ಇದು ನಾ ಬರೆದ ಮೊದಲ ಕವಿತೆ ( ಬಹುಶಃ ೨೦೧೨)
ಓ ನನ್ನ ನೆನಪೆ ನನ್ನ ಕಾಡುವೆ ಹೀಗೇಕೆ?
ಇಬ್ಬನಿಯ ಹೊಳಪೇ ನೀ ಮರೆಯಾದೆ ಏಕೆ?
ಹೃದಯಾಂತರಾಳದಲಿ ನೀ ಸ್ಥಳ ಹಿಡಿದು ಕೂತೆ
ಮರೆಯಲಾರದೆ ನಿನ್ನ ನಾ ಬಾಳಲ್ಲಿ ಸೋತೆ
ಕಾಡುವುದು ನಿನ್ನ ಹಠ, ನಿನ್ನ ನೆನಪೆ ನನ್ನ ಚಟ
ಇದೇ ನನ್ನ ಪರಿಪಾಠ ಇದೇ ನನ್ನ ಪರಿಪಾಠ
ಓ ನನ್ನ ನೆನಪೆ ನನ್ನ ಕಾಡುವೆ ಹೀಗೇಕೆ?
ಕಾಯಲೆ ನಿನಗಾಗಿ ಅದು ಸಿಹಿಯಾದ ನೋವು
ಕಾಯಲಾರೆನು ಇನ್ನು ಬರದೇಕೆ ಸಾವು
ನೀನಿಲ್ಲದ ಬಾಳು ಕಹಿಯಾದ ಬೇವು, ಕಹಿಯಾದ ಬೇವು
ಓ ನನ್ನ ನೆನಪೇ ನನ್ನ ಕಾಡುವೆ ಹೀಗೇಕೆ?
ಮರೆಯಲೆಂದರೆ ನಿನ್ನ ಅದು ಬಹಳ ಕಠಿಣ
ಅದಕ್ಕಿಂತ ಮಿಗಿಲು ಈ ನನ್ನ ಮರಣ
ಈ ಮನದ ತಳಮಳಕೆ ನೀನೇನೆ ಕಾರಣ ನೀನೇನೆ ಕಾರಣ
ಮರೆಯಲೇ ಕಾಯಲೆ ನೀ ಹೇಳೆ ಒಲವೆ
ನೀನೆಂದು ಬರುವೆ ಈ ಎದೆಯ ಗುಡಿಗೆ ನೀ ಹೇಳೆ ಒಲವೆ
//ನಂದಿನಿ//
ಇಬ್ಬನಿಯ ಹೊಳಪೇ ನೀ ಮರೆಯಾದೆ ಏಕೆ?
ಮರೆಯಲಾರದೆ ನಿನ್ನ ನಾ ಬಾಳಲ್ಲಿ ಸೋತೆ
ಕಾಡುವುದು ನಿನ್ನ ಹಠ, ನಿನ್ನ ನೆನಪೆ ನನ್ನ ಚಟ
ಇದೇ ನನ್ನ ಪರಿಪಾಠ ಇದೇ ನನ್ನ ಪರಿಪಾಠ
ಓ ನನ್ನ ನೆನಪೆ ನನ್ನ ಕಾಡುವೆ ಹೀಗೇಕೆ?
ಕಾಯಲಾರೆನು ಇನ್ನು ಬರದೇಕೆ ಸಾವು
ನೀನಿಲ್ಲದ ಬಾಳು ಕಹಿಯಾದ ಬೇವು, ಕಹಿಯಾದ ಬೇವು
ಓ ನನ್ನ ನೆನಪೇ ನನ್ನ ಕಾಡುವೆ ಹೀಗೇಕೆ?
ಅದಕ್ಕಿಂತ ಮಿಗಿಲು ಈ ನನ್ನ ಮರಣ
ಈ ಮನದ ತಳಮಳಕೆ ನೀನೇನೆ ಕಾರಣ ನೀನೇನೆ ಕಾರಣ
ಮರೆಯಲೇ ಕಾಯಲೆ ನೀ ಹೇಳೆ ಒಲವೆ
ನೀನೆಂದು ಬರುವೆ ಈ ಎದೆಯ ಗುಡಿಗೆ ನೀ ಹೇಳೆ ಒಲವೆ
No comments:
Post a Comment