Tuesday, 17 December 2013

ನನ್ನ ಕಣ್ಣ ಕನ್ನಡಕ


ಮಿಡಿಯಿತು ನನ್ನ ಕಣ್ಣ ಕನ್ನಡಕ

ಕನ್ನಡಕ ನೀ ನನ್ನ ಕಣ್ಣ ಅಪ್ಪಿದಂದು
ಕಡೆಗಾಣಿಸಿದೆ ನಿನ್ನ ಅನಿಷ್ಠವೆಂದು
ಕಣ್ಣು ಸುತ್ತ ಕಪ್ಪು ಕಲೆ ತಂದು
ಅಂದಗೆಡಿಸುವ ಕರ್ಮಕಾಂಡ ನೀನೆಂದು

ಕಡೆಮನೆಯ ಮಕ್ಕಳು ಸೋಡ ಎಂದು ರೇಗಿಸಲು
ಕೋಪದಲಿ ಮುರಿದಿದ್ದೆ ನಾ ನಿನ್ನ ಕೀಲು
ಅಪರೂಪಕೆ ಸಿಕ್ಕ ಗೆಳೆಯರು ವಿಚಾರಿಸದೆ ಕುಶಲೋಪರಿ
"ನಿನ್ನ ಕಣ್ಣಿಗೂ ಕನ್ನಡಕ ಬಂತ?!" ಎನ್ನಲು ಮನಸಿಗೆ ಕಿರಿಕಿರಿ.....
ದ್ವೇಷಿಸಿದೆ ನಿನ್ನ, ಸರ್ವ ಸಮಾರಂಭಗಳಿಗೂ ನಿಷೇಧಹೇರಿ

ಒಮ್ಮೆ ಕಛೇರಿಗೆ ಹೋದೆ ನಿನ್ನ ಮನೆಯಲ್ಲೆ ಬಿಟ್ಟು
ಟೈಪಿಂಗ್ ಮಿಸ್ಟೇಕು ಮಾಡಿತ್ತು ಬಾರಿ ಎಡವಟ್ಟು
ಅದರಿಂದ ಆಫೀಸರಿಗೆ ನೆತ್ತಿಗೇರಿತ್ತು ಸಿಟ್ಟು
ಕಡೆಗೆ ನನ್ನ ನೌಕರಿಗೆ ಬಿತ್ತು ಬಾರಿ ಪೆಟ್ಟು
ನಿನ್ನ ಮಹತ್ವದರಿವಾಗಿ ಹೊಡೆಯಲೆ ಬೆಕಾಯ್ತು ನಾ ಸಲ್ಯೂಟು

ಜೀವವಿರದಿದ್ದರೂ ನನ್ನ ಕಣ್ಣಿಗೆ ಜೀವ ತುಂಬಿದೆ ನೀ ನನ್ನ ಕನ್ನಡಕ
ಕತ್ತಲಲ್ಲಿ ಕೈ ಹಿಡಿದು ನನ್ನ ಕಣ್ಣ ಕಣ್ಣಾಗಿ ಕಾಪಾಡಿದೆ ನೀ ಸುಲೋಚನಕ್ಕ
ನಿನ್ನ ಕೇವಲ ಕೃತಕವೆಂದ ನನಗೂ ತೋರಿದೆ ಸಹಾನುಬೂತಿ
ನನ್ನ ತಪ್ಪುಗಳನ್ನು ಮನ್ನಿಸಿ ನೀನಾದೆ ನನ್ನ ಬಾಳ ಸಂಗಾತಿ
ಕ್ಷಮಿಸು ಕ್ಷಮಿಸಿನ್ನ ನನ್ನ ಕಣ್ಣ ಹಣತಿ

No comments: