಕನಸ ಕಾನನದಲ್ಲಿ ಕಂಡೆನು
ನಿನ್ನನು
ಕಾಣದೆ ಕಾಡುವ ಕನಸುಗಾರನೆ
ಕನಸೊಡೆದು ಕಣ್ಬಿಡಲು ಕರಗಿತು
ಕಣ್ ಕಾಡಿಗೆ ಕಾಣದೆ ನಿನ್ನನ್ನು ನನ್ನವನೇ
ಕಲ್ಪನೆಯ ಕನವರಿಕೆ ನನಸಾಗದೇ ಹೋಯ್ತು
ಕಣ್ಣುಗಳು ಕಣ್ಣೀರ ಕಲ್ಯಾಣಿಯಾಯ್ತು
ಕಣ್ಣ ಕನ್ನಡಿಯಲ್ಲಿ ಕಾಣದೆ ನಿನ ಬಿಂಬ
ನಾ ಕಂಡ ಕನಸು ಕಹಿ ಕವನವಾಯ್ತು

ಕರುಣೆಯಾ ಕಡಲಲ್ಲಿ ಕೊಚ್ಚಿ ಹೋಗಲಾರೆ
ಕನಿಕರದ ಕೂಪದಲಿ ಮುಳುಗಲಾರೆ
ಕಲ್ಮಶ ರಹಿತ ಪ್ರೀತಿಗೆ ಕರಗದೆ ಇರಲಾರೆ
ಕರ್ಪೂರದಂತೆ ಕರ್ಪೂರದಂತೆ

No comments: