ಭವಸಮುದ್ರದ ಆಳಕೆ ದುಮುಕಿ
ನಿನ್ನ ಪ್ರೀತಿಯ ಮುತ್ತನು ಹುಡುಕಿ
ಮುತ್ತಿಗೆ ಮುತ್ತಿನ ಮಾಲೆಯ ಹಾಕಿ
ಮಾಡಿಕೊ ನಿನ್ನ ಪ್ರಾಣ ಸಖಿ
ಬದುಕ ದೋಣಿಗೆ ಒಲವ ಹುಟ್ಟು ಹಾಕಿ
ಸಾಗಿರಲು ಜೀವನ ಯಾರುಂಟು ನಿನಗೆ ಸರಿ ಸುಖಿ?
ನಾನಾಗಲೇನು ಆ ಪ್ರೀತಿ ಮುತ್ತು
ಕಾಯಲಾರೆನು ಇನ್ನು ನಾ ಹೆಚ್ಚು ಹೊತ್ತು
ಸತ್ಕರಿಸು ನನ್ನ ಸಮ್ಮತಿಯನಿತ್ತು
ಕನಸುಗಳ ತುಂಬೆಲ್ಲ ನಿನ್ನ ನೆನಪುಗಳ ಬಿತ್ತು
ಕಾಯುವ ಕಣ್ಣಿನ ಕಾತುರ ಕರಗಿಸಿ
ಕತ್ತಲು ಕವಿದ ಮನವ ಬೆಳಗಿಸಿ
ಮೌನ ಮುರಿಯದೆ ಮಾತನಾಡಿಸಿ
ನಿನ್ನ ಪ್ರೀತಿಯ ಮುತ್ತನು ಹುಡುಕಿ
ಮುತ್ತಿಗೆ ಮುತ್ತಿನ ಮಾಲೆಯ ಹಾಕಿ
ಮಾಡಿಕೊ ನಿನ್ನ ಪ್ರಾಣ ಸಖಿ
ಬದುಕ ದೋಣಿಗೆ ಒಲವ ಹುಟ್ಟು ಹಾಕಿ
ಸಾಗಿರಲು ಜೀವನ ಯಾರುಂಟು ನಿನಗೆ ಸರಿ ಸುಖಿ?
ನಾನಾಗಲೇನು ಆ ಪ್ರೀತಿ ಮುತ್ತು
ಕಾಯಲಾರೆನು ಇನ್ನು ನಾ ಹೆಚ್ಚು ಹೊತ್ತು
ಸತ್ಕರಿಸು ನನ್ನ ಸಮ್ಮತಿಯನಿತ್ತು
ಕನಸುಗಳ ತುಂಬೆಲ್ಲ ನಿನ್ನ ನೆನಪುಗಳ ಬಿತ್ತು
ಕಾಯುವ ಕಣ್ಣಿನ ಕಾತುರ ಕರಗಿಸಿ
ಕತ್ತಲು ಕವಿದ ಮನವ ಬೆಳಗಿಸಿ
ಮೌನ ಮುರಿಯದೆ ಮಾತನಾಡಿಸಿ
No comments:
Post a Comment