Saturday, 14 December 2013

ಸವಿ ಸಂಜೆ

ವರುಷ ಹಿಂದಿನ ಕವಿತೆ (೨೦೧೨)
ಸಂಜೆಯ ಸಮಯದಲಿ ಸಂಗಾತಿ ಸನಿಹದಲಿ
ಸಮಯ ಸರಿಯಿತು ಸದ್ದಿಲ್ಲದೆ
ಸೊಗಸುಗಾರನ ಸಾನಿಧ್ಯದಲಿ
ಸೋತಿತು ಹೃದಯ ಅರಿವಿಲ್ಲದೆ

ಸಣ್ಣ ಸನ್ನೆಯಲಿ ಸಲ್ಲಾಪ ನಡೆದಿತ್ತು
ಸಂಸಾರ ಸಂಪುಟಕೆ ಸಹಿ ಎರಡಾಗಿತ್ತು
ಸ್ವರ್ಗವೆ ಕ್ಷಣದೊಳು ಇಳೆಗೆ ಇಳಿದಿತ್ತು
ಸಖನೊಲಿದ ಸಖಿ ಬಾಳು ಸಾರ್ಥಕವೆನಿಸುತ್ತು

ಸ್ವಪ್ನವೊ ಸ್ವರ್ಗವೊ ತಿಳಿಯದಾಗಿದೆ
ಸಾಲು ಸಾಲುಗಳು ಸಾಲದಾಗಿದೆ
ಸಖನ ಸಂಪ್ರೀತಿಯ ಬಣ್ಣಿಸಲು

ಸಪ್ತಪದಿಯ ಜೊತೆಗಾರ
ಸಿಂಧೂರ ಸಿರಿಯ ಸರದಾರ
ಒಲವ ಮಂದಿರದ ಸಾಹುಕಾರ
ನಿನಗೆ ಸಮರ್ಪಿಸುವೆ ಈ ಸಾಲುಗಳ




No comments: